• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೈ .ಟಿ.ಎಸ್.ಎಸ್ ಪ್ರಾಂಶುಪಾಲರಾಗಿ ವಾಣಿಶ್ರೀ ಹೆಗಡೆ

August 3, 2021 by Jayaraj Govi Leave a Comment


 ಯಲ್ಲಾಪುರ: ಪಟ್ಟಣದ ಪ್ರತಿಷ್ಠಿತ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ೬೦ ವರ್ಷಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮಹಿಳಾ ಪ್ರಾಂಶುಪಾಲರಾಗಿ ವಾಣಿಶ್ರೀ ಈಶ್ವರ ಹೆಗಡೆ ಅವರು ಸೋಮವಾರ ಅಧಿಕಾರವಹಿಸಿಕೊಂಡರು

IMG 20210802 WA0033 1

೨೦೧೩ರಲ್ಲಿ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಜೀವಶಾಸ್ತç ಉಪನ್ಯಾಸಕಿಯಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ ಅವರು ಇದೀಗ ಪ್ರಾಂಶುಪಾಲರಾಗಿದ್ದ ಜಯರಾಮ ಗುನಾಗಾ ನಿವೃತ್ತರಾದ ಹಿನ್ನಲೆಯಲ್ಲಿ ಪ್ರಾಚಾರ್ಯರ ಹುದ್ದೆಗೆ ಬಡ್ತಿ ಹೊಂದಿದ್ದಾರೆ.

 ಮೂಲತಃ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ವರನಕೇರಿಯವರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಳ್ಳಂಕಿಯಲ್ಲಿಯೂ ಪ್ರೌಢಶಾಲಾ ಶಿಕ್ಷಣವನ್ನು ಹೊನ್ನಾವರದ ಪ್ರತಿಷ್ಠಿತ ನ್ಯೂ ಇಂಗ್ಲೀಷ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ.

ಪದವಿಪೂರ್ವ ಶಿಕ್ಷಣವನ್ನು ಮೂಲ್ಕಿಯ ವಿಜಯಾ ಕಾಲೇಜು, ಬಿಎಸ್ಸಿ ಪದವಿಯನ್ನು ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲೂ, ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಪ್ರೌಢಶಾಲಾ ದಿನಗಳಿಂದಲೂ ಆದರ್ಶ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿದವರಾಗಿದ್ದಾರೆ.

ಪ್ರೌಢಶಾಲೆ, ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿ ಹಲವಾರು ಜಿಲ್ಲಾ ಹಾಗೂ ವಿಶ್ವವಿದ್ಯಾನಿಲಯ ಮಟ್ಟದ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ರಾಜ್ಯಮಟ್ಟದ ನಾಟಕ ಅಕಾಡೆಮಿಯಿಂದ “ಅತ್ಯುತ್ತಮ ನಟಿ” ಪ್ರಶಸ್ತಿ ಪಡೆದಿದ್ದಾರೆ.

೨೦೦೬ರಲ್ಲಿ ಡಿಡಿ ಚಂದನದಲ್ಲಿ ಪ್ರಸಾರವಾದ ೨ ಟೆಲಿಫಿಲ್ಮ್ಗಳಲ್ಲೂ ನಟಿಸಿದ್ದಾರೆ. ೨೦೧೪ರಲ್ಲಿ ಧಾರವಾಡ ವಿಶ್ವವಿದ್ಯಾನಿಲಯದಿಂದ ಬಿ.ಇಡಿ ಪದವಿಯನ್ನು ಪಡೆದಿದ್ದು ಜು.೨೫ರಂದು ನಡೆದ ಕೆ-ಸೆಟ್ ಪರೀಕ್ಷೆಯನ್ನೂ ಬರೆದಿದ್ದು ಫಲಿತಾಂಶ ಬರಬೇಕಿದೆ. ಈಗಾಗಲೇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕಿಯಾಗಿದ್ದರು. ಅವರೇ ಪ್ರಾಂಶುಪಾಲರಾಗಿದ್ದು ವಿದ್ಯಾರ್ಥಿಗಳಲ್ಲಿ ಸಂತಸ ಹೆಚ್ಚಿದೆ.

Yellapura news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ

https://chat.whatsapp.com/D0Ry5Povwke1s77ibSLq4A

ಇನ್ನೇರಡು ವರ್ಷ  ಸಹಿಸಿಕೊಂಡಿರಿ ನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ:ಸಿದ್ದರಾಮಯ್ಯ

ಇ- ರುಪಿ ಆ್ಯಪ್‌ಗೆ ಪಿಎಂ ಚಾಲನೆ
ದುಬಾರಿ ಚುಚ್ಚುಮದ್ದು ಪಡೆದಿದ್ದ ಹಸುಳೆ ಸಾವು

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Yellapur Tagged With: ೨ ಟೆಲಿಫಿಲ್ಮ್ಗಳಲ್ಲೂ ನಟಿಸಿದ್ದಾರೆ, ೨೦೧೪ರಲ್ಲಿ ಧಾರವಾಡ ವಿಶ್ವವಿದ್ಯಾನಿಲ, ಅತ್ಯುತ್ತಮ ನಟಿ” ಪ್ರಶಸ್ತಿ, ಎಸ್.ಡಿ.ಎಂ ಕಾಲೇಜಿನಲ್ಲೂ, ಡಿಡಿ ಚಂದನದಲ್ಲಿ ಪ್ರಸಾರವಾದ, ಮೈಸೂರು ವಿಶ್ವವಿದ್ಯಾಲ, ಸಾಂಸ್ಕೃತಿಕ ಚಟುವಟಿಕೆ, ಸ್ನಾತಕೋತ್ತರ ಪದವಿ, ಹೊಸಾಕುಳಿ ಗ್ರಾಮದ ವರನಕೇರಿ

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,113 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...