ಕಾರವಾರ:
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಕಾರ್ಯಾಚರಣೆಗೆ ಚಾಲನೆ ನೀಡಿದರು.ಬಸ್ ನಿಲ್ದಾಣ, ಕೋಡಿಬಾಗ, ನ್ಯೂನರ್ಸಿಂಗ್ ಹೋಮ್ರಸ್ತೆ, ಖಾಜು ಭಾಗ್, ಸಂಡೇ ಮಾರ್ಕೆಟ್, ಕೆ ಇ ಬಿ ರಸ್ತೆ ಮೊದಲಾದ ಕಡೆಗಳಲ್ಲಿ ಜಾಗೃತಿ ಜಾಥಾ ನಡೆದವು. ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ತಹಶೀಲ್ದಾರ ಜಿ ಎನ್ ನಾಯ್ಕ, ಸಿಪಿಐ ಶರಣಗೌಡ ಪಾಟೀಲ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೂರಜ್ ನಾಯಕ್, ಇನ್ಸ್ಟಿಟ್ಯೂಟ್ಆಫ್ ಪಬ್ಲಿಕ್ ಹೆಲ್ತ್ನ ಡಾ. ಚಂದ್ರಶೇಖರ್ ಕೊಟಗಿ ಇತರರು ಇದ್ದರು.ನಗರದಲ್ಲಿ ಮಂಗಳವಾರ ತಂಬಾಕು ನಿಯಂತ್ರಣ ಕಾಯಿದೆ ಬಗ್ಗೆ ಜನ ಜಾಗೃತಿ ಮೂಡಿಸಲು ವಿವಿಧ ಇಲಾಖೆಯವರು ಮಂಗಳವಾರ ದಿಡಿರ್ ಕಾರ್ಯಾಚರಣೆ ನಡೆಸಿದ್ದು, ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ 40 ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದರು.
Leave a Comment