
ಜೋಯಿಡಾ –
ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿದ್ದಾಗ ಮಾತ್ರ ಸಂಘಗಳ ಅಭಿವೃದ್ದಿ ಸಾಧ್ಯ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅದ್ಯಕ್ಷ ಎನ್,ವಿ,ಹೆಗಡೆ ಹೇಳಿದರು,
ಅವರು ಜೋಯಿಡಾ ತಾಲೂಕಿನ ನಂದಿಗದ್ದಾ ಸೇವಾ ಸಹಾಕರಿ ಸಂಘದ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಉತ್ತರಕನ್ನಡ ಜಿಲ್ಲಾ ಸಹಕಾರಿ ಯುನಿಯನ್ ಕುಮಟಾ,ಕೆ,ಡಿ,ಸಿ,ಸಿ, ಬ್ಯಾಂಕ್ ಶಿರಸಿ ,ಹಾಗೂ ನಂದಿಗದ್ದಾ ಸೇವಾ ಸಹಕಾರಿ ಸಂಘದವರ ಸಹಯೋಗದಲ್ಲಿ ಹಮ್ಮಿಕೊಂಡ 66 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ನಾಲ್ಕನೇ ದಿನದಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ಕಾರದ ಸಾಲ ಮನ್ನಾದಂತ ಯೋಜನೆಗಳು ರೈತರಿಗೆ ಸಹಾಯವಾಗಿದೆ, ಆದರೆ ಇದರಿಂದ ಸಹಕಾರಿ ಸಂಘಗಳಿಗೆ ಹಾನಿ ಉಂಟಾಗಿದೆ, ಕೂಡಲೇ ಸಾಲಮನ್ನಾದಂತ ಸರ್ಕಾರದಿಂದ ಬರತಕ್ಕ ಹಣ ಬಾರದೇ ಹೋದಲ್ಲಿ ಸಂಘಕ್ಕೆ ಬಾರಿ ನಷ್ಟ ಉಂಟಾಗುತ್ತದೆ, ಸಹಕಾರಿ ಸಂಘದಲ್ಲಿ ಪಕ್ಷ ರಾಜಕೀಯ ಮಾಡಬಾರದು , ರಾಜಕೀಯ ಮಾಡುವುದರಿಂದ ಸಹಕಾರಿ ಸಂಘಗಳು ಅವನತಿಯ ಹಾದಿಯತ್ತ ಸಾಗುತ್ತದೆ, ಮತ್ತು ಸಹಕಾರಿ ಸಂಘದಲ್ಲಿ ಕಾರ್ಯದರ್ಶಿ ಮತ್ತು ಆಡಳಿತ ಕಮಿಟಿಯವರ ಹೊಂದಾಣಿಕೆ ಸರಿ ಇಲ್ಲದೆ ಹೋದರೆ ಸಂಘ ಉನ್ನತಿ ಹೊಂದಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ಜೋಯಿಡಾ ತಾಲೂಕಿನಲ್ಲಿಯೇ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಕಾರ್ಯಕ್ರಮ ನಡೆಯುವಂತೆ ಆಗಲಿ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿಗದ್ದಾ ಸೇವಾ ಸಹಕಾರಿ ಸಂಘದ ನಿವೃತ್ತ ಕಾರ್ಯದರ್ಶಿ ಎಸ್,ಟಿ,ದಾನಗೇರಿ 50 ವರ್ಷಗಳ ಹಿಂದೆ ನಾವು ಸಹಕಾರಿ ಸಂಘಗಳ ಹಾದಿಯನ್ನು ಗಮನಿಸಿದರೇ ಎಲ್ಲಾ ಸಹಕಾರಿ ಸಂಘಗಳು ನಷ್ಟದಾಯಕವೇ ಆಗಿದ್ದವು , ಆದರೆ ಸರ್ಕಾರದ ಅನೇಕ ಯೋಜನೆಗಳು ಸಹಕಾರಿ ಸಂಘಗಳು ಲಾಭಗಳಿಸುವಂತೆ ಮಾಡಿದೆ, ಸಹಕಾರಿ ಸಂಘದಲ್ಲಿ ಕೆಲಸ ಮಾಡುವವರು ಜನರ ಜೊತೆ ಪರಸ್ಪರ ಹೊಂದಾಣಿಕೆಯ ಮನೋಭಾವ ಇಟ್ಟುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ಅನುಭವಿ ಆರ್,ಎನ್,ಹೆಗಡೆ ಮಾತನಾಡಿ ಕಾನೂನಿನಂತೆ ಸಹಕಾರಿ ಸಂಘಗಳು ನಡೆಯಬೇಕು, ಸಂಘದ ಹೆಚ್ಚಿನ ಒತ್ತಡ ಕಾರ್ಯದರ್ಶಿಯ ಮೇಲೆ ಇರುತ್ತದೆ, ಮುಂದಿನ ದಿನಗಳಲ್ಲಿ ಸಹಕಾರಿ ಕಾನೂನುಗಳ ಬಗ್ಗೆ ತರಬೇತಿ ಶಿಬಿರ ಜೋಯಿಡಾ ತಾಲೂಕಿನಲ್ಲಿ ಆಗಲಿ ಎಂದರು.
ಈ ಸಂದರ್ಭದಲ್ಲಿ ಜೋಯಿಡಾ ತಾಲೂಕಿನ ಉತ್ತಮ ಸೇವಾ ಸಹಕಾರಿ ಸಂಘಗಳಿಗೆ ಸನ್ಮಾನ ಮಾಡಲಾಯಿತು, ಸನ್ಮಾನಿತರ ಪರ ಕೆ,ಡಿ,ಸಿ,ಸಿ,ಬ್ಯಾಂಕ್ ನಿರ್ದೇಶಕ ಕೃಷ್ಟಾ ದೇಸಾಯಿ ಮತ್ತು ರಾಮನಗರದ ಸುಪಾ ಗ್ರೂಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗುರುನಾಥ ಕಾಮತ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಉತ್ತರಕನ್ನಡ ಸಹಕಾರಿ ಯುನಿಯನದ ನಿರ್ದೇಶಕ ತಿಮ್ಮಣ್ಣ ಗಾಂವ್ಕರ ಮಾತನಾಡಿದರು.
ವೇದಿಕೆಯಲ್ಲಿ ಪಿ,ಎಲ್,ಡಿ,ಬ್ಯಾಂಕ್ ಜಗಲಬೆಟದ ಅದ್ಯಕ್ಷ ಆನಂದ ಪೊಕಳೆ, ಪ್ರಧಾನಿ ಸಹಕಾರಿ ಸಂಘದ ಉಪಾಧ್ಯಕ್ಷ ತುಷಾರ್ ಎಸ್, ಕಮಲಾಕರ, ಎಚ್, ಮಂಜುನಾಥ ಭಾಗ್ವತ, ಇತರರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಕುಮಟಾ ಸಹಕಾರಿ ಸಂಘಗಳ ಯುನಿಯನ್ ಸಿಬ್ಬಂದಿಗಳಾದ ಗೋಪಾಲ ನಾಯ್ಕ, ಲೋಹಿತ ಗಾವಡೆ ನಿರೂಪಿಸಿದರು.
Leave a Comment