ಹೊನ್ನಾವರ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಾವಿನಕುರ್ವಾ ಗ್ರಾಮ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮಾವಿನಕುರ್ವಾ ಗ್ರಾಮದ ಹೊಸಾಡ, ಮಂಡಲಕುರ್ವಾ ಭಾಗದ ಒಟ್ಟು 46.44 ಲಕ್ಷ ನೀರು ಸರಬರಾಜು ಯೋಜನೆಗೆ ಶಾಸಕ ಸುನೀಲ್ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ,ಮಾವಿನಕುರ್ವಾಕ್ಕೆ ಸೇತುವೆ ಮಂಜೂರು ಮಾಡುವುದನ್ನು ಒಂದು ಸವಾಲ್ ಆಗಿ ಸ್ವಿಕರಿಸಿದ್ದೆ. ಈ ಭಾಗವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಹಿಂದಿನ ಜನಪ್ರತಿನಿಧಿಗಳು ಹೊಲಸು ರಾಜಕಾರಣ ಮರೆತುಬಿಡಿ. ಮುಂದಿನ ಅಭಿವೃದ್ಧಿಗೆ ಕೈ ಜೋಡಿಸಿ ಎಂದರು.

ಜಿ.ಜಿ.ಶಂಕರ್ ಮಾತನಾಡಿ ಗ್ರಾಮದ ಎಲ್ಲರಿಗೂ ಸರ್ಕಾರದ ಯೋಜನೆಗಳ ಸಮಾನ ರೀತಿಯಲ್ಲಿ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಕಾಳಜಿ ವಹಿಸುತ್ತೆವೆ. ಮಾವಿನಕುರ್ವಾದ ಜನಮಾನಸದಲ್ಲಿ ಅಚ್ಚುಳಿಯುವಂತಹ ಇಲ್ಲಿನ ಜನರ ದಶಕಗಳ ಬೇಡಿಕೆಯಾದ ಸೇತುವೆ ಮಂಜೂರು ಮಾಡಿಸುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಶಾಸಕರ ಸಹಕಾರ,ಸಹಾಯಹಸ್ತದೊಂದಿಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರು ಒಂದಾಗಿ ಶ್ರಮೀಶೋಣ ಎಂದರು.
ಈ ಸಂದರ್ಭದಲ್ಲಿ ಪಂಚಾಯತ ರಾಜ್ ಇಲಾಖೆಯ ಪ್ರಭಾರ ಸಹಾಯಕ ಇಂಜಿನಿಯರ್ ಪ್ರದೀಪ್ ಆಚಾರಿ, ಮಾವಿನಕುರ್ವಾ ಗ್ರಾಮ ಪಂಚಾಯತ ಪಿಡಿಒ ಉದಯ್ ಕುಮಾರ್.ಪಿ, ಕಾರ್ಯದರ್ಶಿ ಉದಯ್ ಖಾರ್ವಿ, ಗ್ರಾಮ ಪಂಚಾಯತ ಸದಸ್ಯರಾದ ಪೀಟರ್ ಮೆಂಡೊನ್ಸಾ ವೇಂಕಟ್ರಮಣ ಮೇಸ್ತ ,ಮಂಜು ಗೌಡ,ವನಿತಾ ಗೌಡ,ಸವಿತಾ ನಾಯ್ಕ,ಕಮಲಾ ಗೌಡ,ಸುಮನಾ, ಪ್ರಕಾಶ್ ಪಿಂಟೋ,ಗಿರಗೊಲ್ ಪುಡ್ತೋದ್,ಚಿಕ್ಕನ ಕೊಡ್ ಗ್ರಾ.ಪಂ ಅಧ್ಯಕ್ಷ ವಿಘ್ನೇಶ್ವರ ಹೆಗಡೆ,ಗುತ್ತಿಗೆದಾರ ಸತೀಶ್ ಗೌಡ ಮತ್ತಿತರಿದ್ದರು.
ನಂತರ ಮಾವಿನಕುರ್ವಾ ಗ್ರಾಮ ಪಂಚಾಯತಕ್ಕೆ ಶಾಸಕರಾದ ಮೇಲೆ ಪ್ರಥಮ ಬಾರಿಗೆ ಸುನೀಲ್ ನಾಯ್ಕ ಭೇಟಿ ನೀಡಿ ಅವಲೋಕಿಸಿದರು. ಪಂಚಾಯತ ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿ,ಯೋಜನೆಗಳ ಬಗ್ಗೆ ಅಧ್ಯಕ್ಷ,ಸದಸ್ಯರಿಂದ ವಿವರ ಪಡೆದು ಶೀಘ್ರವಾಗಿ ಮಂಜೂರಾತಿ ಮಾಡಿಸುವ ಭರವಸೆ ನೀಡಿದರು.
Leave a Comment