ಹೊನ್ನಾವರ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನಿಲ್ ನಾಯ್ಕು ತಡರಾತ್ರಿ ಸರಕಾರಿ ತಾಲೂಕು ಆರೋಗ್ಯ ಕೇಂದ್ರಕ್ಕೆ ಧಿಡೀರ್ ಭೇಟಿ ನೀಡಿ ಅನಾರೋಗ್ಯಕ್ಕೆ ಒಳಗಾದವರೊಂದಿಗೆ ಶುಶ್ರೂಷೆ, ಸ್ಥಿತಿ ಗತಿಗಳ ಬಗ್ಗೆ ಮಾತನಾಡಿ ನಂತರ ಆಸ್ಪತ್ರೆಯ ಎಲ್ಲ ಘಟಕಗಳನ್ನು ಪರಿಶೀಲಿಸಿದರು. ವೈದ್ಯಾಧಿಕಾರಿಗಳೊಂದಿಗೆ ಕುಂದು ಕೊರತೆಯ ಬಗ್ಗೆ ಚರ್ಚಿಸಿ ಆಸ್ಪತ್ರೆಯ ಡಯಾಲಿಸಿಸ್ ಘಟಕಕ್ಕೆ ವಿದ್ಯುತ್ ಜನರೇಟರ್ ನ ಅವಶ್ಯಕತೆ ಇರುವುದನ್ನು ತಿಳಿದು ಅತಿ ಶೀಘ್ರದಲ್ಲಿ ಅದನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುತ್ತೆನೆ ಎಂದು ಭರವಸೆ ನೀಡಿದರು.
Leave a Comment