ಕಾರವಾರ:ನಂದನಗದ್ದಾ ಮೀನು ಮಾರುಕಟ್ಟೆಯ ಅವ್ಯವಸ್ಥೆಯ ಕುರಿತು ಬಂದ ದೂರಿನನ್ವಯ ಶಾಸಕ ಸತೀಶ ಸೈಲ್ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.ಮೀನು ಮಾರುಕಟ್ಟೆ ನವೀಕರಿಸಿ ಹೆಚ್ಚಿನ ಸೌಲಭ್ಯ ಒದಗಿಸಬೇಕೆಂದು ಮೀನು ಮಾರಾಟ ಮಹಿಳೆಯರು ಶಾಸಕರನ್ನು ಒತ್ತಾಯಿಸಿದರು.ಮೀನು ಮಾರುಕಟ್ಟೆಯನ್ನು ಎಲ್ಲಾ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸುವ ರೂಪರೇಷೆಗಳನ್ನು ಸದ್ಯದಲ್ಲಿಯೇ ಸಿದ್ದಪಡಿಸಲಾಗುವದು ಎಂದು ಶಾಸಕ ಸತೀಶ ಸೈಲ್ ಮೀನುಗಾರ ಮಹಿಳೆಯನ್ನು ಸಂತೈಸಿದರು. ಶಾಸಕರೊಂದಿಗೆ … [Read more...] about ಮೀನು ಮಾರುಕಟ್ಟೆಯ ಅವ್ಯವಸ್ಥೆ;ಭೇಟಿ ನೀಡಿದ ಶಾಸಕರು
ಮನವಿ
ವರಿಯಾದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವದು;ಕೆಪಿಸಿ ಅಧಿಕಾರಿಗಳ ಮನವಿ
ಕಾರವಾರ;ಕಾಳಿನದಿ ಯೋಜನೆ 2ನೇ ಹಂತ ಕದ್ರಾ ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವದರಿಂದ ವರಿಯಾದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವದು. ಹೀಗಾಗಿ ಸಾರ್ವಜನಿಕರು ತಮ್ಮ ಜನ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕು ಎಂದು ಕೆಪಿಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕದ್ರಾ ಜಲಾಶಯದ ಗರಿಷ್ಟ ಮಟ್ಟವು 34.50 ಮೀಟರಗಳಾಗಿದ್ದು, ಇಂದಿನ ಜಲಾಯನ ಮಟ್ಟ … [Read more...] about ವರಿಯಾದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವದು;ಕೆಪಿಸಿ ಅಧಿಕಾರಿಗಳ ಮನವಿ
ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ, ಪೊಲೀಸ್ ವರಿಷ್ಠರಿಗೆ ಮನವಿ
ಕಾರವಾರ:ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೊನ್ನಾವರದ ಮುಹಮ್ಮದ್ ಹನೀಫ್ ಕೊಚ್ಚುಭಾವ್ ಎಂಬಾತರು ಗುರುವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ. 2016ರ ಅಗಷ್ಟನಲ್ಲಿ ಕಾರವಾರ ಪೊಲೀಸರು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಮುಹಮ್ಮದ್ ತೌಫೀಕ್ (23)ರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದರಿಂದ ಆತ ಮೃತ ಪಟ್ಟಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಬಂಧನದ ನಂತರ ಕರೆ ಮಾಡಿದ ಪೊಲೀಸರು … [Read more...] about ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ, ಪೊಲೀಸ್ ವರಿಷ್ಠರಿಗೆ ಮನವಿ
ಗೋ ಶಾಲೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರುನಾಡ ರಕ್ಷಣಾ ವೇದಿಕೆಯವರಿಂದ ಮನವಿ
ಕಾರವಾರ:ಕಣಸಗಿರಿಯ ಸರ್ವೇ ನಂ. 95ರ ಗೋಮಾಳ ಜಾಗದಲ್ಲಿ ಗೋ ಶಾಲೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರುನಾಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್‍ಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಕಾರವಾರ ತಾಲೂಕಿನಲ್ಲಿ ದನ ಕರುಗಳು ವೀಪರಿತವಾಗಿ ಹೆಚ್ಚಿದೆ. ರಸ್ತೆಗಳ ಮೇಲೆ ಹೆಚ್ಚಾಗಿ ನಿಂತಿರುವುದರಿಂದ ರಸ್ತೆ ಸಂಚಾರಿಗಳಿಗೆ ಅಪಘಾತವಾಗುವ ಸಂಭವವಿದೆ. ರಾತ್ರಿ ವೇಳೆಯು ರಸ್ತೆಯ ಮೇಲೆ ದನಗಳು ನಿಲ್ಲುವುದರಿಂದ ಸಂಚಾರಕ್ಕೆ … [Read more...] about ಗೋ ಶಾಲೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರುನಾಡ ರಕ್ಷಣಾ ವೇದಿಕೆಯವರಿಂದ ಮನವಿ
ಗುತ್ತಿಗೆ ಪೌರ ಕಾರ್ಮಿಕರಿಂದ ಮುಖ್ಯಮಂತ್ರಿಗಳಿಗೆ ಮನವಿ
ದಾಂಡೇಲಿ:ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರು, ಚಾಲಕರು, ನೀರು ಸರಬರಾಜು ಮತ್ತಿತರ ವಿಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗುತ್ತಿಗೆದಾರರ ಶೋಷಣೆಯಿಂದ ಮುಕ್ತಗೊಳಿಸಿ ನೇರವಾಗಿ ನಗರ ಸ್ಥಳೀಯ ಸಂಸ್ಥೆಗಳೇ ವೇತನ ಪಾವತಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಜಂಟಿ ಕಾರ್ಮಿಕ ಸಂಘಟನೆಗಳ ನೇರ್ತತ್ವದಲ್ಲಿ ಕೆಲಸ ನಿಲ್ಲಿಸಿ ಜೂನ್ 12 ರಿಂದ ಆರಂಭವಾಗಿರುವ ಪ್ರತಿಭಟನೆಯ ಭಾಗವಾಗಿ ದಾಂಡೇಲಿಯಲ್ಲಿ ಗುತ್ತಿಗೆ ಪೌರ ಕಾರ್ಮಿಕರು … [Read more...] about ಗುತ್ತಿಗೆ ಪೌರ ಕಾರ್ಮಿಕರಿಂದ ಮುಖ್ಯಮಂತ್ರಿಗಳಿಗೆ ಮನವಿ