ಹೊನ್ನಾವರ: ಪಾದಾಚಾರಿಗೆ ವಾಹನ ಗುದಿಪರಿಣಾಮ ವ್ಯಕ್ತಿಯೊರ್ವ ಗಂಭಿರ ಗಾಯಗೊಂಡ ಘಟನೆ ತಾಲೂಕಿನ ಕವಲಕ್ಕಿ ರಾಷ್ಟ್ರೀಯ ಹೆದ್ದಾರಿ 206 ರ ಸಂಭವಿಸಿದೆ.
ತಾಲೂಕಿನ ಕವಲಕ್ಕಿ ರಾಷ್ಟ್ರೀಯ ಹೆದ್ದಾರಿ 206 ರ ಮೇಲೆ ನಡೆದುಕೊಂಡು ಹೊಗುತ್ತಿದ್ದ ಪಾದಾಚಾರಿ ರಾಮಚಂದ್ರ ಸುಬ್ರಾಯ ಹೆಗಡೆ(50) ಕೊಂಡದಕೆರೆ ಅವರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೋಲೆರೋ ವಾಹನದಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾಗ ವಾಹನ ಸಂಖ್ಯೆ ಏಂ 47 9291 ಚಾಲಕ ಮಂಜುನಾಥ್ ಮಂಜು ಗೌಡ ಮೈ ಮೇಲೆ ಹಾರಿಸಿ, ಬೋಲೇರೋ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಮಂಜುನಾಥ್ ಮಂಜು ಗೌಡ ಮಾವಿನಕುರ್ವಾ ಹೊಂಡದಗದ್ದೆ ನಿವಾಸಿ. ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಆದರೂ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ವಾಹನ ವಶಕ್ಕೆ ಪಡೆದು ತನಿಖೆ ಕೈ ಗೊಂಡ ಪೋಲೀಸರು ಆರೋಪಿ ಮಂಜುನಾಥ್ ಗೌಡ ಬಂಧನಕ್ಕೆ ಬಲೆ ಬೀಸಿದ್ದಾರೆ
Leave a Comment