• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಂಕಾಳು ವೈದ್ಯ ಗೆಳೆಯರ ಬಳಗ ಕಾಸರಕೋಡ, ಹುಟ್ಟುಹಬ್ಬ ಆಚರಣೆ ಹಾಗೂ ನೋಟ್‍ಬುಕ್ ವಿತರಣೆ

June 7, 2017 by Gaju Gokarna Leave a Comment

ಹೊನ್ನಾವರ,

ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡಿನ ಶಾಲಾ ಮಕ್ಕಳಿಂದ ಕೇಕ್ ಕತ್ತರಿಸಿ ಅವರಿಗೆ ನೋಟ್‍ಬುಕ್ ವಿತರಿಸುವ ಮೂಲಕ ಮಂಕಾಳು ವೈದ್ಯ ಗೆಳೆಯರ ಬಳಗ ಕಾಸರಕೋಡ ಇವರು ಶಾಸಕರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ನಂತರ ಕಾಸರಕೋಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಭೂನ್ಯಾಯ ಮಂಡಳಿಯ ಸದಸ್ಯರು ಅಶೋಕ ಕಾಸರಕೋಡ ಮಾತನಾಡಿ ಬಡತನದಿಂದ ಕಷ್ಟಪಟ್ಟು ಹೋರಾಡಿ ಮೇಲಕ್ಕೆ ಬಂದು ಪಕ್ಷೇತರಾಗಿ ಸ್ಪರ್ಧಿಸಿ 2 ಬಾರಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಹಾಗೂ ಶಾಸಕರಾಗಿ ಆಯ್ಕೆಯಾಗಿ ದಾಖಲೆಯನ್ನೇ ನಿರ್ಮಿಸಿದ್ದಾರೆ. ಕೇವಲ ನಾಲ್ಕೇ ವರ್ಷದಲ್ಲಿ ವಿರೋದಿಗಳು ಕೂಡಾ ತಲೆತೂಗಿಸುವ ಹಾಗೇ ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿಯ ಪತಾಕೆಯನ್ನು ಹಾರಿಸಿದ್ದಾರೆ. ಕುಗ್ರಾಮಗಳಿಗೆ ತೆರಳಿ ರಸ್ತೆ, ಸೇತುವೆ ನಿರ್ಮಿಸಿದ್ದಾರೆ. ಕುಡಿಯಲು ನೀರಿಲ್ಲದೇ, ಕರೆಂಟ್ ಇಲ್ಲದೇ ಕತ್ತಲೆಯಲ್ಲಿದ್ದ ಗ್ರಾಮಗಳಿಗೆ ಸೌಕರ್ಯ ಒದಗಿಸಿದ್ದಾರೆ. ತಮ್ಮ ಮನೆಗೆ ಯಾರೇ ಬಂದರೂ ಹತ್ತಿರಕ್ಕೆ ಕುಳ್ಳಿರಿಸಿಕೊಂಡು ಸಮಸ್ಯೆ ಆಲಿಸುವ ಇವರು ಧೀನರ, ಅನಾರೋಗ್ಯ ಪೀಡಿತರ, ಅಂಗವಿಕಲರ ಬಂಧುವಾಗಿ ಆರ್ಥಿಕ ಸಹಾಯ ನೀಡಿ ಅವರಲ್ಲಿ ಆತ್ಮ ವಿಶ್ವಾಸ ತುಂಬಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಹೊಸ ಭಾಷ್ಯೆಯನ್ನೇ ಬರೆಯಲು ಹೊರಟಿರುವ ಶೈಕ್ಷಣಿಕ ಹರಿಕಾರರಾಗಿರುವ ಇವರನ್ನು ನಮ್ಮೆಲ್ಲರ ಒಳಿತಿಗಾಗಿ ಕ್ಷೇತ್ರದ ಅಭಿವೃದ್ದಿಗಾಗಿ ಇನ್ನೊಮ್ಮೆ ಶಾಸಕರಾಗಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊತ್ತಿಕೊಂಡು ನಮ್ಮ ಕರ್ತವ್ಯವನ್ನು ನಾವೇ ನಿಭಾಯಿಸಬೇಕಾಗಿದೆ ಎಂದರು.
ಅಥಿತಿಯಾಗಿ ಪಾಲ್ಗೊಂಡ ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಚಂದ್ರಶೇಖರ ಜಿ. ಗೌಡರವರು ಮಾತನಾಡಿ ಕಳೆದ 40 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಆದರೆ ಮಂಕಾಳು ವೈದ್ಯನಂತ ಕ್ರೀಯಾಶೀಲ ಯುವನಾಯಕನನ್ನು ನಾನು ನೋಡಿಲ್ಲ ಎಂದರು. ದಿನದ 24 ಗಂಟೆಯು ಕೆಲಸ ಮಾಡುವ ಇವರು ವೃಥ ಕಾಲಹರಣ ಮಾಡದೇ ಇಡೀ ಕ್ಷೇತ್ರದಾದ್ಯಂತ ಸುತ್ತಾಡಿ ಜನಸಾಮಾನ್ಯರನ್ನು ಶಾಲಾ ಮಕ್ಕಳನ್ನು ಸಂಪರ್ಕಿಸಿ ಸಮಸ್ಯೆ ಆಲಿಸಿ ಕಾಮಗಾರಿ ನಿರ್ವಹಿಸುವ ಅವರ ಈ ವಿಶಿಷ್ಟವಾದ ಗುಣದಿಂದ ಜನಸ್ನೇಹಿನಾಯಕರಾಗಿ ಬೆಳೆದಿದ್ದಾರೆಯೇ ವಿನಃ ಅವರ ಗುತ್ತಿಗೆದಾರರ ಸ್ನೇಹಿ ನಾಯಕರಾಗಿಲ್ಲ ಎಂದರು. ಕ್ಷೇತ್ರದಾದ್ಯಂತ ಅವರು ಹಮ್ಮಿಕೊಂಡ ಜನಪರ ಕಾರ್ಯಕ್ರಮಗಳ ಕಾಮಗಾರಿಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದ ಅವರು ಇಂತಹ ಅಪರೂಪವಾದ ಗುಣವಿಶೇಷಣಗಳನ್ನು ಹೊಂದಿರುವ ಮಂಕಾಳು ವೈದ್ಯರವರನ್ನು ಇನ್ನೊಮ್ಮೆ ಶಾಸಕನಾಗಿ ನೋಡುವ ಭಾಗ್ಯ ನಮ್ಮದಾಗಲೀ ಎಂದರು.
ಇನ್ನೊಬ್ಬ ಅಥಿತಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಯೊಗೇಶ ರಾಯ್ಕರ್ ಮಾತನಾಡಿ ವೈದ್ಯರಂತ ಶಾಸಕರನ್ನು ಪಡೆದದ್ದು ನಮ್ಮ ಭಾಗ್ಯ, ಅವರು ಹಿಂದೆಂದೂ ಕಾಣದ ಅಭಿವೃದ್ಧಿ ಮಾಡಿದರಿಂದಲೇ ಇಂದು ಜನರ ನಡಿಗೆ ಶಾಸಕರ ಕಡೆಗಾದರೆ, ಶಾಸಕರ ನಡಿಗೆ ಅಭಿವೃದ್ಧಿಯ ಕಡೆಗೆ ಆಗಿದೆ ಎಂದರು. ಅಶೋಕ ಕಾಸರಕೋಡರವರು ಮುತುವರ್ಜಿ ವಹಿಸಿ ಮಂಕಾಳು ವೈದ್ಯರ ಗೆಳೆಯರ ಬಳಗದ ಮುಖಾಂತರ ಹುಟ್ಟುಹಬ್ಬ ಆಚರಿಸಿ ಶಾಲಾ ಮಕ್ಕಳಿಗೆ ನೋಟ್‍ಬುಕ್ ವಿತರಣೆ ಮಾಡಿದ್ದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಹೆಮ್ಮೆ ಎನಿಸಿದ್ದು ಈ ಬಳಗವು ಇನ್ನೂ ಹೆಚ್ಚಿನ ಜನಸ್ಪಂಧನೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಲಿಷ್ಟವಾಗಿ ಬೆಳೆಯಲಿ ಎಂದು ಹಾರೈಸಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಕಾಸರಕೋಡ ಗ್ರಾಮ ಪಂಚಾಯತ ಅಧ್ಯಕ್ಷೆ ದಿಲ್‍ಶಾದ ಬೇಗಂ, ಉಪಾಧ್ಯಕ್ಷ ಜಗದೀಶ ತಾಂಡೇಲ್, ಸದಸ್ಯರಾದ ವಿಕ್ಟರ್ ರೋಡ್ರಗೀಸ್, ಮಂಜು ಗೌಡ, ಮುಖಂಡರಾದ ನಾಗೇಶ ತಾಂಡೇಲ್. ಅಶೋಕ ಕಾಸರಕೋಡ ಸ್ವಾಗತಿಸಿ ವಂದಿಸಿದರು, ಶಿಕ್ಷಕಿ ಕವಿತಾ ಭಟ್ ಕಾರ್ಯಕ್ರಮ ನಿರೂಪಿಸಿದರು.

watermarked 07 H N R kasarkod News.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: honavar, ಆಚರಣೆ, ಕಾಸರಕೋಡ, ಕ್ರೀಯಾಶೀಲ, ಗೆಳೆಯರ, ನೋಟ್‍ಬುಕ್, ಬಳಗ, ಮಂಕಾಳು, ಯುವನಾಯಕ, ರಾಜಕೀಯ, ವಿತರಣೆ, ವೈದ್ಯ, ಹಾಗೂ, ಹುಟ್ಟುಹಬ್ಬ, ಹೊನ್ನಾವರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...