ಸಿದ್ಧಾಪುರ : ಬೆಂಗಳೂರಿನ ಹೋಗುವ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಕರ ಹಣ ಕದ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮ್ಗೊಗ ಜಿಲ್ಲೆ ಭದ್ರಾವತಿ ತಾಲೂಕಿನ, ಕುವೆಂಪುನಗರ ಹೆಸಮನೆಯ ಯಾದಗಿರಿ ತಂದೆ ಮಲ್ಲಯ್ಯ ಬೋವಿ ಬಂಧಿತ ಆರೋಪಿ. ಈತ 3/11/2020 ರಂದು ಶಿರಸಿಯಿಂದ ಬೆಂಗಳೂರಿಗೆ ಹೋಗುವ ರಾಜಹಂಸ ಬಸ್ಸಿನಲ್ಲಿ ಸಿದ್ದಾಪುರ ತಾಲೂಕಿನ ನೆಲೆಮಾಂವು ಗ್ರಾಮ ಅಣಲೇಬೈಲು ನಿವಾಸಿಗಳಾದ ರಘುಪತಿ ಭಟ್ಟ ಹಾಗೂ ಗಣಪತಿ ಭಟ್ಟ ಅವರುಗಳು ಬಸ್ಸಿನ ಲಗೇಜ್ ಕ್ಯಾರಿಯರ್ ಮೇಲೆ ಇಟ್ಟಿದ್ದ ಬ್ಯಗಿನಲ್ಲಿದ್ದ 5 ಲಕ್ಷ 50 ಸಾವಿರ ರೂ. ಹಣವನ್ನು ಕದ್ದು ಪರಾರಿಯಾಗಿದ್ದ.

ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಪತ್ತೆಯ ಕುರಿತು ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭದ್ರಿನಾಥ, ಪೊಲೀಸುಪಾದೀಕ್ಷಕ ರವಿ ನಾಯಕ ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣೆಯ ಕುಮಾರ ಕೆ. ನೇತೃತ್ವದಲ್ಲಿ ಪಿಎಸ್ಐಗಳಾದ ಮಹಾಂತಪ್ಪ ಕುಂಬಾರ, ಮಂಚೇಶ್ವರ ಚಂದಾವರ ಶಿರಸಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕೋಟೇಶ ನಾಗರವಳ್ಳಿ ಹಾಗೂ ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಗಂಘಾಧರ ಹೊಂಗಲ್, ರಮೇಶ ಕೂಡಲ್ ರಾಘವೆಂದ್ರ ಜಿ, ರವಿ ಜಿ, ನಾಯ್ಕರವರು ಸೇರಿ ರಾಜಹಂಸ ಬಸ್ಸಿನಲ್ಲಿ ನಗದು ಹಣ ಕಳ್ಳತನ ಮಾಡಿ
ಆರೋಪಿತನಾದ ಶಿವಮೊಗ್ಗಾ ಜಿಲ್ಲೆ ಭದ್ರಾವತಿ ತಾಲೂಕಿನ, ಕುವೆಂಪುನಗರ ಹೊಸಮನೆಯ ಯಾದಗಿರಿ ತಂದೆ ಮಲ್ಲಯ್ಯ ಬೋವಿ ಈತನನು 04/08/2021 ರಂದು ಸಿದ್ಧಾಪುರ ತಾಲೂಕಿನ ಚೂರಿಕಟ್ಟಾಬಳಿ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಆತನಿಂದ ಕಳ್ಳತನ ಮಾಡಿದ ಹಣದ ಪೈಕಿ ರೂ. 1 ಲಕ್ಷ ನಗದು ಹಣವನ್ನು ವಶಪಡಿಸಿಕುಳ್ಳಲಾಗಿದೆ.
Leave a Comment