ಕಾರವಾರ: ಭಾರತೀಯ ನೌಕಾನೆಲೆ ಯೋಜನೆಯಿಂದ ನಿರಾಶ್ರಿತರಾದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಚಂಡಿಯಾ, ಅರಗಾ, ಮುದಗಾ ಮೊದಲಾದ ಗ್ರಾಮದ ಜನ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಸೀಬರ್ಡ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಇನ್ನು ಭೂ ಪರಿಹಾರ ದೊರೆತಿಲ್ಲ. ಉದ್ಯೋಗದಲ್ಲಿಯೂ ಮೀಸಲಾತಿ ಸಿಕ್ಕಿಲ್ಲ. ಹಿಂದಿನಿಂದಲೂ ಮೀನುಗಾರಿಕೆ, ಕೃಷಿ, ಕೂಲಿಯನ್ನು ಮಾಡುತ್ತಿದ್ದ ಜನ ಆರ್ಥಿಕವಾಗಿ ಹಿಂದೂಳಿದಿದ್ದು ಇವರ … [Read more...] about ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರವಾರದ ಅರಗಾ, ಚಂಡಿಯಾ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ
Karwar News
ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕಾರವಾರ-ಅಂಕೋಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿಸಬೇಕು;ರತನ್ ದುರ್ಗೇಕರ ಆಗ್ರಹ
ಕಾರವಾರ:ಶಿರಸಿ ಕ್ಷೇತ್ರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕಾರವಾರ-ಅಂಕೋಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿಸಬೇಕು ಎಂದು ಬಿಜೆಪಿ ಮಾಜಿ ಯುವಮೋರ್ಚಾ ಅಧ್ಯಕ್ಷ ರತನ್ ದುರ್ಗೇಕರ ಆಗ್ರಹಿಸಿದ್ದಾರೆ. ಈ ಕುರಿತು ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ಈ ಹಿಂದೆ ಅಂಕೋಲಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಗೇರಿಯವರಿಗೆ ಈ ಭಾಗದಲ್ಲಿ ಅಪಾರ ಬೆಂಬಲಿಗರಿದ್ದಾರೆ. ಕಾಗೇರಿ ಸಂಘ ಪರಿವಾರದಿಂದ ಬಂದವರಾಗಿದ್ದು, … [Read more...] about ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕಾರವಾರ-ಅಂಕೋಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿಸಬೇಕು;ರತನ್ ದುರ್ಗೇಕರ ಆಗ್ರಹ
ಕರಾವಳಿ ಉತ್ಸವ 2017ರ ಅಂಗವಾಗಿ ಕಲ್ಲಿನ ಶಿಲ್ಪಕಲಾ ಕೃತಿ ರಚನಾ ಶಿಬಿರ
ಕಾರವಾರ:ಕರಾವಳಿ ಉತ್ಸವ 2017ರ ಅಂಗವಾಗಿ ಕಲ್ಲಿನ ಶಿಲ್ಪಕಲಾ ಕೃತಿ ರಚನಾ ಶಿಬಿರ ನಡೆಸಲಾಗುತ್ತಿದ್ದು, ಆಸಕ್ತ ಕಲಾವಿದರು ನ.18 ರೊಳಗೆ ತಮ್ಮ ಹೆಸರುಗಳನ್ನು ಶಿಲ್ಪ ಕಲಾ ನಿರ್ಮಾಣ ಸಮಿತಿ ಬಳಿ ಹೆಸರು ನೊಂದಾಯಿಸಿಕೊಳ್ಳಲು ಶಿಲ್ಪ ಕಲಾ ನಿರ್ಮಾಣ ಸಮಿತಿ ಅಧ್ಯಕ್ಷರು ವಿನಂತಿಸಿದ್ದಾರೆ. ಉತ್ಸವದ ಅಂಗವಾಗಿ ನಡೆಯುವ ಶಿಲ್ಪಕಲಾ ರಚನಾ ಶಿಬಿರದಲ್ಲಿ ರೂಪಗೊಂಡ ಕಲಾ ಕೃತಿಗಳನ್ನು ರಾಕ್ ಗಾರ್ಡನ್‍ನಲ್ಲಿ ಪ್ರತಿಷ್ಠಾಪಿಸಲು ಯೋಜಿಸಲಾಗಿದೆ. ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ … [Read more...] about ಕರಾವಳಿ ಉತ್ಸವ 2017ರ ಅಂಗವಾಗಿ ಕಲ್ಲಿನ ಶಿಲ್ಪಕಲಾ ಕೃತಿ ರಚನಾ ಶಿಬಿರ
ಅಕ್ರಮ ಮದ್ಯ ವಶ
ಕಾರವಾರ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ 50ಸಾವಿರ ರೂ ಮೌಲ್ಯದ ಗೋವಾ ಮದ್ಯವನ್ನು ಆಳ್ವೇವಾಡ ಬಳಿ ವಶಕ್ಕೆ ಪಡೆದರು. ಈ ವೇಳೆ ಆರೋಪಿ ವಾಹನ ಬಿಟ್ಟು ನಾಪತ್ತೆಯಾಗಿದ್ದು, ಅಬಕಾರಿ ನಿರೀಕ್ಷಕಿ ಸುವರ್ಣ ನಾಯ್ಕ ಅಕ್ರಮ ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ವಶದಲ್ಲಿರಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. … [Read more...] about ಅಕ್ರಮ ಮದ್ಯ ವಶ
153 ವಾರಗಳಿಂದ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಅಭಿಯಾನ
ಕಾರವಾರ: ಸಾರ್ವಜನಿಕರಲ್ಲಿ ಸ್ವಚ್ಛತಾ ಪ್ರಜ್ಞೆ ಮೂಡಿಸುವುದರ ಜತೆಗೆ ಸತತ 153 ವಾರಗಳಿಂದ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುವುದರ ಮೂಲಕ ಮಾದರಿಯಾಗಿರುವ ಪಹರೆ ವೇದಿಕೆ ಪಾದಾಧಿಕಾರಿಗಳು, ಕಾರ್ಯಕರ್ತರು ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸುತ್ತಮುತ್ತ ಸ್ವಚ್ಛತೆ ನಡೆಸಿದರು. ವಾರ್ತಾ ಇಲಾಖೆ ಸುತ್ತಮುತ್ತಲಿನ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಿತ್ತು, ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಕಸ, ಪ್ಲಾಸ್ಟಿಕ್ ಬಾಟಲ್ ಹಾಗೂ … [Read more...] about 153 ವಾರಗಳಿಂದ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಅಭಿಯಾನ


