ಹೊನ್ನಾವರ : ಕಳೆದ ಸಾಲಿನಲ್ಲಿ ಮಣೆಪಾಲ ಆರೋಗ್ಯ ಕಾರ್ಡ್ನ್ನು 2,54,934 ಸದಸ್ಯರು ಪಡೆದು 6 ಕೋಟಿ ರೂಪಾಯಿ ಮೌಲ್ಯದ ಚಿಕಿತ್ಸಾ ರಿಯಾಯತಿ ಪಡೆದಿದ್ದಾರೆ ಎಂದು ಕಸ್ತೂರ್ಬಾ ಆಸ್ಪತ್ರೆ ಮಾರ್ಕೆಟಿಂಗ್ ವಿಭಾಗದ ಎಜಿಎಂ ಅನಿಲ್ ಪಾಲ್ ಜೇಕಬ್ ಹೇಳಿದರು. ಅವರು ಪಟ್ಟಣದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ವಿವರ ನೀಡಿದರು. ಉತ್ತರ ಕನ್ನಡದಿಂದ 60 ಸಾವಿರ ಸದಸ್ಯರಿದ್ದಾರೆ. ಕಾರ್ಡ್ ಹೊಂದಿದವರಿಗೆ ವೈದ್ಯರ ಸಮಾಲೋಚನೆಯಲ್ಲಿ ಶೇ.50 ಪ್ರಯೋಗಾಲಯ, ಸಿಟಿ ಸ್ಕ್ಯಾನ್, ಅಲ್ಟ್ರಾಸೌಂಡ್, ಹೊರರೋಗಿಗಳ ವಿಭಾಗದಲ್ಲಿ ಶೇ.25 ರಷ್ಟು ಒಳರೋಗಿಗಳ ವಿಭಾಗದಲ್ಲಿ ಶೇ.25, ಔಷಧಾಲಯದಲ್ಲಿ ಶೇ.10 ರಷ್ಟು ರಿಯಾಯತಿ ಒಂದು ವರ್ಷ ದೊರೆಯಲಿದೆ.• ಈ ಅವಧಿಯಲ್ಲಿ ಯಾವುದೇ ಚಿಕಿತ್ಸೆಗೆ ಎಷ್ಟುಬಾರಿ ಬೇಕಾದರೂ ಈ ಸೌಲಭ್ಯ ಪಡೆಯಬಹುದು. ಒಬ್ಬ ಸದಸ್ಯರಿಗೆ ವಾರ್ಷಿಕ 250 ಪತಿ, ಪತ್ನಿ ಮತ್ತು 25 ವರ್ಷದ ಒಳಗಿನ ಮಕ್ಕಳಿಗೆ ಸೇರಿ 520 ರೂಪಾಯಿ ತಂದೆ, ತಾಯಿಗಳಿಗೆ ತಲಾ 100 ರೂಪಾಯಿ ಹೆಚ್ಚುವರಿ ನೀಡಿ ಸದಸ್ಯತ್ವ ಪಡೆಯಬಹುದು. ಈ ಕಾರ್ಡಿನ ಜೊತೆ ಎಲ್ಲ ಪ್ರಕಾರದ ದಂತಚಿಕಿತ್ಸೆಗೆ ಶೇ.25 ರಷ್ಟು ರಿಯಾಯತಿ ನೀಡುವ ದಂತ ಆರೋಗ್ಯ ಕಾರ್ಡ್ನ್ನು ಉಚಿತವಾಗಿ ನೀಡಲಾಗುವುದು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಮಂಗಳೂರು ಕೆಎಂಸಿ, ಕೆಎಂಸಿ ಅತ್ತಾವರ, ಉಡುಪಿ ಮತ್ತು ಕಾರ್ಕಳ ಡಾ.ಟಿ.ಎಂ.ಎ ಪೈ ಆಸ್ಪತ್ರೆಗಳಲ್ಲಿ ಈ ಕಾರ್ಡ್ ಬಳಸಿ ಚಿಕಿತ್ಸೆ ಪಡೆಯಬಹುದು.• ನೋಂದಣಿ ಆರಂಭವಾಗಿದ್ದು ಜುಲೈ 26 ರವರೆಗೆ ಸದಸ್ಯತ್ವ ಪಡೆದವರು ಅಗಸ್ಟ್ 1 ರಿಂದ ಸೌಲಭ್ಯ ಪಡೆಯಬಹುದು. ಜಿಲ್ಲೆಯ ಎಲ್ಲ ಸೇಂಟ್ ಮಿಲಾಗ್ರಿಸ್ ಬ್ಯಾಂಕುಗಳಲ್ಲಿ, ಏಜೆಂಟರುಗಳಲ್ಲಿ, ಹೊನ್ನಾವರ ಮಾಹಿತಿ ಕೇಂದ್ರದಲ್ಲಿ ಸದಸ್ಯತ್ವ ಪಡೆಯಬಹುದು. ಸಣ್ಣ ಮೊತ್ತದಲ್ಲಿ ಪ್ರಸಿದ್ಧ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆಯನ್ನು ಪಡೆಯಲು ಸದಸ್ಯರಾಗಲು ಅವರು ಕರೆ ನೀಡಿದರು. ಎಎಂ ರವಿಕಿರಣ ಪೈ ಸ್ವಾಗತಿಸಿ, ವಂದಿಸಿದರು.
Leave a Comment