ಹೊನ್ನಾವರ: ಕಳೆದ ಮೇ 1 ಕಾರ್ಮಿಕ ದಿನಾಚರಣೆಯಂದೇ ಮುಂಜಾನೆ ವೇಳೆ ಶರಾವತಿ ನದಿಯಲ್ಲಿ ಮರಳುಗಾರಿಕೆಗೆ ತೆರಳುತ್ತಿರುವಾಗ ಆಕಸ್ಮಿಕವಾಗಿ ದೋಣಿಯಿಂದ ನದಿಗೆ ಬಿದ್ದು ಮೃತಪಟ್ಟಿದ್ದ ತಾಲ್ಲೂಕಿನ ಮಾವಿನಕುರ್ವಾದ ವಿಷ್ಣು ಪದ್ಮಯ್ಯ ಗೌಡ ಕುಟುಂಬಕ್ಕೆತಾಲೂಕಿನ ಮಾವಿನಕುರ್ವಾದ ಶರಾವತಿ ರೇತಿ ದೋಣಿ ಮಾಲೀಕರು, ಕಾರ್ಮಿಕರ ಸಂಘ ಆರ್ಥಿಕ ಸಹಾಯ ನೀಡಿದೆ.
ಸಂಘದ ಸದಸ್ಯರು ತಮ್ಮ ದುಡಿಮೆಯ ಹಣ ಒಗ್ಗೂಡಿಸಿಕೊಂಡು ಸೋಮವಾರ ಮಾವಿನಕುರ್ವಾದ ಗದ್ದೆಮನೆಯಲ್ಲಿರುವ ಮೃತ ವಿಷ್ಣುವಿನ ಮನೆಗೆ ತೆರಳಿ ಒಂದು ಲಕ್ಷ ರೂಪಾಯಿ ಹಣವನ್ನು ಮೃತ ವಿಷ್ಣು ಅವರ ತಾಯಿಗೆ ಹಸ್ತಾಂತರಿಸುವ ಮೂಲಕ ಸಹೃದಯಿ ಸಂಘದ ಸರ್ವ ಸದಸ್ಯರು ಮನಕಲಕುವ ಘಟನೆಗೆ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ಶರಾವತಿ ರೇತಿ ದೋಣಿ ಮಾಲೀಕರು, ಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ನಮ್ಮೊಡನೆ ಮರಳು ಕಾರ್ಮಿಕನಾಗಿದ್ದ ವಿಷ್ಣುವನ್ನು ಕಳೆದುಕೊಂಡಿದ್ದೇವೆ. ಆತನಿಲ್ಲದ ಕುಟುಂಬಕ್ಕೆ ಅಳಿಲು ಸೇವೆಯಂಬಂತೆ ಸಹಾಯ ಮಾಡಬೇಕೆಂದು ನಿರ್ಧರಿಸಿದ್ದೇವು.ಆ ಪ್ರಕಾರವಾಗಿ ಸಂಘದ ಸದಸ್ಯರೆಲ್ಲರೂ ಒಡಗೂಡಿ ಕುಟುಂಬವನ್ನು ಸಂಪರ್ಕಿಸಿ ಹಣ ನೀಡಿದೆವು ಎಂದರು. ಮಾವಿನಕುರ್ವಾ ಗ್ರಾ.ಪಂ ಅಧ್ಯಕ್ಷರಾಗಿರುವ ಜಿ.ಜಿ ಶಂಕರ್ ಅವರು ಸಹ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಸಿಗಬೇಕಾದ ಪರಿಹಾರ ಧನ ಒದಗಿಸುವ ಬಗ್ಗೆ ಭರವಸೆ ನೀಡಿದರು.
ಶರಾವತಿ ರೇತಿ ದೋಣಿ ಮಾಲೀಕರು, ಕಾರ್ಮಿಕರ ಸಂಘ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾನವೀಯ ಕಾರ್ಯಕ್ಕೆ ಸಂಘಟನೆ ಮಾದರಿಯಾಗಿದೆ ಎಂದರು.ಮೃತ ಕಾರ್ಮಿಕ ವಿಷ್ಣು ಕುಟುಂಬಕ್ಕೆ ಕಾರ್ಮಿಕ ನಿಧಿಯ ಪರಿಹಾರಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ.ಪರಿಹಾರದ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ ವತಿಯಿಂದ ಆಗುವ ಎಲ್ಲಾ ಪ್ರಯತ್ನ ನಡೆಸುತ್ತೇವೆ ಎಂದರು.
ಈ ಸಂದರ್ಭದಲ್ಲಿಸಂಘದ ಗೌರವಾಧ್ಯಕ್ಷ ಗೋವಿಂದ ಗೌಡ, ಮಾವಿನಕುರ್ವಾ ಗ್ರಾ.ಪಂ ಸದಸ್ಯರು,ಮಾವಿನಕುರ್ವಾ ಶರಾವತಿ ರೇತಿ ದೋಣಿ ಮಾಲೀಕ, ಕಾರ್ಮಿಕರ ಸಂಘದ ಕಾರ್ಯದರ್ಶಿ ಹರಿಶ್ಚಂದ್ರ ನಾಯ್ಕ,ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
Leave a Comment