ಹೊನ್ನಾವರ:
ಮನೆಯಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ತಾ.ಪಂ.ಅಧ್ಯಕ್ಷನಿಗೆ ಸಾರ್ವಜನಿಕರೇ ಹಿಡಿದು ಥಳಿಸಿ ನಂತರ ಪೋಲಿಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಉಪ್ಪೋಣಿ ಸಮೀಪದ ಅಳ್ಳಂಕಿ ಗ್ರಾಮದಲ್ಲಿ ನಡೆದಿದೆ.
ತಾ.ಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ ಮನೆಯಲ್ಲಿ ಇರುವಾಗ ಅನುಮಾನಗೊಂಡ ಗ್ರಾಮಸ್ಥರು ತಾ.ಪಂ.ಅಧ್ಯಕ್ಷನನ್ನು ಸುಮಾರು 4 ತಾಸುಗಳ ಕಾಲ ಕೋಣೆಯೊಳಗೆ ಕೂಡಿಹಾಕಿ ಬೀಗ ಜಡಿದು, ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಡೆದಿದೆ.
ಘಟನೆಯ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಕುತೂಹಲದಿಂದ ಕಾಯುತ್ತಿದ್ದುದು ಕಂಡು ಬಂತು. ಹೊನ್ನಾವರ ಪಿಎಸ್ಐ ಆನಂದಮೂರ್ತಿ ಭೇಟಿ ನೀಡಿ ಕೋಣೆಯ ಜಡಿದ ಬೀಗವನ್ನು ತೆರವುಗೊಳಿಸಿ ತಾ.ಪಂ.ಅಧ್ಯಕ್ಷ ಮತ್ತು ಮಹಿಳೆಗೆ ರಕ್ಷಣೆ ನೀಡಿದ್ದಾರೆ. ಅಧ್ಯಕ್ಷನನ್ನು ಠಾಣೆಗೆ ಕರೆತಂದು ಘಟನೆಯ ಕುರಿತು ವಿಚಾರಣೆ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತವೋ? ಎಂಬುದು ತನಿಖೆಯಿಂದ ಹೊರಬರಬೇಕಿದೆ. ಹೊನ್ನಾವರ ಪೊಲೀಸ್ ಠಾಣೆಯ ಸುತ್ತಲೂ ಅನೇಕರು ಜಮಾಯಿಸಿದ್ದು ಕಂಡು ಬಂತು. ಆದರೆ ಈ ಬಗ್ಗೆ ರಾತ್ರಿವರೆಗೂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
Leave a Comment