ಹಳಿಯಾಳ: ಪಟ್ಟಣದಿಂದ ಕೇವಲ 5 ಕೀಮಿ ಅಂತರದಲ್ಲಿರುವ ನೀರಲಗಾ ಗ್ರಾಮದಲ್ಲಿ ಮಾರಣಾಂತಿಕ ಡೆಂಘ್ಯು ಜ್ವರಕ್ಕೆ ಶಾಲಾ ವಿದ್ಯಾರ್ಥಿನಿಯೋರ್ವಳು ಅಸುನಿಗಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಠಿಸಿದೆ. ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅಪೂರ್ವಾ ವಿಷ್ಣು ಕೊಲೆಕರ(11) ಡೆಂಘ್ಯೂ ಜ್ವರಕ್ಕೆ ಬಲಿಯಾಗಿರುವ ಮುಗ್ದ ಬಾಲಕಿಯಾಗಿದ್ದಾಳೆ. ಈಕೆಯ ತಂದೆ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದು. ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ್ದು … [Read more...] about ತೀವ್ರ ಜ್ವರದಿಂದ ಬಳಲಿ ಸಾವನ್ನಪ್ಪಿದ ವಿದ್ಯಾರ್ಥಿನಿ,ಡೆಂಘ್ಯೂಗೆ ಬಲಿಯಾಯಿತೇ ಜೀವ? ನೀರಲಗಾ ಗ್ರಾಮಸ್ಥರಲ್ಲಿ ಆತಂಕ
Trending
ಯುವಕರು ದುಷ್ಚಟಗಳಿಂದ ದೂರವಿರಬೇಕು , ಮಾದಕ ವಸ್ತುಗಳ ಸೇವನೆಗಳ ಬಗ್ಗೆ ಗ್ರಾಮ ಮಟ್ಟದಿಂದಲೇ ಜಾಗೃತಿ ಅಭಿಯಾನ ನಡೆಸಬೇಕು; ವಿಠ್ಠಲ ಎಸ್ ಧಾರವಾಡಕರ
ಹಳಿಯಾಳ:- ಮಾದಕ ವಸ್ತು ನಿಯಂತ್ರಿಸಲು ಸಮಗ್ರ ಕಾನೂನು ಜಾರಿಗೆ ತಂದರು ಸಹ ಮಾದಕ ಸೇವನೆ ಸಾರ್ವಜನಿಕ ಜೀವನದಲ್ಲಿ ಗಂಭಿರ ಸವಾಲಾಗಿ ಪರಿಣಮಿಸಿದೆ. ಯುವಕರು ಹೆಚ್ಚಾಗಿ ಮಾದಕ ಸೇವನೆಗೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರು ವ್ಯಸನ ಮುಕ್ತರಾಗಬೇಕು ಆ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದಲೇ ಜನ ಜಾಗೃತಿ ಮೂಡಿಸುವ ಕಾರ್ಯ ಸಂಘ-ಸಂಸ್ಥೆ ಸಾರ್ವಜನೀಕರಿಂದ, ಸಂಬಂಧಿಸಿದ ಇಲಾಖೆಗಳಿಂದ ಆಗಬೇಕಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಠ್ಠಲ ಎಸ್ ಧಾರವಾಡಕರ ಹೇಳಿದರು. … [Read more...] about ಯುವಕರು ದುಷ್ಚಟಗಳಿಂದ ದೂರವಿರಬೇಕು , ಮಾದಕ ವಸ್ತುಗಳ ಸೇವನೆಗಳ ಬಗ್ಗೆ ಗ್ರಾಮ ಮಟ್ಟದಿಂದಲೇ ಜಾಗೃತಿ ಅಭಿಯಾನ ನಡೆಸಬೇಕು; ವಿಠ್ಠಲ ಎಸ್ ಧಾರವಾಡಕರ
ಹಳಿಯಾಳದಲ್ಲಿ ಏರಟೆಲ್, ವೋಡಾಫೊನ್ ಇನ್ನಿತರ ನೆಟವರ್ಕ ಕಂಪೆನಿಗಳಿಂದ ದೋಖಾ ಅಸಮರ್ಥ ಸೇವೆ ಮೂಲಕ ಗ್ರಾಹಕರಿಗೆ ಮೋಸ- ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ
ಹಳಿಯಾಳ:- ಹಳಿಯಾಳ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಏರಟೆಲ್, ವೋಡಾಪೋನ, ಐಡಿಯಾ, ಬಿ.ಎಸ್.ಎನ್.ಎಲ್ ಕಂಪನಿಯವರು ವಿಶೇಷ ಕೊಡುಗೆ ಫುಲ್ ಟಾಕ್ ಟೈಮ್ ಯೋಜನೆಯಡಿಯಲ್ಲಿ ಗ್ರಾಹಕರಿಗೆ ತಿಂಗಳ,ಮೂರು ತಿಂಗಳ ಕರೆನ್ಸಿ ನೀಡಿ, ಸರಿಯಾದ ನೆಟ್‍ವರ್ಕ ನೀಡದೆ ಗ್ರಾಹಕರ ಸುಲಿಗೆ ಮಾಡುತ್ತಿದ್ದು. ಹಗಲಿನಲ್ಲೇ ಗ್ರಾಹಕರಿಗೆ ಮೋಸ ಮಾಡುತ್ತಿರುವ ಈ ಕಂಪೆನಿಗಳ ವಿರುದ್ದ ಕ್ರಮ ಜರುಗಿಸಿ ಗ್ರಾಹಕರಿಗೆ ನ್ಯಾಯ ಒದಗಿಸುವಂತೆ ಜಯ ಕರ್ನಾಟಕ ಸಂಘಟನೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ … [Read more...] about ಹಳಿಯಾಳದಲ್ಲಿ ಏರಟೆಲ್, ವೋಡಾಫೊನ್ ಇನ್ನಿತರ ನೆಟವರ್ಕ ಕಂಪೆನಿಗಳಿಂದ ದೋಖಾ ಅಸಮರ್ಥ ಸೇವೆ ಮೂಲಕ ಗ್ರಾಹಕರಿಗೆ ಮೋಸ- ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ
ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 18 ನೇ ರ‍್ಯಾಂಕ್ ಪಡೆದ ಹಳಿಯಾಳದ ಫಾಜಿಯಾ ಮಹ್ಮದ ಶೇಖ
ಹಳಿಯಾಳ:- ಇತ್ತೀಚೆಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಡೆಸಿದ ಎನ್.ಎಮ್.ಎಮ್.ಎಸ್ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ರಾಜ್ಯಕ್ಕೆ 18 ನೇ ರ‍್ಯಾಂಕ್ ಪಡೆಯುವ ಮೂಲಕ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿ ಫಾಜಿಯಾ ಮಹ್ಮದ ಉಮರ ಶೇಖ ಹಳಿಯಾಳ ತಾಲೂಕಿಗೆ ಹಾಗೂ ಉರ್ದು ಶಾಲೆಗೆ ಕೀರ್ತಿ ತಂದಿದ್ದಾಳೆಂದು ಶಾಲಾ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ ಈ ಪರೀಕ್ಷೆಯಲ್ಲಿ ಉರ್ದು ಶಾಲೆಯಿಂದ … [Read more...] about ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 18 ನೇ ರ‍್ಯಾಂಕ್ ಪಡೆದ ಹಳಿಯಾಳದ ಫಾಜಿಯಾ ಮಹ್ಮದ ಶೇಖ
ಹಳಿಯಾಳ ಪುರಸಭೆಯಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ – ವಿಪ ಸದಸ್ಯ ಎಸ್ ಎಲ್ ಘೊಟ್ನೇಕರ ಸೇರಿದಂತೆ ಆಡಳಿತಾರೂಢ ಕಾಂಗ್ರೇಸ್, ವಿರೋಧ ಪಕ್ಷದ ಸದಸ್ಯರಿಂದಲೂ ಆರೋಪ ಮುಖ್ಯಾಧಿಕಾರಿಗೆ ತನಿಖೆಗೆ ಆದೇಶಿಸಿದ ಎಮ್ ಎಲ್ ಸಿ ಘೊಟ್ನೆಕರ
ಹಳಿಯಾಳ : ಇಲ್ಲಿಯ ಪುರಸಭೆಯ ಆಶ್ರಯ ಮತ್ತು ಎಸ್ಸಿ ಎಸ್ಟಿ ವಿಭಾಗದ ಸಿಬ್ಬಂದಿಗಳು ಬಡ ಜನರಿಂದ ಒತ್ತಡ ಪೂರ್ವಕವಾಗಿ ಹಣವನ್ನು ಪಡೆಯುತ್ತಿದ್ದಾರೆ. ಅಲ್ಲದೇ ಈ ಕುರಿತು ಕೆಲ ಜನರು ಸಚಿವ ದೇಶಪಾಂಡೆ ಅವರಿಗೆ ದೂರು ಸಲ್ಲಿಸಿದ್ದು, ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಪೋಲಿಸರಿಗೆ ಎಫ್.ಐ.ಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಇದರ ಪರಿಣಾಮ ಕೆಲ ಸಿಬ್ಬಂದಿಯವರು ಶ್ರೀಮಂತರಾಗುತ್ತಿದ್ದು ಇದರ ಕುರಿತು ಮುಖ್ಯಾಧಿಕಾರಿಗಳು ವರದಿಯನ್ನು ಸಿದ್ದ ಪಡಿಸಿ ಅಂತಹ … [Read more...] about ಹಳಿಯಾಳ ಪುರಸಭೆಯಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ – ವಿಪ ಸದಸ್ಯ ಎಸ್ ಎಲ್ ಘೊಟ್ನೇಕರ ಸೇರಿದಂತೆ ಆಡಳಿತಾರೂಢ ಕಾಂಗ್ರೇಸ್, ವಿರೋಧ ಪಕ್ಷದ ಸದಸ್ಯರಿಂದಲೂ ಆರೋಪ ಮುಖ್ಯಾಧಿಕಾರಿಗೆ ತನಿಖೆಗೆ ಆದೇಶಿಸಿದ ಎಮ್ ಎಲ್ ಸಿ ಘೊಟ್ನೆಕರ



