ಹೊನ್ನಾವರ:
ತಾಲೂಕಿನ ಅರೇಅಂಗಡಿ ಹಿ.ಪ್ರಾ ಶಾಲೆಯಲ್ಲಿ ಡಾನ್ಸ ಪ್ರಾಕ್ಟೀಸ್ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕ ಉಪಟಳ ನೀಡಿದ್ದಲ್ಲದೇ ಇದನ್ನು ಪ್ರಶ್ನಿಸಲು ಬಂದ ಎಸಿಡಿಎಮ್‍ಸಿ ಅಧ್ಯಕ್ಷರಿಗೆ ಹೊಡೆದಿರುವ ಕುರಿತು ಹಲ್ಲೆಗೊಳಗಾದ ಎಸ್‍ಡಿಎಮ್‍ಸಿ ಅಧ್ಯಕ್ಷ ಹೊನ್ನಾವರ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ದೂರು ನೀಡಿದ್ದಾರೆ.
ತಾಲೂಕಿನ ಅರೇಅಂಗಡಿಯ ಹಿ.ಪ್ರಾ. ಶಾಲೆಯಲ್ಲಿ ಈ ಘಟನೆ ನಡೆದಿರುವುದಾಗಿ ಎಸ್‍ಡಿಎಮ್‍ಸಿ ಅಧ್ಯಕ್ಷ ಗೋಪಾಲ ಎಂ. ನಾಯ್ಕ್ ತಿಳಿಸಿದ್ದಾರೆ. ಈ ತಿಂಗಳ 28ರಂದು ಶಾಲೆಯ ಸುವರ್ಣಮಹೋತ್ಸವ ಜರುಗಲಿದ್ದು, ಸಾಂಸ್ಕøತಿಕ ಕಾರ್ಯಕ್ರಮ ನೀಡಲು ವಿದ್ಯಾಥಿನಿಯರು ಹಾಡು ಹಚ್ಚಿಕೊಂಡು ಡಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. ಈ ವಿದ್ಯಾರ್ಥಿನಿಯರಿಗೆ ಪಲ್ಲವಿ ಆಚಾರಿ ಎಂಬುವರು ತರಬೇತಿ ನೀಡುತ್ತಿದ್ದರು. ಎಂದಿನಂತೆ ಸೋಮವಾರ ಮಧಾಹ್ನ 2:30ರ ವೇಳೆಗೆ ರಿಕ್ಷಾ ಚಾಲಕ ಅರುಣ ಸಾಲ್ಕೋಡ ಎಂಬಾತ ವಿದ್ಯಾರ್ಥಿನಿಯರಿದ್ದಲ್ಲಿಗೆ ಬಂದು ಅನುಚಿತವಾಗಿ ವರ್ತಿಸಿ, ಸೌಂಡ್ ಬಾಕ್ಸ್ ಒಡೆದು ಹಾಕಿ, ರಿಮೋಟ್ ಕಿತ್ತುಕಂಡು ಉಪಟಳ ನೀಡಿದ್ದರಿಂದ ವಿದ್ಯಾರ್ಥಿನಿಯರು ಕೂಗುತ್ತಾ ಹೊರಬಂದರು. ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಆತ ಹಲ್ಲೆ ಮಾಡಿರುವುದಾಗಿ ಗೋಪಾಲ್ ಎಮ್ ನಾಯ್ಕ್ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Leave a Comment