ಕಾರವಾರ:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯವತಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ ನಾಗರಿಕ (ಪುರುಷ ಹಾಗೂ ಮಹಿಳೆ) ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರಿಕ್ಷೆಯು ಜುಲೈ 23 ರಂದು ಕಾರವಾರ ಹಾಗೂ ಅಂಕೋಲಾ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ.
ಈಗಾಗಲೇ ಅರ್ಹ ಎಲ್ಲ ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದು, ಅದನ್ನು ಪಡೆದು ಪರೀಕ್ಷೆಗೆ ಹಾಜರಾಗಬೇಕು. ಜಿಲ್ಲೆಯಲ್ಲಿ ಒಟ್ಟು 9,280 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಕಾರವಾರ ಅಂಕೋಲಾದ, ಶಾಲಾ, ಕಾಲೇಜುಗಳಲ್ಲಿನ 38 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಅಲ್ಲದೆ ಈ ಬಗ್ಗೆ ಸಹಾಯವಾಣಿ ಕೇಂದ್ರಗಳನ್ನು ಕಾರವಾರ, ಅಂಕೋಲಾದ ಬಸ್ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9480805200 (ಪೊಲೀಸ್ ಕಂಟ್ರೋಲ್ ರೂಂ, ಕಾರವಾರ), ದೂ: 08382-226550 (ಪೊಲೀಸ್ ಕಂಟ್ರೋಲ್ ರೂಂ, ಕಾರವಾರ) ಹಾಗೂ ಸ್ಥಳೀಯ ಪೊಲೀಸ್ ಠಾಣೆ: ಕಾರವಾರ ಶಹರ 08382-226333, ಕಾರವಾರ ಗ್ರಾಮೀಣ 08382-222443, ಕಾರವಾರ ಸಂಚಾರ 08382-228333, ಅಂಕೋಲಾ ಠಾಣೆ 08388-230333 ಸಂಪರ್ಕಿಸಬಹುದು. ಅಲ್ಲದೆ ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಕಛೇರಿಯ ಅಧಿಕೃತ ವೆಬ್ಸೈಟ್ http://pcnhk17.ksp-online.in or www.ksp.gov.in ನಲ್ಲಿ ನೋಡಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
Leave a Comment