ಹೊನ್ನಾವರ;
ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದಲ್ಲಿ
ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ ನಡೆಸಿತು.
ನಮ್ಮ ಮಹಾವಿದ್ಯಾಲಯದ ಬ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬ.ಎ. ಎಂ.ಕಾಂ., ಹಾಗೂ ಎಂ.ಎಸ್ಸಿ. ಅಂತಿಮ ವರ್ಷದ ಸುಮಾರು 100 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು.
ಕಂಪನಿಯ ಎಚ್.ಆರ್. ವಿಭಾಗದ ಪ್ರಥಮೇಶ ರೇಡಕರ್, ಜಿ.ಡಿ. ವಿಡಿಯೋ ಸಂವಾದಗಳ ಮುಂತಾದ 4 ಹಂತಗಳ ಸಂದರ್ಶನ ನಡೆಸಿ ಅಂತಿಮವಾಗಿ 7 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು.
ಬಿ.ಕಾಂ. 6 ನೇ ಸೆಮಿಸ್ಟರ್ನ ಕುಮಾರಿ ಜೆಸಿಕಾ ರೊಡ್ರಿಗೀಸ್ ಹಾಗೂ ಕುಮಾರ ಕೇಶವ ಪ್ರಭು ಆನ್-ಲೈನ್ ಪರೀಕ್ಷೆ ಎದುರಿಸುವ ಮೂಲಕ ನೇಮಕಾತಿ ಅರ್ಹತೆ ಪಡೆದಿಕೊಂಡರು.
Leave a Comment