ಹಳಿಯಾಳ:ಕೇಂದ್ರ ಸರ್ಕಾರದ ಉಜ್ವಲಾ ಯೋಜನೆಯು ಅಡುಗೆ ಅನಿಲ ಸಂಪರ್ಕ ಇಲ್ಲದವರಿಗೆ ಉಚಿತವಾಗಿ ಸಂಪರ್ಕ ನೀಡಲಾಗುತ್ತದೆ ಎಂದು ಬಿಜೆಪಿ ಪಕ್ಷದವರು ಸುಳ್ಳು ಹೇಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದು ಯೋಜನೆಯಲ್ಲಿನ ನೀಜಾಂಶವನ್ನು ಜನರಿಗೆ ತಿಳಿಸಿ ಹೊರತು ಸತ್ಯಾಂಶವನ್ನು ಮುಚ್ಚಿಟ್ಟು ಜನರ ಕಣ್ಣಿಗೆ ಮಂಕುಬೂದಿ ಎರಚಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಶನಿವಾರ ಸಾಯಂಕಾಲ ಇಲ್ಲಿಯ ದೇಶಪಾಂಡೆ ಭವನದಲ್ಲಿ … [Read more...] about ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ;ಸಚಿವ ಆರ್.ವಿ.ದೇಶಪಾಂಡೆ
ಗ್ರಾಮ
ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಹಳಿಯಾಳ;ನದಿಗೆ ಈಜಲು ತೆರಳಿದ ವಿದ್ಯಾರ್ಥಿಯೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಳಿಯಾಳ ಪಟ್ಟಣದಿಂದ 3 ಕೀಮಿ ಅಂತರದಲ್ಲಿರುವ ಕಳಸಾಪೂರ ಗ್ರಾಮದ ನದಿಯಲ್ಲಿ ಸಂಭವಿಸಿದೆ. ಪಟ್ಟಣದ ಗಾಂಧಿಕೇರಿ ನಿವಾಸಿ ಗೌತಮ ಪರಶುರಾಮ್ ಕುರಿಯಾರ್ (20) ನೀರಿನ ಸೆಳೆತಕ್ಕೆ ಪ್ರಾಣಬಿಟ್ಟ ವಿದ್ಯಾರ್ಥಿಯಾಗಿದ್ದು ಇತ ಶನಿವಾರ ತನ್ನ ಇಬ್ಬರು ಸ್ನೇಹಿತರೊಂದಿಗೆ ಹಳ್ಳಕ್ಕೆ ಹೊಗಿದ್ದು ಸುಮಾರು ಗಂಟೆಗಳ ಕಾಲ ಈಜಿ ಕೊನೆಗೆ ದಡಕ್ಕೆ ಬರುವಾಗ ಗೌತಮ ನೀರಿನಲ್ಲಿ ಕಣ್ಮರೆಯಾಗಿದ್ದಾನೆ. … [Read more...] about ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಅಕ್ರಮ ಮದ್ಯ ವಶ
ಹೊನ್ನಾವರ:ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ರಮೇಶ ಜನ್ನಾ ತಾಂಡೇಲ್ ಈತನ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 1.60 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಸೋಮವಾರ ತಡ ರಾತ್ರಿ ಇಲ್ಲಿಯ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಗೋವಾ ರಾಜ್ಯದ 750 ಮಿಲೀ. ಸಾಮಥ್ರ್ಯದ 631 ಗ್ರೀನ್ ಲ್ಯಾಂಡ್ ಕೋಕೋನೆಟ್ ಫೆನ್ನಿಯ ಪ್ಲಾಸ್ಟಿಕ್ ಬಾಟಲಿಗಳು (473.250ಲೀ) ಹಾಗೂ 180 ಮಿಲೀ ಹನಿಗ್ರೇಡ್ ವಿಸ್ಕಿಯ 672 … [Read more...] about ಅಕ್ರಮ ಮದ್ಯ ವಶ
ಎಚ್1ಎನ್1: ಮಹಿಳೆ ಸಾವು
ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಎಚ್1ಎನ್1 ರೋಗಕ್ಕೆ ಮಹಿಳೆಯೋರ್ವಳು ಬಲಿಯಾಗಿದ್ದು, ರೋಗ ಪತ್ತೆಯಾದ ಇಬ್ಬರು ಮಕ್ಕಳನ್ನು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಭಟ್ಕಳ ತಾಲೂಕಿನ ಕರಿಕಲ್ ಗ್ರಾಮದ ಮಹಿಳೆ ನಾಗರತ್ನ ಶನಿಯಾರ ಮೊಗೇರ (35) ಮೃತಪಟ್ಟವರು. 3 ದಿನಗಳ ಹಿಂದೆ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೂ ಹೊನ್ನಾವರ ತಾಲೂಕಿನ … [Read more...] about ಎಚ್1ಎನ್1: ಮಹಿಳೆ ಸಾವು
ಪಂಚಾಯತ್ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆವ್ಹಾನ
ಹೊನ್ನಾವರ ತಾಲೂಕಿನ ಉಪ್ಪೋಣಿ ಮತ್ತು ಅಂಕೋಲಾ ತಾಲೂಕಿನ ವಂದಿಗೆ ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕ ಹುದ್ದೆಗೆ ರೂ. 7 ಸಾವಿರ ಮಾಸಿಕ ಗೌರವಸಂಭಾವನೆ ಆಧಾರದ ಮೇಲೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆವ್ಹಾನಿಸಲಾಗಿದೆ. ಅರ್ಜಿ ಸಲ್ಲಿಸ ಬಯಸುವ ಸಾಮಾನ್ಯ ಅಭ್ಯರ್ಥಿ (ಮಾಜಿ ಸೈನಿಕ) 35 ವರ್ಷ, ಮತ್ತು ಹಿಂದುಳಿದ ವರ್ಗಗಳ 2ಎ ಅಭ್ಯರ್ಥಿ(ಮಾಜಿ ಸೈನಿಕ) 38 ವರ್ಷ ವಯೋಮಿತಿಯೊಳಗಿದ್ದು ಎಸ್.ಎಸ್.ಎಲ್.ಸಿ ಉತ್ತಿರ್ಣರಾಗಿಬೇಕು. ಗ್ರಂಥಾಲಯ ವಿಜ್ಞಾನದಲ್ಲಿ … [Read more...] about ಪಂಚಾಯತ್ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆವ್ಹಾನ