ಹೊನ್ನಾವರ : ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರ ಗುರುವಾರ ಭೇಟಿ ನೀಡಿದರು.
ಹೊನ್ನಾವರದÀ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘ, ಗೃಂಥಾಲಯ, ಮಿಡಿಯೆಷನ್ ಸೆಂಟರ್, ಲೀಗಲ್ ಎಡ್ ಕಚೇರಿ, ವಕೀಲರಿಗೆ ಕಚೇರಿ, ಸಭಾಗೃಹ, ಇನ್ನಿತರ ಸಂಕಿರ್ಣಗಳ ನಿರ್ಮಾಣಕ್ಕೆ ಸರ್ಕಾರವು ಮೂರು ಕೋಟಿ ವೆಚ್ಚದ ಯೋಜನೆಯನ್ನು ಸಿದ್ದಪಡಿಸಿದ್ದು ಯೊಜನೆಯ ಪೂರ್ವಭಾವಿಯಾಗಿ ಅಭಿಯಂತರರ ಜೊತೆಗೆ ಸ್ಥಳ ಪರಿಶೀಲಿಸಿದರು.

ಈ ಸಂದÀರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ., ಜೆ.ಎಂ.ಎಫ್.ಸಿ ನ್ಯಾಯಾಧೀಶ ಜಿ.ಬಿ. ಹಳ್ಳಕಾಯ್, ವಕೀಲ ಸಂಘದ ಅಧ್ಯಕ್ಷ ಜಿ. ವಿ. ಭಟ್ಟ, ಕಾರ್ಯದರ್ಶಿ ಮನೋಜ್ ಜಾಲಿಸತ್ಗಿ, ವಕೀಲ ಸಂಘದ ಸದಸ್ಯರುಗಳು ಲೋಕೊಪಯೊಗಿ ಅಭಿಯಂತರ ಎಂ. ಎಸ್. ನಾಯ್ಕ, ಸರ್ಕಾರಿ ಅಭಿಯೊಜಕರಾದ ವೆಂಕಟೇಶ ಗೌಡ, ಸಂಪದ ನಾಯಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
¥
Leave a Comment