ಕಾರವಾರ:
ಶಿರವಾಡ ಯುವಕನೊಬ್ಬ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಂಗಾರಪ್ಪನಗರದ ನಿವಾಸಿ ಪರಶುರಾಮ ಗೋಪಾಲ ವಡ್ಡರ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಈತನ ವಿರುದ್ಧ ಗೋವಾ ಹಾಗೂ ಕಾರವಾರ ಗ್ರಾಮೀಣ ಠಾಣೆಯಲ್ಲಿ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿವೆ ಎನ್ನಲಾಗಿದೆ. ಹೀಗಾಗಿ ನ್ಯಾಯಾಲಯದಿಂದ ವಿವಿಧ ಕೇಸುಗಳ ವಾರಂಟ್ ಸಹ ಜಾರಿಯಾಗಿತ್ತು.
ಇದರಿಂದ ಜಿಗುಪ್ಸೆ ಹೊಂದಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಪರಶುರಾಮನ ತಾಯಿ ಶಾಂತವ್ವ ವಡ್ಡರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment