ಕಾರವಾರ;ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ (ವಿಮಾ) ಯೋಜನೆಯನ್ನು ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಭತ್ತ, ಮುಸುಕಿನ ಜೋಳ, ಹತ್ತಿ, ಮತ್ತು ನೀರಾವರಿ ಭತ್ತ ಬೆಳೆಗಳಿಗೆ ಮಾತ್ರ ವಿಮಾ ಸೌಲಭ್ಯವನ್ನು ಮುಂದುವರಿಸಲಾಗಿದೆ. ಭತ್ತ (ಮಳೆಯಾಶ್ರಿತ) ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ ಗೆ ವಿಮಾ ಮೊತ್ತ 54000.00 ರೂ ಹಾಗೂ ವಿಮಾ ಕಂತು 1080.00 ರೂ. ಭತ್ತ (ನೀರಾವರಿ) ವಿಮಾ ಮೊತ್ತ 85000.00 ರೂ ಮತ್ತು ವಿಮಾ ಕಂತು 170.00 … [Read more...] about ಪ್ರಧಾನಮಂತ್ರಿ ಫಸಲ್ (ವಿಮಾ) ಯೋಜನೆ
ಯೋಜನೆ
ನೆನೆಗುದಿಗೆ ಬಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ಕಾರವಾರ:ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೋಟೆಗಾಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವಿಫಲತೆಯಿಂದಾಗಿ ಇಂದು ತಾಲೂಕಿನ ಅಸ್ನೋಟಿ ಗ್ರಾಪಂ, ಮುಡಗೇರಿ ಪಂಚಾಯತ್ ಭಾಗದ ಜನರು ಹನಿ ನೀರಿಗೂ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಗೋಟೆಗಾಳಿ ಕುಡಿಯುವ ನೀರಿನ ಯೋಜನೆಯಿಂದ ತಾಲೂಕಿನ ಸಾಕಷ್ಟು ಭಾಗಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಆದರೆ ಅಸ್ನೋಟಿ, ಮುಡಗೇರಿ ಪಂಚಾಯತ್ ವ್ಯಾಪ್ತಿಯ ವಿವಿಧ ಟ್ಯಾಂಕ್‍ಗಳಿಗೆ ಬರುವ ಕುಡಿಯುವ ನೀರು ಸೋರಿಕೆಯಿಂದಾಗಿ ಜನರು … [Read more...] about ನೆನೆಗುದಿಗೆ ಬಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ಗ್ರಾಮೀಣ ಉದ್ಯೋಗ ಮೇಳ ಉದ್ಘಾಟನೆ
ಕಾರವಾರ:ಜ್ಞಾನ, ವಿರ್ಶವಾಸ, ಪರಿಶ್ರಮ ಹಾಗೂ ಶಿಸ್ತಿನಿಂದ ಯಶಸ್ಸು ಸಿಗುತ್ತದೆ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಆರ್.ಜಿ. ನಾಯಕ ಹೇಳಿದರು. ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ತರಬೇತಿ ಸಂಸ್ಥೆ ಸಹಯೋಗತ್ವದಲ್ಲಿ ನಡೆದ ತಾಲೂಕು ಮಟ್ಟದ ಗ್ರಾಮೀಣ ಯುವಕ ಯುವತಿಯರಿಗೆ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು. ಸ್ಥಳೀಯವಾಗಿ … [Read more...] about ಗ್ರಾಮೀಣ ಉದ್ಯೋಗ ಮೇಳ ಉದ್ಘಾಟನೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೈಪಿಡಿ ಬಿಡುಗಡೆ
ಕಾರವಾರ:ವಿವಿಧ ಸಾಮಾಜಿಕ ಅಭಿವೃದ್ದಿಗಾಗಿ ದುಡಿಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೂ ಈ ಬಾರಿ ನಾಲ್ಕು ಕೆರೆಗಳ ಅಭಿವೃದ್ದಿ ಕೆಲಸವನ್ನು ನಡೆಸಲಿದೆ ಎಂದು ಯೋಜನೆಯ ನಿರ್ದೇಶಕ ಲಕ್ಷ್ಮಣ ಎಂ ಹೇಳಿದರು. ಮಂಗಳವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಯೋಜನೆಯ ಪೃಗತಿಯ ಬಗ್ಗೆ ವಿವರಿಸಿದರು. ಈ ವರ್ಷ ನಾಲ್ಕು ಕೆರೆಗಳ ಹೂಳು ತೆಗೆಯುವ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು … [Read more...] about ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೈಪಿಡಿ ಬಿಡುಗಡೆ
ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಹಳಿಯಾಳ:ಯಾವ ವರ್ಗದವರು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಪ್ರತಿಯೊಬ್ಬ ಮಗು ಶಿಕ್ಷಣ ಪಡೆಯಬೇಕು ಎಂಬ ಸದಿಚ್ಚೆಯೊಂದಿಗೆ ರಾಜ್ಯ ಸರ್ಕಾರ ಸಾಕಷ್ಟು ನೂತನ ಯೋಜನೆಗಳೊಂದಿಗೆ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಹಾಗೂ ಅನೇಕ ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಣಾ ಗೌರವ, ಸ್ಥಾನಮಾನ … [Read more...] about ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ