ಹೊನ್ನಾವರ :
ತಾಲೂಕಿನ ಕೋಟೇಬೈಲ್ ಸಮೀಪದ ತೋಟದಮಕ್ಕಿ ರಸ್ತೆಯ ತಿರುವಿನಲ್ಲಿ ಬೈಕ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿದ ಪರಿಣಾಮ ಗಂಬೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೈಕ್ ಸವಾರ ಹೆರಾವಲಿ ನಿವಾಸಿ ಪ್ರಸನ್ನ ತಿಮ್ಮಣ್ಣ ಭಟ್ಟ (31) ಮೃತಪಟ್ಟ ದುರ್ದೈವಿ. ಈತ ತನ್ನ ಯಮಹಾ ವೈಬಿಆರ್ ಬೈಕ್ನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜನ್ನಕಡಕಲದಿಂದ ಹಡಿನಬಾಳದ ಕಡೆಗೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬಲವಾಗಿ ಗುದ್ದಿದೆ. ಇದರಿಂದ ತಲೆ ಮತ್ತು ಮಖಕ್ಕೆ ಗಂಬೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಸ್ ಚಾಲಕ ಬಸ್ನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment