• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತಾಲೂಕು ಪಂಚಾಯತ ಸಭೆಗೆ ಅಧಿಕಾರಿಗಳ ಗೈರು ಹಾಜರಿ ವಿರೋಧಿಸಿ ಪ್ರತಿಭಟಿಸಿದ ಸದಸ್ಯ ಪ್ರಶಾಂತ ಗೋವೇಕರ್

May 5, 2017 by Sachin Hegde Leave a Comment

ಕಾರವಾರ:

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಹಾಗೂ ಪ್ರಗತಿ ಪರೀಶಿಲನಾ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಗೈರಾಗುತ್ತಿರುವ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿ ಅಸಮಧಾನ ವ್ಯಕ್ತವಾಯಿತು. ಈ ಬಗ್ಗೆ ಸದಸ್ಯರು ತೀವೃ ಆಕ್ರೋಶ ವ್ಯಕ್ತಪಡಿಸಿದರು.
ಆರಂಭದಲ್ಲಿ ಸದಸ್ಯ ಪ್ರಶಾಂತ ಗೋವೇಕರ್ ಮಾತನಾಡಿ, ಕಿನ್ನರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಕೈಗೊಂಡಿರುವ ನಾಲ್ಕು ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಹಿರಿಯ ಅಧಿಕಾರಿಗಳನ್ನು ಕೇಳಲು ಪೋನ್ ಮಾಡಿದರೆ ಅವರು ಪೊನ್ ತೆಗೆದುಕೊಳ್ಳುತ್ತಿಲ್ಲ. ಈಗ ಸಭೆಗೆ ಕೂಡ ಆಗಮಿಸಿಲ್ಲ. ಅಲ್ಲದೆ ಪ್ರತಿ ಭಾರಿ ಅವರು ಸಭೆಗೆ ಗೈರು ಹಾಜರಾಗುತ್ತಿದ್ದು, ಅವರು ಬರುವರೆಗೆ ತಾವು ಸಭೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು.ವ ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷೆ ಪ್ರಮೀಳಾ ನಾಯ್ಕ ಹಾಗೂ ಇತರೆ ಸದಸ್ಯರು, ಕಳೆದ ಒಂದು ವರ್ಷದಿಂದ ಅಧಿಕಾರಿಗಳು ಏನಾದರೂ ಕಾರಣವೊಡ್ಡಿ ಸಭೆಗಳಿಗೆ ಗೈರು ಆಗುವುದು ಸಾಮಾನ್ಯವಾಗಿದೆ. ಅಲ್ಲದೆ ಇವರ ಅನುಪಸ್ಥಿತಿಯಲ್ಲಿ ಬರುವ ಅಧಿಕಾರಿಗಳಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಇದರಿಂದ ತಾಲೂಕಿನಲ್ಲಿನ ಪ್ರಗತಿ ವಿಷಯಗಳ ಚರ್ಚೆಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಉಪಸ್ಥಿತರಿದ್ದ ಲೊಕೋಪಯೋಗಿ ಅಧಿಕಾರಿ ಹಿರಿಯ ಅಧಿಕಾರಿಗಳಿಗೆ ಪೋನ್ ಮೂಲಕ ತಿಳಿಸುವುದಾಗಿ ತಿಳಿಸಿದ್ದರು. ಆದರೆ ಕೆಲ ಹೊತ್ತು ಸಭೆ ನಡೆದರು ಅಧಿಕಾರಿಗಳು ಬರದೆ ಇದ್ದಾಗ ಪ್ರಶಾಂತ ಸಭೆಯಲ್ಲಿಯೇ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಕೊನೆಗೆ ಸ್ಥಳಕ್ಕೆ ಆಗಮಿಸಿದ ಪ್ರಭಾರ ಲೊಕೋಪಯೋಗಿ ಇಲಾಖೆ ಅಧಿಕಾರಿಯನ್ನು ಸದಸ್ಯರು ಹಾಗೂ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ಬಳಿಕ ಸೋಮವಾರದ ಒಳಗೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದು ಕೆಲಸ ಮುಗಿಸುವುದಾಗಿ ಸಭೆಗೆ ತಿಳಿಸಿದರು.
ಶಿರವಾಡದಲ್ಲಿ ಸುಮಾರು 350 ಮನೆಗಳು ಗ್ರಾ.ಪಂನಲ್ಲಿ ಮನೆ ಕಟ್ಟಲು ಯಾವುದೇ ರಿತಿಯ ಪರವಾನಿಗೆ ಪಡೆದುಕೊಂಡಿಲ್ಲ. ಆದರೆ ಹೆಸ್ಕಾಂನವರು ಮಾತ್ರ ಅವರಿಗೆ ವಿದ್ಯುತ್ ನೀಡಿದ್ದಾರೆ. ಇದರಿಂದ ತೆರಿಗೆ ವಂಚಿಸುತ್ತಿರುವವರಿಗೆ ಎಲ್ಲ ಸೌಲಭ್ಯಗಳು ದೊರೆತಂತಾಗಿದೆ ಎಂದು ಸದಸ್ಯ ಮಾರುತಿ ನಾಯ್ಕ ಗಮನಕ್ಕೆ ತಂದರು.
ಈ ವೇಳೆ ಉತ್ತರಸಿದ ಹೆಸ್ಕಾ ಅಧಿಕಾರಿ ನಾವು ಮನೆಗಳಿದ್ದಲ್ಲಿ ವಿದ್ಯುತ್ ನೀಡುತ್ತೇವೆ. ಮನೆ ನಿರ್ಮಾಣ ವಾಗುವ ಮುಂಚೆ ಇತರ ಇಲಾಖೆಗಳು ಇದಕ್ಕೆ ತಡೆ ತರಬುಹುದು. ಆದರೆ ಮನೆ ಇದ್ದಾಗ ವಿದ್ಯುತ್ ನೀಡದೇ ಇರುವುದಕ್ಕೆ ಸಾಧ್ಯವಿಲ್ಲ ಎಂದು ಸಭೆಗೆ ತಿಳಿಸಿದರು. ಇನ್ನು ಮಾಜಾಳಿ ದಾಂಡೇಭಾಗದಲ್ಲಿ ಮೂರು ರಸ್ತೆ ಕಾಮಗಾರಿಗಳಿಗೆ ನೂರಕ್ಕೂ ಹೆಚ್ಚು ಲೋಡಗಳಷ್ಟು ಮರಳನ್ನು ಸಾಗಿಸಲಾಗಿದೆ. ಕೇವಲ 5 ಲಕ್ಷದ ಟೆಂಡರ್ ಪಡದಿದ್ದು 7 ಲಕ್ಷಕ್ಕೂ ಹೆಚ್ಚು ಉಸುಕು ತೆಗೆದು ಮಾರಾಟ ಮಾಡುವ ಸಾಧ್ಯತೆ. ಇದೆ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಉಪಾಧ್ಯಕ್ಷ ರವೀಂದ್ರ ಪವಾರ್ ಹೇಳಿದರು.
ಮುಂಗಾರು ಹಂಗಾಮಿನಲ್ಲಿ ರೈತರ ಅವಶ್ಯಕತೆಗೆ ತಕ್ಕಂತೆ ಬೀಜಗಳನ್ನು ಪೂರೈಕೆ ಮಾಡಲಾಗುತ್ತದೆ. ಈಗಾಗಲೇ 350 ಕ್ವಿಂಟಲ್ ಬೀಜ ಹಾಗೂ ಸಾವಯವ ಗೊಬ್ಬರ ನೀಡಲು ಮೇ 15ರೊಳಗೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ 100 ತಾಡಪತ್ರೆಗಳು ಸರಕಾರದಿಂದ ಬರಲಿದ್ದು, ಅದನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಸ್ಥಳೀಯ ಪಂಚಾಯಿತಿ ಸದಸ್ಯರು ಸೂಚಿಸದಲ್ಲಿ ಅವರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ 2017-18ನೇ ಸಾಲಿಗೆ 4060.03 ಲಕ್ಷ ರುಗಳ ಆಯವ್ಯಯವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ ಶುಕ್ರವಾರ ಮಂಡಿಸಿದರು. ಆಯವ್ಯಯದಲ್ಲಿ ಅತಿ ಹೆಚ್ಚು ಶೇ. 63 ರಷ್ಟು ಶಿಕ್ಷಣ ಕ್ಷೇತ್ರಕ್ಕೆ ಮಿಸಲಿಡಲಾಗಿದೆ. ಒಟ್ಟು 2582.26 ಲಕ್ಷ ರೂ ಶಿಕ್ಷಣಕ್ಕೆ ಅನುದಾನ ಒದಗಿಸಲಾಗಿದೆ. ಉಳಿದಂತೆ ಸರ್ವ ಶಿಕ್ಷಣ ಅಭಿಯಾನಕ್ಕೆ 145.46 ಲಕ್ಷ ರು, ಆರೋಗ್ಯ, 46.32 ಲಕ್ಷರು, ಸಮಾಜ ಕಲ್ಯಾಣ 135.04 ಲಕ್ಷ ರು, ಶಿಶು ಅಭಿವೃದ್ಧಿ 684.21 ಲಕ್ಷ ರು, ಪಶು ಸಂಗೋಪನೆ 61.39 ಲಕ್ಷ ರು, ಕೃಷಿ 43.35 ಲಕ್ಷ ರು, ತೋಟಗಾರಿಕೆ 0.39 ರೂ, ಹಿಂದುಳಿದ ವರ್ಗಗಳ ಕಲ್ಯಾಣ 34.48 ಲಕ್ಷ ರು, ಸಹಕಾರ 1.89 ಲಕ್ಷ ರು, ತಾಲೂಕು ಪಂಚಾಯಿತಿ ಇತರೆ ಅಭಿವೃದ್ಧಿಗೆ 325 ಲಕ್ಷ ರು ಅನುದಾನ ಒದಗಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: 43.35, ಅಧಿಕಾರಿ, ಅನುದಾನ, ಇಲಾಖೆ, ಕಾಮಗಾರಿ, ಕಾರವಾರ, ಕೃಷಿ, ಗೈರು, ಗೋವೇಕರ್, ತಾಲೂಕು, ಪಂಚಾಯತ, ಪಶು, ಪ್ರತಿಭಟಿಸಿದ, ಪ್ರಶಾಂತ, ರಸ್ತೆ, ಲಕ್ಷ, ಲೋಡ, ವಿದ್ಯುತ್, ವಿರೋಧಿಸಿ, ಸಂಗೋಪನೆ, ಸದಸ್ಯ, ಸಭೆ, ಹಾಜರಿ, ಹೆಚ್ಚು

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar