
ಮಕ್ಕಳಲ್ಲಿರುವ ಪ್ರತಿಭೆ ಪ್ರಕಾಶಿಸಬೇಕು , ಆಟ ಪಾಠದ ಜೊತೆಗೆ ಮಕ್ಕಳು ಸಾಂಸ್ಕ್ರತಿಕ ಕಲೆಗಳನ್ನು ಅಭ್ಯಸಿಸಬೇಕು ಎಂದು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡು ಮಕ್ಕಳಿಗೆ ಆಶಾ ಕಿರಣವಾಗಿದೆ ಎಂದು ವಾ,ಕಾ,ರ,ಸಾ,ನಿಗಮದ ಅದ್ಯಕ್ಷ ವಿ,ಎಸ, ಪಾಟೀಲ್ ಹೇಳಿದರು.
ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಕೆಯ ಜೋಯಿಡಾ ಶ್ರೀ ರಾಮ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಾಗೂ ಪ್ರಕೃತಿ ವಿಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು, ಇಂದಿನ ಪಾಲಕರು ತಮ್ಮ ಮಕ್ಕಳು ಹೆಚ್ಚು ಅಂಕ ಪಡೆಯಲಿ ಎಂದು ಟ್ಯೂಶನ್ಗೆ ಕಳಿಸುತ್ತಾರೆ, ಅವರಿಲ್ಲಿರುವ ಕಲೆ ಮತ್ತು ಸಾಹಿತ್ಯದ ಬಗ್ಗೆ ಗಮನಿಸುವುದೆ ಇಲ್ಲಾ, ಮಕ್ಕಳನ್ನು ಸ್ವಚ್ಚಂದವಾಗಿ ಬಿಟ್ಟು ಅವರಲ್ಲಿರುವ ಸೂಕ್ತ ಪ್ರತಿಭೆಗಳು ಹೊರ ಬರಲು ಅವಕಾಶ ನೀಡಬೇಕು , ಮಕ್ಕಳಲ್ಲಿರುವ ಕಲೆ ಗುರುತಿಸುವಲ್ಲಿ ಗುರುವಿನ ಪಾತ್ರ ಅತೀ ಮುಖ್ಯವಾದದ್ದು, ಅವರ ಲವಲವಿಕೆಯನ್ನು ಕಂಡು ಅವರಲ್ಲಿರುವ ಕಲೆಯನ್ನು ಪ್ರೋತ್ಸಾಹಿಸಬೇಕು, ಗುರುವಿನ ತಪ್ಪಿನಿಂದ ಮಕ್ಕಳಲ್ಲಿನ ಕಲೆ ಹಾಳಾಗಬಾರದು, ಪಾಲಕರು ಕೂಡಾ ಮಕ್ಕಳ ಬಗ್ಗೆ ಜವಾಬ್ದಾರಿ ಇಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್,ಎಲ್,ಘೋಟ್ನೇಕರ ಮಾತನಾಡಿ ಜೋಯಿಡಾ ಹಿಂದುಳಿದಿಲ್ಲ ಎಂದು ಇಮದು ನಡೆದ ಜಿಲ್ಲಾ ಮಟ್ಟದ ಈ ಕಾರ್ಯಕ್ರಮ ಏತ್ತಿ ತೋರಿಸಿದೆ, ತಾಲೂಕಿನ ಜನರು ಅತಿಥಿ ಸತ್ಕಾರದ ಗುಣ ಹೊಂದಿದವರು, ಪರಿಸರ ಪ್ರೇಮಿಗಳು, ಈ ಜನರಿಂದಾಗಿಯೇ ಇಲ್ಲಿ ಸುಂದರ ಪರಿಸರ ಉಳಿದುಕೊಂಡಿದೆ, ಉತ್ತಮ ಪ್ರವಾಸೋದ್ಯಮ ನಡೆಯುತ್ತಿದೆ, ಇನ್ನೂ ಕೆಲವೇ ವರ್ಷಗಳಲ್ಲಿ ಜೋಯಿಡಾ ಎರಡನೇ ಗೋವಾ ಆಗಲಿದೆ, ಅಷ್ಟೂ ಸೌಂದರ್ಯ ಪ್ರಕೃತಿ ತಾಣಗಳು ಇಲ್ಲಿವೆ, ಕಾಳಿ ನದಿಯು ಕೂಡಾ ಪ್ರವಾಸೋದ್ಯಮಕ್ಕೆ ಸಾಕಷ್ಟು ಮೆರಗು ನೀಡಿದೆ. ಹಾಗೆಯೇ ಇಲ್ಲಿನ ಪ್ರತಿಬೆಗಳು ವಿವಿಧ ರಂಗಗಳಲ್ಲಿ ರಾಜ್ಯ ,ದೇಶ ಮಟ್ಟದಲ್ಲಿ ಬೆಳಕು ಕಂಡಿದೆ, ಇನ್ನು ಕೂಡಾ ಸಾಕಷ್ಟು ಪ್ರತಿಭೆಗಳು ಹೊರ ಹೊಮ್ಮಲಿ ಎಂದರು,

ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಮೊದಲು ಜೋಯಿಡಾ ಮುಖ್ಯ ವೃತ್ತದಿಂದ ಮೆರವಣೀಗೆಯ ಮೂಲಕ ಗಣ್ಯರು ವೇದಿಕೆಗೆ ಆಗಮಿಸಿದರು.
ವೇದಿಕೆಯಲ್ಲಿ ಜಿ,ಪಂ,ಉಪಾಧ್ಯಕ್ಷ ಸಂತೋಷ ರೇಣುಕೆ, ಜಿ,ಪಂ,ಸದಸ್ಯರಾದ ರಮೇಶ ನಾಯ್ಕ, ಸಂಜಯ, ಹಣಬರ, ತಾ,ಪಂ,ಅದ್ಯಕ್ಷೆ ನರ್ಮದಾ ಪಾಟ್ನೇಕರ, ತಾ,ಪಂ,ಕಾರ್ಯನಿರ್ವಣಾಧಿಕಾರಿ ಆನಂದ ,ಬಿ, ಜನಪ್ರತಿನಿಧಿಗಳಾದ ವಿಜಯ ಪಂಡಿತ, ಶೈಲಾ ನಾಯ್ಕ, ಶ್ಯಾಮ ಪೊಕಳೆ, ಸಂತೋಷ ಮಂಥೇರೋ, ಅಲ್ಕಾಂಜಾ ಮಂಥೇರೋ, ತುಕಾರಾಮ ಮಾಜ್ರೇಕರ, ವಿನಯ ದೇಸಾಯಿ, ಇತರರು ಉಪಸ್ಥಿತರಿದ್ದರು. ಜಿಲ್ಲಾ ಪ್ರಶಸ್ತಿ ವಿಜೇತ ವಿಷ್ಟು ಪಟಗಾರ ಕಾರ್ಯಕ್ರಮವನ್ನು ನಿರೂಪಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ವಂದಿಸಿದರು.
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ ಜೋಯಿಡಾ ಭಾಗದ ಜಿ,ಪಂ,ಸದಸ್ಯ ರಮೇಶ ನಾಯ್ಕ ಸಂಪೂರ್ಣ ಊಟದ ವ್ಯವಸ್ಥೆ ಮತ್ತು ಅರ್ಧಕ್ಕಿಂತ ಹೆಚ್ಚು ಖರ್ಚನ್ನು ವಹಿಸಿಕೊಂಡು ಶಿಕ್ಷಣ ಇಲಾಕೆಗೆ ಬಹು ದೊಡ್ಡ ಸಹಾಯ ಮಾಡಿದರು. ಶಿಕ್ಷಣ ಇಲಾಕೆಯ ಶಿಕ್ಷಕರು ಮತ್ತು ಜೋಯಿಡಾ ಭಾಗದ ಜನರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಯಶಸ್ವಿಯಾಗಲು ಸಹಕರಿಸಿದರು.

ಜಿ,ಪಂ,ಸದಸ್ಯ ರಮೇಶ ನಾಯ್ಕ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಉತ್ಸಾಹದಿಂದ ಜವಾಬ್ದಾರಿ ಹೊತ್ತು ಕಾರ್ಯಕ್ರಮ ಸಂಘಟಿಸಲು ಸಹಾಯ ಮಾಡಿದರು, ಜೋಯಿಡಾ ಗ್ರಾ,ಪಂ,ದ ಶ್ಯಾಮ ಪೊಕಳೆ, ಸಂತೋಷ ಮಂಥೇರೋ, ವಿನಯ ದೇಸಾಯಿ, ಗಣೇಶ ಹೆಗಡೆ, ಕಾರ್ಯಕ್ರಮದ ಕುಂದು ಕೊರತೆಗಳನ್ನು ನೋಡಿಕೊಂಡು, ಅಲ್ಲದೇ ವೇದಿಕೆಯಲ್ಲಿ ಇದ್ದ ಎಲ್ಲರ ಬಾಯಲ್ಲೂ ಮಾಜಿ ಸಚಿವ, ಶಾಸಕರಾದ ಆರ್,ವಿ,ದೇಶಪಾಂಡೆ ಬರಬೇಕಿತ್ತು, ಇದು ಅವರದೇ ವೇದಿಕೆ ಎಂಬ ಮಾತು ಬರುತ್ತಿದ್ದವು.


Leave a Comment