ಕುಮಟಾ:
ಪ್ರವಾಸಕ್ಕೆಂದು ಕುಮಟಾದ ವನ್ನಳ್ಳಿ ಬೀಚ್ಗೆ ಆಗಮಿಸಿದ್ದ ಐವರು ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರುಪಾಲಾಗಿರುವ ಘಟನೆ ನಡೆದಿದೆ.ಹಳಿಯಾಳ ಮೂಲದ ಪ್ರಜ್ವಲ್ ಲೋಪಿಸ್ (19), ಫ್ರಾನ್ಸಿಸ್ ಬ್ರಿಗೆನ್ಸಾ (18) ನೀರುಪಾಲಾದವರು. ಇವರು ಇನ್ನು ಮೂರು ವಿದ್ಯಾರ್ಥಿಗಳನ್ನೊಡಗೂಡಿ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿದ್ದಾರೆ. ಮೂವರನ್ನು ಸ್ಥಳೀಯರು ರಕ್ಷಿಸಿದ್ದು, ಇನ್ನಿಬ್ಬರಿಗಾಗಿ ಕರಾವಳಿ ಕಾವಲು ಪಡೆಯ ಸಿಬ್ಬಂದಿ ತೀವ್ರ ಶೋಧ ನಡೆಸಿದ್ದಾರೆ.
Leave a Comment