ಕಾರವಾರ:
ಬಾಲಮಂದಿರ ಪ್ರೌಢಶಾಲೆಯಲ್ಲಿ ಮೇ 21ರಂದು ಖಾಸಗಿ ಶಾಲಾ ಶಿಕ್ಷಕರ ನೇಮಕಾತಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ರಾಜ್ಯ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಕೇಂದ್ರದ ಮುಖ್ಯಸ್ಥ ಗಣೇಶ ಮಾಂಡ್ರೆ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಕೇಂದ್ರ ಹಾಗೂ ಧಾರವಾಡದ ಉದ್ಯೋಗ ಸಮಯ ವಾರಪತ್ರಿಕೆ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉದ್ಯೋಗ ಮೇಳ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳ ಖಾಸಗಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಇದೆ. ಇದನ್ನು ನೀಗಿಸಲು ಹಾಗೂ ವಿದ್ಯಾವಂತರಿಗೆ ಸರಿಯಾದ ಉದ್ಯೋಗ ಒದಗಿಸಲು ಮೇಳ ಹಮ್ಮಿಕೊಳ್ಳಲಾಗಿದೆ ಎಂದರು. ಸರಕಾರಿ ನೌಕರಿಯನ್ನು ಪಡೆಯುವ ನಿಟ್ಟಿನಲ್ಲಿ ಶಿಕ್ಷಕರ ಅರ್ಹತೆ ಪಡೆದ ಅದೇಷ್ಟೋ ಉದ್ಯೋಗ ಆಕಾಂಕ್ಷಿಗಳು ಸರಿಯಾದ ಕೆಲಸವಿಲ್ಲದೆ ಪರದಾಡುವಂತೆ ಆಗಿದೆ. ಇಂತವರಿಗೆ ಸೂಕ್ತ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮತ್ತು ಶಿಕ್ಷಕರಾಗಲು ಅರ್ಹರಿರುವ ಅಭ್ಯರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿ ಭÉೀಟಿಯಾಗಿ ತಮ್ಮಗಿಷ್ಟವಾದಂತಹ ಶಾಲೆ ಮತ್ತು ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ತಾತ್ಕಾಲಿಕ ನೇರ ನೇಮಕಾತಿಗೆ ಅವಕಾಶ ಮಾಡಿಕೊಡಲಾಗಿದೆ. ಇದು ಶಾಲಾ-ಕಾಲೇಜುಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಅನುಕೂಲಕರವಾಗಲಿದೆ ಎಂದರು.
ಪ್ರಸ್ತುತ ಉದ್ಯೋಗ ಮೇಳದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು, ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು. (ಕಲಾ,ವಿಜ್ಞಾನ, ವಾಣಿಜ್ಯ), ಪದವಿ (ಮಹಾವಿದ್ಯಾಲಯ) ಕಾಲೇಜುಗಳು. (ಕಲಾ,ವಿಜ್ಞಾನ, ವಾಣಿಜ್ಯ), ಡಿ.ಇಡಿ, ಬಿ.ಇಡಿ ಮಹಾವಿದ್ಯಾಲಯಗಳು ಐ.ಟಿ.ಐ/ಡಿಪ್ಲೋಮಾ ಕಾಲೇಜುಗಳು, ಮುಂತಾದ ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸುತ್ತಿವೆ. ಪ್ರಮುಖವಾಗಿ ಖಾಲಿ ಇರುವ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರಾಚಾರ್ಯರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಥಮ/ದ್ವೀತಿಯ ದರ್ಜೆ ಸಹಾಯಕರು, ಗ್ರಂಥಪಾಲಕರು, ಸಿಪಾಯಿಗಳು, ಆಯಾಗಳು ಶಾಲಾ ವಾಹನ ಚಾಲಕರು, ಸೇಕ್ಯೂರಿಟಿ ಗಾರ್ಡ್ಗಳ ಹುದ್ದೆಗಳಿಗೆ ವಿದ್ಯಾರ್ಹತೆಗನುಗುಣವಾಗಿ ಆಯ್ಕೆ ನಡೆಯಲಿದೆ ಎಂದರು.
ಉದ್ಯೋಗ ಮೇಳದಲ್ಲಿ ಸುಮಾರು 200 ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿದ್ದು, 1000ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಮೊ.ನಂ 8088644209 ಗೆ ಉಚಿತ ಮಿಸ್ಡ್ ಕಾಲ್ ಮಾಡುವ ಮೂಲಕ ಹೆಸರು ನೋಂದಾಯಿಸಬಹುದು. ಮೇ 21 ರಂದು ಬೇಳಿಗ್ಗೆ 8 ರಿಂದ ಸಂದರ್ಶನ ನಡೆಯಲಿದ್ದು, ಅಭ್ಯರ್ಥಿಗಳು ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲಾತಿ ಪ್ರಮಾಣ ಪತ್ರಗಳ 6 ಝೆರಾಕ್ಸ ಪ್ರತಿ ಮತ್ತು ಇತ್ತಿಚಿನ ಭಾವಚಿತ್ರದೊಂದಿಗೆ 1 ಸೆಟ್ ಝೆರಾಕ್ಸ ಪ್ರತಿ ಲಗತ್ತಿಸಿ ಅರ್ಜಿ ತುಂಬಿ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಪಡೆಯುವಂತೆ ಅವರು ಕೋರಿದ್ದಾರೆ. ಅಲ್ಲದೆ ಹೆಚ್ಚಿನ ಮಾಹಿತಿಗೆ ಮೊ.ನಂ : 9945169432, 9886569432ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
Leave a Comment