ಬದುಕೆಂದರೆ ಹಾಗೇ ಅದೊಂದು ಅನಂತ ತಿರುವುಗಳ ಹಾದಿಯ ಪಯಣ. ಯಾವ ತಿರುವಿನಲ್ಲಿ ಯಾರ ಬದುಕು ಹೇಗೆ ಬದಲಾಗುತ್ತದೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಕೆಲವು ಸಲ ಕಷ್ಟದ ಕುಲುಮೆಯಲ್ಲಿ ಬೇಯುತ್ತಿರುವವರ ಬಾಳಲ್ಲಿ ಸಂತಸದ ಹೊನಲು ಹರಿಯಬಹುದು. ಅಥವಾ ಸರಾಗವಾಗಿ ಸಾಗುತ್ತಿದ್ದ ಬದುಕಿನ ಬಂಡಿ ಸವಾಲುಗಳ ಸರಮಾಲೆಯನ್ನು ಸುತ್ತಿಕೊಂಡು ನರಳಬಹುದು. 28 ಹರೆಯದ ಯುವಕ ಅಪ್ಸರಕೊಂಡದ ಮಹೇಂದ್ರ ಮಂಜುನಾಥ ತಾಂಡೇಲ್ ಬದುಕಿನಲ್ಲಿ ಘಟಿಸಿದ್ದು ಮಾತ್ರ ಎರಡನೇಯದ್ದೇ.


ಎಲ್ಲರಂತೆಯೇ ಸಾದಾ ಸೀದಾ ಬದುಕುತ್ತಿದ್ದ ಮಹೇಂದ್ರ ಇದ್ದಕ್ಕಿದ್ದಂತೆ ಜ್ವರದಿಂದ ಬಳಲುವುದಕ್ಕೆ ಸುರುಮಾಡಿದ. ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನ ಚಿಕಿತ್ಸೆ ಪಡೆದರೂ ಪರಿಣಾಮಕಾರಿಯಾಗದ ಹಿನ್ನಲೆಯಲ್ಲಿ ತಾಲೂಕಾಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿದಾಗ ಇಲಿಜ್ವರದಿಂದ ಯುವಕನ ಲಿವರ್, ಕಿಡ್ನಿ, ಶ್ವಾಸಕೋಶಕ್ಕೆ ತೀವೃ ಹಾನಿಯಾಗಿದ್ದು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದಾಗ ಅಂಬುಲೆನ್ಸ್ಗೂ ಹಣವಿಲ್ಲದಿದ್ದಾಗ ಸಂಬಂಧಿಕರು ಹಣ ಹೊಂದಿಸಿ ಕಳುಹಿಸಿಕೊಟ್ಟಿದ್ದರು. ಇತ್ತ ಮಗನ ಅನಾರೋಗ್ಯದಿಂದ ಚಿಂತಾಕ್ರಾಂತರಾಗಿದ್ದ ತಂದೆಗೆ ಸೆಪ್ಟಂಬರ್ 27 ಹೃದಯಾಘಾತವಾಗಿ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ.
ತಂದೆಯ ಸಾವಿನ ಬಗ್ಗೆಯೂ ತಿಳಿಯದ ಮಹೇಂದ್ರ ಅರೆ ಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬರುತ್ತಿದೆ ಎನ್ನಲಾಗಿದೆ. ಈಗಾಗಲೇ ಆಸ್ಪತ್ರೆಯ ಖರ್ಚು ನಾಲ್ಕು ಲಕ್ಷ ದಾಟಿದ್ದು ಮಹೇಂದ್ರನ ಬಡಕುಟುಂಬಕ್ಕೆ ವೆಚ್ಚ ಭರಿಸುವ ಶಕ್ತಿ ಇಲ್ಲ. ಸಹೃದಯಿಗಳು ಆರ್ಥಿಕ ಸಹಾಯ ಮಾಡುವ ಮೂಲಕ ಇವರ ಕಷ್ಟದಲ್ಲಿ ಜೊತೆಯಾಗಲು ಮನವಿ ಮಾಡಿಕೊಂಡಿದ್ದಾರೆ. ಸಹಾಯಮಾಡಲಿಚ್ಚಿಸುವವರು ಸಿಂಡಿಕೇಟ್ ಬ್ಯಾಂಕ್ ಹೊನ್ನಾವರ ಶಾಖೆ ಅಕೌಂಟ್ ನಂಬರ್ : 03022200137455 -ಐ.ಎಪ್.ಎಸ್.ಸಿ ಕೋಡ್ : ಎಸ್.ವೈ.ಎನ್.ಬಿ 0000302 ಮೊಬೈಲ್ : 9739483607 ಹಣ ಸಂದಾಯ ಮಾಡಬಹುದು
Leave a Comment