ಹೊನ್ನಾವರ;ಹಾಲು ತರಲು ಮನೆಗೆ ಬಂದ ಯುವತಿಯ ಮೇಲೆ ಬಲತ್ಕಾರವೆಸಗಿದ ಪ್ರಕರಣ ಹೊನ್ನಾವರ ತಾಲೂಕಿನ ಕವಲಕ್ಕಿಯ ಪ್ಲಾಟ್‍ಕೇರಿಯಲ್ಲಿ ನಡೆದಿದ್ದು ಈ ಕುರಿತು ಪೋಲಿಸರಿಗೆ ಬಲತ್ಕಾರಕ್ಕೊಳಗಾದ ಯುವತಿಯ ತಾಯಿ ದೂರು ನೀಡಿದ್ದಾರೆ. ಕವಲಕ್ಕಿ ಪ್ಲಾಟ್‍ಕೇರಿಯ ಸುಬ್ರಹ್ಮಣ್ಯ(ಸುಬ್ಬಾ) ಶೆಟ್ಟಿ(29) ಈ ಪ್ರಕರಣದ ಆರೋಪಿಯಾಗಿದ್ದಾನೆ. ಪ್ಲಾಟ್‍ಕೇರಿಯ ನಿವಾಸಿಯಾದ ಯುವತಿಯ ತಾಯಿ ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ. 21 ವರ್ಷದ ಮಗಳು ಸಂಜೆ ವೇಳೆ ಆರೋಪಿತನ ಮನೆಯಿಂದ ಹಾಲು ತರಲು … [Read more...] about ಬಲಾತ್ಕಾರ :ಆರೋಪಿ ಬಂಧನ
ಮನೆ
ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ
ಕಾರವಾರ:ಶಿರವಾಡ ಯುವಕನೊಬ್ಬ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಗಾರಪ್ಪನಗರದ ನಿವಾಸಿ ಪರಶುರಾಮ ಗೋಪಾಲ ವಡ್ಡರ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಈತನ ವಿರುದ್ಧ ಗೋವಾ ಹಾಗೂ ಕಾರವಾರ ಗ್ರಾಮೀಣ ಠಾಣೆಯಲ್ಲಿ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿವೆ ಎನ್ನಲಾಗಿದೆ. ಹೀಗಾಗಿ ನ್ಯಾಯಾಲಯದಿಂದ ವಿವಿಧ ಕೇಸುಗಳ ವಾರಂಟ್ ಸಹ ಜಾರಿಯಾಗಿತ್ತು. ಇದರಿಂದ ಜಿಗುಪ್ಸೆ ಹೊಂದಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು … [Read more...] about ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ
ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ
ಹೊನ್ನಾವರ:ತಾಲೂಕಿನ ಕರ್ಕಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬುದ್ಧಿಮಾಂದ್ಯ ಅಪ್ರಾಪ್ತೆ ಬಾಲಕಿಯ ಮೇಲೆ ನಿರಂತರ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿಯನ್ನಾಗಿಸಿ ಘಟನೆ ಬೆಳಕಿ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿಯನ್ನು ಮಂಗಳವಾರ ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿ (52) ಈತ ಕರ್ಕಿಯ ಮೀನು ಮಾರ್ಕೇಟ್ ಸಮೀಪ ನ್ಯೂ ರೂಪ್ ಎಂಬ ಹೆಸರಿನ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದ. … [Read more...] about ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ
ಪ್ರಥಮಬಾರಿಗೆ ಪ್ರವೇಶಿಸಿದ ಬಸ್
ಹೊನ್ನಾವರ:ಹೊನ್ನಾವರ ಪಟ್ಟಣದಿಂದ 34ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ ಗೇರುಸೊಪ್ಪಾದಿಂದ 7ಕಿ.ಮೀ ಮಹಿಮೆಗೆ ಇಂದಿನಿಂದ ದಿನಕ್ಕೆರಡು ಬಾರಿ ಸಾರಿಗೆ ಸಂಸ್ಥೆಯ ಬಸ್ ಆರಂಭವಾಗಿದೆ. ಊರನ್ನು ಪ್ರಥಮಬಾರಿಗೆ ಪ್ರವೇಶಿಸಿದ ಬಸ್‍ಗೆ ಜನ ಹೂಹಾರ ಹಾಕಿ, ಕಾಯಿ ಒಡೆದು, ಸಿಹಿ ಹಂಚಿದ್ದು, ಆ ಭಾಗದ ಜನರ ಸಂಭ್ರಮ ಹೇೀಳತೀರದಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ಮೇಲೆ 250 ಮನೆಗಳುಳ್ಳ ಈ ಮಹಿಮೆ ಗ್ರಾಮಕ್ಕೆ ಸಾಧಾರಣ ಕಚ್ಚಾ ರಸ್ತೆಯಾಗಿದ್ದು, ಶಾಸಕ ಮಂಕಾಳು ವೈದ್ಯ, … [Read more...] about ಪ್ರಥಮಬಾರಿಗೆ ಪ್ರವೇಶಿಸಿದ ಬಸ್
ನಗರ ಸಭೆಯ ಇತಿಹಾಸದಲ್ಲೆ ಭಾರಿ ಪ್ರಮಾಣದಲ್ಲಿ ಅತಿಕ್ರಮಣ,ಕಳಂಕ ತರುತ್ತಿರುವ ಸಾಳೊಂಕೆಯವರ ಆಡಳಿತ
ದಾಂಡೇಲಿ :ಜಿಲ್ಲೆಯ ಮೊದಲ ನಗರ ಸಭೆ ಎಂಬ ಶ್ರೇಯಸ್ಸನ್ನು ಹೊಂದಿರುವ ದಾಂಡೇಲಿ ನಗರ ಸಭೆ ಇತ್ತೀಚಿನ ವರ್ಷಗಳಲ್ಲಂತೂ ಹಲವಾರು ಎಡವಟ್ಟುಗಳ ಮೂಲಕ ನರಕ ಸಭೆಯಾಗಿ ಮಾರ್ಪಡುತ್ತಿರುವುದರ ಜೊತೆಗೆ ಸಚಿವ ದೇಶಪಾಂಡೆಯವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿರುವುದಕ್ಕೆ ನಗರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.ಕಾನೂನನ್ನು ಪಾಲಿಸಬೇಕಾದ ನಗರ ಸಭೆ ಕಾನೂನುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದೆ ಹಲವಾರು ಅದ್ವಾನಗಳಿಗೆ ಕಾರಣವಾಗಿದೆ. ಹಿರಿಯ … [Read more...] about ನಗರ ಸಭೆಯ ಇತಿಹಾಸದಲ್ಲೆ ಭಾರಿ ಪ್ರಮಾಣದಲ್ಲಿ ಅತಿಕ್ರಮಣ,ಕಳಂಕ ತರುತ್ತಿರುವ ಸಾಳೊಂಕೆಯವರ ಆಡಳಿತ