• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನೀರಿನ ಕರ ಹೆಚ್ಚಳ – ನಗರ ಸಭೆಗೆ ಮುತ್ತಿಗೆ

May 5, 2017 by Sachin Hegde Leave a Comment

ದಾಂಡೇಲಿ:

ಹೆಚ್ಚಿಸಿರುವ ಕುಡಿಯುವ ನೀರಿನ ದರ ಪರಿಷ್ಕರಿಸಿ ಇಳಿಕೆ ಮಾಡುವಂತೆ ಒತ್ತಾಯಿಸಿ ಗುರುವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರಸಭೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ಸಂದರ್ಭಲ್ಲಿ ದಾಂಡೇಲಿ ತಾಲೂಕು ರಚನಾ ಸಮಿತಿಯ ಕಾರ್ಯದರ್ಶಿ ಅಕ್ರಂ ಖಾನ್, ಮುಖಂಡರಾದ ಫಿರೋಜ್ ಫಿರ್ಜಾದೆ ಮುಂತಾದವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನಾ ಸ್ಥಳಕ್ಕೆ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರು ಪೌರಾಯುಕ್ತ ಆರ್.ವಿ, ಜತ್ತಣ್ಣ ಅವರ ಜೊತೆ ಬೇಟಿ ನೀಡಿ ಮನವಿ ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕಯವರು ಸರಕಾರದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಆದರೆ ನಾವೂ ಸಹ ಜನರ ಪರವಾಗಿಯೇ ಇದ್ದೇವೆ ಎಂದರು. ನಗರಸಭಾ ಅಧ್ಯಕ್ಷರ ಕೊಠಡಿಯಲ್ಲಿ ಪ್ರತಿಭಟನಾ ನಿರತ ಪ್ರಮುಖರು ಹಾಗೂ ನಗರಸಭಾ ಅಧ್ಯಕ್ಷರು ಮತ್ತು ಪೌರಾಯುಕ್ತರು ಸಭೆ ನಡೆಸಿದರು. ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ನೀರಿನ ಸಮಸ್ಯೆ ಮತ್ತು ಹೆಚ್ಚುವರಿ ಕರದ ಕುರಿತಂತೆ ಹಲವು ಚರ್ಚೆಗಳು ನಡೆದವು. ನಗರಸಭಾ ಅಧ್ಯಕ್ಷರು ಮತ್ತು ಪೌರಾಯುಕ್ತರು ತಮ್ಮ ಸಮಜಾಯಿಶಿ ನೀಡಿದರು. ಈ ಸಂದರ್ಭದಲ್ಲಿ ಅಕ್ರಂ ಖಾನ್ ಮತ್ತು ಪೀರೋಜ್ ಫಿರ್ಜದೆಯವರು 120 ರೂ ಇದ್ದ ನೀರಿನ ಕರವನ್ನು ಏಕಾ ಏಕಿ 180 ರೂ ಏರಿಕೆ ಮಾಡಿದ್ದನ್ನು ಆಕ್ಷೇಪಿಸಿದರು. ಸರಕಾರದ ಆದೇಶವಮ್ಮು ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವ ಬಗ್ಗೆ, ಸಾರ್ವಜನಿಕರಿಂದ ದಂಡ ಆಕರಿಸಿರುವ ಬಗ್ಗೆ, ನಗರಸಭೆಯ ವೈಫಲ್ಯದ ಬಗ್ಗೆ ಮಾತನಾಡಿದರು. ದಿನದ 24 ಗಂಟೆ ನೀರು ಪೂರೈಕೆ ಮಾಡುಂತೆ, ಹಾಗೂ ನಗರಸಭೆಯವರೇ ಮೀಟರ ಅಳವಡಿಸಿ ನೀರು ಸರಬರಾಜು ಮಾಡುವಂತೆ ಹಾಗೂ ಬೇರೆ ನಗರಗಳಲ್ಲಿರುವಂತೆ ದಾಂಡೇಲಿಯಲ್ಲಿಯೂ ನೀರಿನ ಕರವನ್ನು ಕಡಿಮೆ ಇಡುವಂತೆ ಒತ್ತಾಯಿಸಿದರು. ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಅಧ್ಯಕ್ಷ ಅದು ಈಗಿಂದೀಗ ಆಗುವ ಕೆಲಸವಲ್ಲ. ನಾವು ಈಗಾಗಲೇ ಹಿಂದಿನ ಸಭೆಯಲ್ಲಿ ದರ ಪರಿಷ್ಕರಣೆಯ ಬಗ್ಗೆ ಹಾಗೂ ನೀರಿನ ಕರ ಕಡಿಮೆ ಮಾಡುವ ಬಗ್ಗೆ ಠರಾಯಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೇವೆ. ಈಗಲೂ ಮತ್ತೆ ಮೇ 20 ರೊಳಗೆ ನಗರಸಭಾ ಸದಸ್ಯರ ವಿಶೇಷ ಸಭೆಯೊಂದನ್ನು ಕರೆದು ಈ ಬಗ್ಗೆ ಚರ್ಚಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇನೆಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಅಕ್ರಂ ಖಾನ್, ಫಿರೋಜ್ ಫೀರ್ಜಾದೆ, ಹಿ ವಿ.ಎ. ಕೋನಾಪುರಿ, ಅಶೋಕ ಪಾಟೀಲ, ಟಿ.ಎಸ್. ನಾಯ್ಕ, ಬಲವಂತ ಬೊಮ್ನಳ್ಳಿ, ಸಿ.ಎ. ಲೋಬೋ, ಮುಜಿಬಾ ಛಬ್ಬಿ, ರೇಣುಕಾ ಬಂದಂ, ರಫಿಕ್ ಹುದ್ದಾರ, ಅಬ್ದುಲ್ ವಹಾಬ್ ಬಾಂಸುರಿ, ಗೌರೀಶ ಬಾಬ್ರೇಕರ, ಮೀನಾಕ್ಷಿ ಬಡಿಗೇರ, ರಾಜೇಸಾಬ ಕೇಸನೂರ ಮುಂತಾದವರಿದ್ದರು. ಪಿ.ಎಸ್.ಐ ಕುಮಾರ ಹಾಡಕರ ಹಾಗೂ ಸಿಬ್ಬಂದಿಗಳು ಬಂದೋಬಸ್ತ ನೀಡಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: ಅಧ್ಯಕ್ಷ, ದರ, ದಾಂಡೇಲಿ, ನಗರ, ನಗರಸಭೆ, ನೀರಿನ ಕರ, ಮನವಿ, ಮುತ್ತಿಗೆ, ವೈಫಲ್ಯ, ಸಭೆಗೆ, ಸಾರ್ವಜನಿಕರು, ಹೆಚ್ಚಳ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar