ಪತ್ನಿ ಹತ್ಯೆ ಮಾಡಿದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಸಿದ್ದಾಪುರದ ಭಂಡಾರಕೇರಿ ಗ್ರಾಮದ ಬಂಗಾರೇಶ್ವರ ಮಂಜುನಾಥ ನಾಯ್ಕ ಎಂಬಾತ ಐದು ವರ್ಷಗಳ ಹಿಂದೆ ಇನ್ನೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದು, ಈ ವಿಚಾರವಾಗಿ ಪತ್ನಿ ಸುಶೀಲಾ ನಾಯ್ಕರೊಂದಿಗೆ ಜಗಳ ಉಂಟಾಗಿತ್ತು. ಇದೇ ಜಗಳ ತಾರಕ್ಕಕ್ಕೇರಿದಾಗ ಬಡಿಗೆಯಿಂದ ಹೊಡೆದು ಸುಶೀಲಾರನ್ನು ಬಂಗಾರೇಶ್ವರ ಮಂಜುನಾಥ ನಾಯ್ಕ ಕೊಲೆ ಮಾಡಿದ ಬಗ್ಗೆ 2012ರ ಡಿಸೆಂಬರ್ 4ರಂದು ಸಿದ್ದಾಪುರ ಪೊಲೀಸರು ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾದೀಶ ವಿ.ಎಸ್ ಧಾರವಾಡಕರ್ ಆರೋಪಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಗೆ ವಿಫಲರಾದಲ್ಲಿ 6ತಿಂಗಳು ಹೆಚ್ಚುವರಿ ಕಾರಾಗೃಹ ಶಿಕ್ಷೆಗೆ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ತನುಜಶ್ರಿ ಹೊಸಪಿರ್ಯಾಪಟ್ಟಣ ವಾದಿಸಿದ್ದರು
Leave a Comment