ಹೊನ್ನಾವರ: ನಾನು ಕುಳಿತ ಖುರ್ಚಿ ಬದಲಾಗಬಹುದು. ಮೈಯೊಳಗಿನ ರಕ್ತ ಬದಲಾಗುವುದಿಲ್ಲ. ಮೈಯೊಳಗಿನ ರಕ್ತದ ಗೌರವಕ್ಕೆ ಚ್ಯುತಿ ಬಂದರೆ ಈ ಖುರ್ಚಿ, ಅಧಿಕಾರ ಯಾವುದೂ ನನಗೆ ಬೇಡ ಎಂದು ಕೇಂದ್ರ ಸರಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ಬಿಜೆಪಿ ತಾಲೂಕಾ ಮಂಡಲದ ವತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ … [Read more...] about ಕೇಂದ್ರ ಕೌಶಲ್ಯಾಭಿವೃದ್ದಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಅಭಿನಂದನೆ ಸ್ವೀಕರಿಸಿ ಮಾತನಾಡಿದರು
ಹಾಗೂ
‘ಗುರುವಂದನಾ’ ಕಾರ್ಯಕ್ರಮ
ಹೊನ್ನಾವರ; ತಾಲೂಕಿನ ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀಕ್ಷೇತ್ರ ಬಂಗಾರಮಕ್ಕಿ ಗೇರಸೊಪ್ಪಾದಲ್ಲಿ, ಚಾತುರ್ಮಾಸ್ಯದ ಸೀಮೋಲಂಘನ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ ‘ಗುರುವಂದನಾ’ ಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ಹರಸಿದರು. ಈ ಕಾರ್ಯಕ್ರಮದಲ್ಲಿ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ ಬಂಗಾರಮಕ್ಕಿ ಹಾಗೂ ಸಿಲೆಕ್ಟ … [Read more...] about ‘ಗುರುವಂದನಾ’ ಕಾರ್ಯಕ್ರಮ
ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಟ
ಕಾರವಾರ: ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಕೋಡಿಭಾಗದ ಮರಾಠೆ ಸ್ಕೂಲ್ ಬಳಿ ನಡೆದಿದೆ. ಗಣೇಶ ವಿಸರ್ಜನೆ ವೇಳೆ ಕೋಡಿಭಾಗದಲ್ಲಿ ನಡದ ಗಲಾಟೆಯಲ್ಲಿ ಮಹೇಶ್ ಥಾಮ್ಸೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದಕ್ಕೆ ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಒತ್ತಡವೇ ಕಾರಣ ಎಂದು ತಿಳಿದ ಸುನೀಲ ಥಾಮ್ಸೆ ಬುಧವಾರ ಈ ಕುರಿತು ಪ್ರಶ್ನಿಸಿದ್ದಾರೆ. ಇದೇ ವಿಷಯ ತಾರಕ್ಕಕ್ಕೆ ತೆರಳಿದ್ದು ಇಬ್ಬರು … [Read more...] about ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಟ
ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ;ತಹಶೀಲದಾರ ಅವರಿಗೆ ಮನವಿ
ಹಳಿಯಾಳ ;ಸಾಹಿತಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ವಿರೋಧಿಸಿ ಹಳಿಯಾಳ ಕಾರ್ಯನಿರತ ಪತ್ರಕರ್ತರ ಸಂಘ, ಜಯಕರ್ನಾಟಕ ಸಂಘಟನೆ, ಬಸವಕೇಂದ್ರ ಮತ್ತು ವಿಜಯ ಸಂದೇಶ ಪತ್ರಿಕೆಯ ಬಳಗದವರು ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೊಲೆಗಡುಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು. ಕಾರ್ಯನಿರತ ಪತ್ರಕರ್ತರ ಸಂಘವು ಸೇರಿದಂತೆ ಒಟ್ಟೂ 4 ಸಂಘಟನೆಗಳ ಪದಾಧಿಕಾರಿಗಳು ಸಾರ್ವಜನಿಕರೊಂದಿಗೆ ಸೇರಿ ಬುಧವಾರ … [Read more...] about ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ;ತಹಶೀಲದಾರ ಅವರಿಗೆ ಮನವಿ
ವಿಜೃಂಭಣೆಯಿಂದ ಜರುಗಿದ ಅನಂತ ಚತುರ್ದಶಿ
ಹೊನ್ನಾವರ:ತಾಲೂಕಿನ ಮಾವಿನಕುರ್ವಾದ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ `ಅನಂತ ಚತುರ್ದಶಿ' ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದವು. ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ, ಅನಂತ ಚತುರ್ಥ ವೃತಾಚರಣೆ, ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ, ಮಹಾನೈವೇದ್ಯ, ಹಾಗೂ ಶರಾವತಿ ನದಿಯ ತಟದಲ್ಲಿ ಯಮುನಾ ಪೂಜೆಯೊಂದಿಗೆ ವೃತ ಕಲಶ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಈ … [Read more...] about ವಿಜೃಂಭಣೆಯಿಂದ ಜರುಗಿದ ಅನಂತ ಚತುರ್ದಶಿ