ಕಾರವಾರ:ಐತಿಹಾಸಿಕ ಹಿನ್ನಲೆಯ ಅವರ್ಸಾ ಪಂಚಗ್ರಾಮ ಭೂದೇವಿ ದೇವರ ಬಂಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಗ್ರಾಮದ ಭೂದೇವಿ ದೇವಾಲಯದಿಂದ ಅಲಂಕಾರ ಭೂಷಿತಾವಾಗಿ ಸಾಂಪ್ರದಾಯಿಕ ವಾದ್ಯ, ಪಂಚಗ್ರಾಮ ಗುನಗರು, ಬ್ರಾಹ್ಮಣರು ಹಾಗೂ ಸಾವಿರಾರು ಭಕ್ತಾದಿಗಳ ಜೈಕಾರದ ಘೋಷಣೆಯೊಂದಿಗೆ ಸಾಗಿದ ಕಳಶ ನೇರವಾಗಿ ಬೀದಿಬೀರ ದೇವಾಲಯಕ್ಕೆ ತೆರಳಿತು. ಮೆರವಣಿಗೆಯಲ್ಲಿ ಸಾಗುವ ಸಂದರ್ಭದಲ್ಲಿ ಗ್ರಾಮದ ಲಕ್ಷ್ಮಿ ನಾರಾಯಣ ದೇವಾಲಯದ ಎದುರು ಕಳಶ ತಿರುಗುವ ದೃಶ್ಯ ನೋಡಲು … [Read more...] about ಅವರ್ಸಾ ಪಂಚಗ್ರಾಮ ಭೂದೇವಿ ದೇವರ ಬಂಡಿ ಉತ್ಸವ
National News
ಜಿಲ್ಲಾ ಪಂಚಾಯತ ಸಭೆ
ಕಾರವಾರ:ಅಸಮರ್ಪಕ ಮತ್ತು ತಪ್ಪು ಮಾಹಿತಿ ನೀಡುತ್ತಿದ್ದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಜಿ.ಪಂ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು. ಜಿ.ಪಂ ಸದಸ್ಯೆ ಪುಷ್ಪಾ ನಾಯ್ಕ ಮಾತನಾಡಿ ಹೊನ್ನಾವರದ ಬಾಳುಬೆಲೆಯಲ್ಲಿ ಕನ್ನಡ ಶಾಲೆ ಶಿಥಿಲಾವಸ್ಥೆ ತಲುಪಿದ್ದು, ಕೂಡಲೇ ನೂತನ ಕಟ್ಟಡ ನಿರ್ಮಿಸುವಂತೆ ಕಳೆದ ಮೂರು ವರ್ಷದಿಂದ ಒತ್ತಾಯಿಸಲಾಗುತ್ತಿದೆ. ಆದರೆ ಕಳೆದ ಕೆಲ ತಿಂಗಳ … [Read more...] about ಜಿಲ್ಲಾ ಪಂಚಾಯತ ಸಭೆ
ಉದ್ಯೋಗ ಮೇಳದ ಕುರಿತು ಸುದ್ದಿಗೊಷ್ಟಿ ನಡೆಸಿದ ಗಣೇಶ ಮಾಂಡ್ರೆ
ಕಾರವಾರ:ಬಾಲಮಂದಿರ ಪ್ರೌಢಶಾಲೆಯಲ್ಲಿ ಮೇ 21ರಂದು ಖಾಸಗಿ ಶಾಲಾ ಶಿಕ್ಷಕರ ನೇಮಕಾತಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ರಾಜ್ಯ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಕೇಂದ್ರದ ಮುಖ್ಯಸ್ಥ ಗಣೇಶ ಮಾಂಡ್ರೆ ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಕೇಂದ್ರ ಹಾಗೂ ಧಾರವಾಡದ ಉದ್ಯೋಗ ಸಮಯ ವಾರಪತ್ರಿಕೆ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉದ್ಯೋಗ ಮೇಳ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳ ಖಾಸಗಿ … [Read more...] about ಉದ್ಯೋಗ ಮೇಳದ ಕುರಿತು ಸುದ್ದಿಗೊಷ್ಟಿ ನಡೆಸಿದ ಗಣೇಶ ಮಾಂಡ್ರೆ
ಜಿಲ್ಲಾ ಪಂಚಾಯತದಲ್ಲಿ ಆಯವ್ಯಯ ಮಂಡನೆ ನಡೆಯಿತು
ಕಾರವಾರ:ಉತ್ತರ ಕನ್ನಡ ಜಿಲ್ಲಾ ಪಂಚಾಯತ್‍ನ 2017-18ನೇ ಸಾಲಿನಲ್ಲಿ ಒಟ್ಟು 78388.18 ಲಕ್ಷ ರೂ. ಮೊತ್ತದ ಒಟ್ಟು ಆಯವ್ಯಯಕ್ಕೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಆಯವ್ಯಯವನ್ನು ಸಭೆಯಲ್ಲಿ ಮಂಡಿಸಿದರು. ಇದರಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ 24654.89 ಲಕ್ಷ ರೂ. ಮತ್ತು ತಾಲೂಕು ಪಂಚಾಯತ್ ಕಾರ್ಯಕ್ರಮಗಳಿಗೆ ಲೆಕ್ಕ ಶೀರ್ಷಿಕೆಯಡಿಯಲ್ಲಿ ರೂ 51257.29 ಲಕ್ಷ ಹಾಗೂ ಗ್ರಾಮ ಪಂಚಾಯತ್ … [Read more...] about ಜಿಲ್ಲಾ ಪಂಚಾಯತದಲ್ಲಿ ಆಯವ್ಯಯ ಮಂಡನೆ ನಡೆಯಿತು
ಹೊನ್ನಾವರದಲ್ಲಿ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯನ್ನು ಉದ್ಘಾಟಿಸಲಾಯಿತು
ಹೊನ್ನಾವರ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುತ್ತಿದ್ದು, ನಿರುದ್ಯೋಗಿ ಯುವಕ ಯುವತಿಯರಿಗೆ ಉಪಯೋಗವಾಗಲೆಂದು ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ನಿರುದೋಗಿಗಳಿಗೆ ಬಹುಪಯೋಗವಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಿ.ಪಂ.ಸದಸ್ಯೆ ಪುಷ್ಪಾ ನಾಯ್ಕ ಹೇಳಿದರು. ತಾಲೂಕು ಆಡಳಿದ ಆಶ್ರಯದಲ್ಲಿ ನಡೆದ … [Read more...] about ಹೊನ್ನಾವರದಲ್ಲಿ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯನ್ನು ಉದ್ಘಾಟಿಸಲಾಯಿತು



