2021-22 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಾಳೆ ,ಪಪ್ಪಾಯಿ, ಮಾವು, ಚಿಕ್ಕು, ದ್ರಾಕ್ಷಿ,ದಾಳಿಂಬೆ, ನೇರಳೆ ,ಗೇರು ತೆಂಗು , ವೀಳ್ಯದೆಲೆ, ನುಗ್ಗೆ ,ನಿಂಬೆ , ಪೇರಳೆ ,ಬಾರೆ, ಸೀತಾಫಲ ,ಅಂಜೂರ, ಕರಿಬೇವು ಮುಂತಾದ ಹಣ್ಣಿನ ಹಾಗೂ ತೋಟದ ಬೆಳೆಗಳ ಪ್ರದೇಶ ವಿಸ್ತರಣೆ, ಹಳೆಯ ತೋಟಗಳ ಪುನಶ್ಚೇತನ ಕಾರ್ಯಕ್ರಮ ಬದುಗಳಲ್ಲಿ ಹಣ್ಣಿನ ಸಸಿಗಳ ನಾಟಿ ಮಾಡುವುದು, ಬೋರೆವೆಲ್ ಗಳ ಮರುಪೂರಣ ಕೃಷಿ ಹೊಂಡ ಮತ್ತು ಸರ್ಕಾರಿ ವಸತಿ ನಿಲಯ ಹಾಗೂ ಶಾಲೆಗಳ ಸುತ್ತಮುತ್ತಲು ಪೌಷ್ಟಿಕ ತೋಟ ನಿರ್ಮಾಣ ಕಾಮಗಾರಿ ಅವಕಾಶವಿರುತ್ತದೆ.
ಆಸಕ್ತ ಬಿ.ಪಿ.ಎಲ್ ಕಾರ್ಡ್ ಹೊಂದಿದ ಪರಿಶಿಷ್ಟ ಜಾತಿ ಪಂಗಡ ರೈತರು ಸಣ್ಣ ಅತಿ ಸಣ್ಣ ರೈತರು ಹಾಗೂ ಪ್ರಕಟಣೆಯಲ್ಲಿ ಸೂಚಿಸಿದ ಇತರೆ ವರ್ಗದ ರೈತರು ಸಂಬಂಧಪಟ್ಟ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಅರ್ಜಿಗಳನ್ನು ಜುಲೈ 24 ರ ಒಳಗಾಗಿ ಸಲ್ಲಿಸಲು ಬೆಳಗಾವಿ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
25 ಕೋಟಿ ಲೋನ್ ಕಹಾನಿಯಲ್ಲಿ ಯಾರೇ ಇದ್ರೂ ಬಿಡೋದಿಲ್ಲ#Darshan Press Meet
Leave a Comment