ಭಟ್ಕಳ:
2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಒಟ್ಟೂ ಹಾಜರಾದ 170 ವಿದ್ಯಾರ್ಥಿಗಳಲ್ಲಿ 153 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇ.92 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ 30 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಸಹನಾ ಮಾದೇವ ನಾಯ್ಕ ಪ್ರಥಮ (578), ಆರ್. ಐಶ್ವರ್ಯ ದ್ವಿತೀಯ (572), ಶಿಲ್ಪಾ ಟಿ. ನಾಯ್ಕ ತೃತೀಯ (568) ಸ್ಥಾನವನ್ನು ಪಡೆದಿದ್ದಾರೆ.
ಭೌತ ಶಾಸ್ತ್ರದಲ್ಲಿ ಓರ್ವ ವಿದ್ಯಾರ್ಥಿ, ಗಣಿತದಲ್ಲಿ ಮೂರು ವಿದ್ಯಾರ್ಥಿಗಳು, ಗಣಕ ವಿಜ್ಞಾನ (ಕಂಪ್ಯೂಟರ್ ಸೈನ್ಸ್)ನಲ್ಲಿ ಐವರು ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 5 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಹೆಚ್.ಜಿ.ಚೈತ್ರ ಪ್ರಥಮ (552), ಸುಬ್ರಹ್ಮಣ್ಯ ಭಟ್ ದ್ವಿತೀಯ (542), ರೇಶ್ಮಾ ವಿ. ಆಚಾರಿ ತೃತೀಯ (523) ಸ್ಥಾನವನ್ನು ಪಡೆದಿದ್ದಾರೆ.
ಉತ್ತಮ ಫಲಿತಾಂಶವನ್ನು ತಂದುಕೊಟ್ಟ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಯು. ಸಂಸ್ಥೆಯ ಅಧ್ಯಕ್ಷ ಕ್ಯಾ. ಕೆ. ಆರ್. ನಾಯ್ಕ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
Leave a Comment