ಹೊನ್ನಾವರ:
ತಾಲೂಕಿನ ಮಾವಿನಕುರ್ವೆಯ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಏ. 9 ರಿಂದ 12 ರವರೆಗೆ ನಡೆಯಲಿದೆ. ಏ. 9 ರಂದು ಬೆಳಿಗ್ಗೆ ಶ್ರೀ ಮಹಾರಥೋತ್ಸವ ಯಜ್ಞಾರಂಭ, ಬ್ರಾಹ್ಮಣ ಸಂತರ್ಪಣೆ, ರಾತ್ರಿ 9 ಗಂಟೆಗೆ ಗರುಡ ರಥೋತ್ಸವ ನಡೆಯಲಿದೆ. ಏ. 10 ರಂದು ಯಜ್ಞ ಕಾರ್ಯಕ್ರಮ, ಬ್ರಾಹ್ಮಣ ಸಂತರ್ಪಣೆ, ರಾತ್ರಿ 8.30ಕ್ಕೆ ಪುಷ್ಪ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ಏ. 11 ರಂದು ಮಹಾಯಜ್ಞ, ಸಂಜೆ ಮಹಾಪ್ರಾರ್ಥನೆಯೊಂದಿಗೆ ಮಹಾರಥೋತ್ಸವ ಕಾರ್ಯಕ್ರಮ ಪ್ರಾರಂಭ ಹಾಗೂ ಸಂಜೆ 7 ಗಂಟೆಯಿಂದ ಭೂರಿಭೋಜನ, ಉತ್ಸವ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. 12 ರಂದು ಅವಭೃತೋತ್ಸವ, , ಬ್ರಾಹ್ಮಣ ಸಂತರ್ಪಣೆ, ರಾತ್ರಿ ಮಂಗಳಾರತಿ, ಪ್ರಾರ್ಥನೆ ಅಂಕುರ ಪ್ರಸಾದ ವಿತರಣೆ ನಡೆಯಲಿದೆ.
Leave a Comment