• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಕ್ತದಾನ ಮಾಡುವವರು ಜೀವ ರಕ್ಷಕರು;ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ

July 15, 2017 by Gaju Gokarna Leave a Comment

ಹೊನ್ನಾವರ:
ರಕ್ತದಾನ ಮಾಡುವವರು ಜೀವ ರಕ್ಷಕರು. ರಕ್ತದಾನ ಮಾಡಲು ಹಣ ಬೇಕಿಲ್ಲ, ಹೃದಯವಂತಿಕೆ ಬೇಕು ಎಂದು ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ ಹೇಳಿದರು.
ಪಟ್ಟಣದ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಬಿಜೆಪಿ ತಾಲೂಕಾ ಮಂಡಲದ ಆಶ್ರಯದಲ್ಲಿ ತಾಲೂಕಾ ಆಸ್ಪತ್ರೆ, ಕುಮಟಾದ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಕ್ತ ದಾನ ಮಾಡಿದವರಿಗೆ ಹೊಸ ರಕ್ತ ಉತ್ಪನ್ನವಾಗುತ್ತದೆ. ಪಡೆದವರಿಗೆ ಜೀವ ರಕ್ಷಣೆಯಾಗುತ್ತದೆ. ರಕ್ತದಾನ ಕೊಟ್ಟವರಿಗೆ, ಪಡೆದವರಿಗೆ ಇಬ್ಬರಿಗೂ ಪ್ರಯೋಜನ ಎಂದರು.
ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ ಅಪಘಾತದಂತಹ ಸಂದರ್ಭಗಳಲ್ಲಿ ರಕ್ತ ಸಿಗದೇ ಅನೇಕರು ದಾರಿ ಮಧ್ಯೆ ಜೀವ ಕಳೆದುಕೊಂಡಿದ್ದಾರೆ. ರಕ್ತದಾನ ಮಹತ್ವದ್ದು. ಯುವಜನರು ರಕ್ತದಾನ ಮಾಡಲು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಜಿಲ್ಲಾ ಶಿಶು ಅಭಿವೃದ್ದಿ ಇಲಾಖಾಕಾರಿ ಡಾ. ಶರದ್ ನಾಯ್ಕ ಮಾತನಾಡಿ ಹೆರಿಗೆ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ರಕ್ತ ಸಿಗದೇ ಮೃತಪಟ್ಟ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ.. ಅನೇಕರು ಕ್ಯಾಂಪ್‍ಗಳನ್ನು ಮಾಡಿದಾಗ ರಕ್ತ ಕೊಡಲು ಮುಂದೆ ಬರುವುದಿಲ್ಲ. ಕಾಲೇಜುಗಳಲ್ಲಿ ಕ್ಯಾಂಪ್ ಮಾಡಿದಾಗಲೂ ವಿದ್ಯಾರ್ಥಿಗಳು ರಕ್ತ ಕೊಡಲು ಮುಂದೆ ಬರುವುದು ಕಡಿಮೆ. ರಕ್ತದಾನ ಮಾಡಿ ಮೊದಲೇ ಸಂಗ್ರಹ ಇಟ್ಟುಕೊಂಡರೆ ಅನುಕೂಲ ಎಂದರು.
ತುರ್ತು ಸಮಯದಲ್ಲಿ ಮಾತ್ರ ರಕ್ತ ಕೊಡುವುದಕ್ಕಿಂತ ಶಿಬಿರಗಳಲ್ಲಿ ರಕ್ತದಾನ ಮಾಡಿ ರಕ್ತ ಸಂಗ್ರಹ ಇಟ್ಟುಕೊಳ್ಳುವಂತೆ ಮಾಡಿ ಅನೇಕರ ಜೀವ ಉಳಿಸುವ ಪ್ರಯತ್ನ ಮಾಡೋಣ ಎಂದರು.
ಯಾರು ರಕ್ತ ಕೊಡಲು ಅರ್ಹರು?: ಕುಮಟಾ ಬ್ಲಡ್ ಬ್ಯಾಂಕ್ ಅಕಾರಿ ಡಾ. ಎಂ.ಕೆ. ನಾಯ್ಕ ಮಾತನಾಡಿ 18 ರಿಂದ 60 ವರ್ಷದ ವರೆಗಿನವವರು, 45 ಕೆಜಿಗಿಂತ ಹೆಚ್ಚನ ತೂಕ ಇದ್ದವರು ರಕ್ತ ಕೊಡಬಹದು. ಆರೋಗ್ಯವಂತರಾಗಿರಬೇಕು. ಯಾವುದೇ ಸೋಂಕು ರೋಗಗಳು ಇರಬಾರದು. ಬಿಪಿ, ಸಕ್ಕರೆ ಖಾಯಿಲೆ. ಹೃದಯದ ಸಮಸ್ಯೆ ಇದ್ದವರು ಆಗಬಾರದು ಎಂದರು.
ರಕ್ತದ ಗುಂಪನ್ನು ಮೊದಲೇ ತಿಳಿದಿಟ್ಟುಕೊಂಡರೆ ಅನುಕೂಲ. ಪಾಸಿಟಿವ್ ಗುಂಪಿನ ರಕ್ತಗಳು ಹೆಚ್ಚು ಅಗತ್ಯವಾಗಿವೆ ಎಂದರು.
ತಾಲೂಕಾ ವೈದ್ಯಾಕಾರಿ ಉಷಾ ಹಾಸ್ಯಗಾರ ಸ್ವಾಗತಿಸಿದರು. ಆಡಳಿತ ವೈದ್ಯಾಕಾರಿ ಡಾ. ರಾಜೇಶ ಕಿಣಿ ವಂದಿಸಿದರು. ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ರಾಯಲಕೇರಿ, ಜಿ.ಪಂ. ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ. ಗಣಪತಿ ಗೌಡ ಚಿತ್ತಾರ, ಕರ್ಕಿ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ಮೊಗೇರ ಮತ್ತಿತರರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಧ್ಯಕ್ಷ, ಅಪಘಾತ, ಅಭಿವೃದ್ದಿ, ಆಸ್ಪತ್ರೆ, ಕಾಲೇಜು, ಕ್ಯಾಂಪ್, ಜಿ.ಪಂ., ಜೀವ, ತಾಲೂಕಾ, ನಾಯ್ಕ, ಬಿಪಿ, ಬ್ಲಡ್ ಬ್ಯಾಂಕ್, ಮಾಡುವವರು, ರಕ್ತದಾನ, ರಕ್ಷಕರು, ರಾಜೇಶ ಕಿಣಿ, ಶಾಸ್ತ್ರಿ, ಶಿಬಿರ, ಶಿಶು, ಶ್ರೀಕಲಾ, ಸಕ್ಕರೆ ಖಾಯಿಲೆ, ಸದಸ್ಯೆ, ಸಮಸ್ಯೆ, ಸರಕಾರಿ, ಸುಬ್ರಹ್ಮಣ್ಯ ಶಾಸ್ತ್ರಿ, ಸುಬ್ರಾಯ, ಸೋಂಕು, ಹೃದಯ, ಹೃದಯವಂತಿಕೆ, ಹೊನ್ನಾವರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar