ಕಾರವಾರ: ತಾಯಿಗೆ ಪೋಷಣೆ ಹಾಗೂ ಸಂರಕ್ಷಣೆ ವೆಚ್ಚ ನೀಡದ ಇಬ್ಬರು ಮಕ್ಕಳ ಮೇಲೆ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯವು ಬಂಧನದ ವಾರಂಟ್ ಜಾರಿ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದೆ. ನಗರದ ಕೆಎಚ್‍ಬಿ ಕಾಲೋನಿಯ ಸಫುರಾಜೀ ಖಾನ್ ಎಂಬುವವರ 6 ಮಂದಿ ಪುತ್ರರಲ್ಲಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಫಜಲ್ ಖಾನ್ ಹಾಗೂ ಶಬ್ಬೀರ್ ಖಾನ್ ಹೆಸರಿನಲ್ಲಿ ವಾರಂಟ್ ಜಾರಿಯಾಗಿದೆ. ತಮ್ಮ ಜೀವನ ನಿರ್ವಹಣೆ ನೋಡಿಕೊಳ್ಳುವ ವೆಚ್ಚ ನೀಡದೇ ಮಕ್ಕಳು ನಿರ್ಲಕ್ಷಿಸಿದ್ದಾರೆ … [Read more...] about ತಾಯಿಗೆ ಪೋಷಣೆ ಹಾಗೂ ಸಂರಕ್ಷಣೆ ವೆಚ್ಚ ನೀಡದ ಇಬ್ಬರ ಮಕ್ಕಳ ಮೇಲೆ ವಾರಂಟ್
ಹಾಗೂ
ಬಿ.ಆರ್ ತೋಳೆಯರಿಗೆ ಡಾಕ್ಟರೆಟ್ ಪದವಿ
ಕಾರವಾರ: ದಿವೇಕರ ಪದವಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಕ ಬಿ.ಆರ್ ತೋಳೆಯರಿಗೆ ಕುವೆಂಪು ವಿಶ್ವ ವಿದ್ಯಾಲಯ ಡಾಕ್ಟರೆಟ್ ಪದವಿ ನೀಡಿದೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಸ್.ಎಮ್.ಪ್ರಕಾಶ ಮಾರ್ಗದರ್ಶನದಲ್ಲಿ "ಬಿಜಾಪುರ ಜಿಲ್ಲೆಯ ಸೈಕ್ಲಿಂಗ್ ಸಾಧನೆ, ಅಭಿವೃದ್ದಿ ಹಾಗೂ ಬೆಳವಣಿಗೆ" ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. … [Read more...] about ಬಿ.ಆರ್ ತೋಳೆಯರಿಗೆ ಡಾಕ್ಟರೆಟ್ ಪದವಿ
ನೋಟ್‍ಬುಕ್ ವಿತರಣಾ ಕಾರ್ಯಕ್ರಮ
ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಅಡ್ಕಾರ್‍ನ ಶಾಲೆಯಲ್ಲಿ ಸಂಪ್ರಭಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಶಂಭುಲಿಂಗೇಶ್ವರ ಸಾಸ್ಕøತಿಕ ಹಾಗೂ ಕ್ರೀಡಾ ಸಂಘ ಮೂಡ್ಕಣಿ ಇವರ ಸಹಕಾರದಲ್ಲಿ 5ನೇ ವರ್ಷದ ನೋಟ್‍ಬುಕ್ ವಿತರಣಾ ಕಾರ್ಯಕ್ರಮವನ್ನು ತಾ.ಪಂ. ಸದಸ್ಯರಾಸ ಲೋಕೇಶ ಡಿ. ನಾಯ್ಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಪ್ರತೀ ವರ್ಷವೂ ಇಂತಹ ಕಾರ್ಯಕ್ರಮವನ್ನು ಸಂಘಟಿಸುತ್ತಿರುವುದಕ್ಕೆ ಅಭಿನಂದಿಸಿದಲ್ಲದೇ ವಿದ್ಯಾರ್ಥಿಗಳು ಇಂತಹ ದಾನಿಗಳು ನೀಡಿದ ಪಟ್ಟಿ … [Read more...] about ನೋಟ್‍ಬುಕ್ ವಿತರಣಾ ಕಾರ್ಯಕ್ರಮ
ಮೀನುಗಾರ ಮಹಿಳೆಯರಿಂದ ಸಮುದ್ರ ಪೂಜೆ
ಕಾರವಾರ: ನೂರಾರು ಮೀನುಗಾರ ಮಹಿಳೆಯರು ಭಾನುವಾರ ಏಕಕಾಲಕ್ಕೆ ಸಮುದ್ರ ಪೂಜೆ ನಡೆಸಿದರು. ಸಂಪ್ರದಾಯದಂತೆ ಸೂರ್ಯೋದಯ ನಗರದಲ್ಲಿನ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ನಂತರ ಸಮುದ್ರ ಪೂಜೆಗೆ ಆಗಮಿಸಿದರು. ಕಳಸದಲ್ಲಿ ಹೊತ್ತು ತಂದಿದ್ದ ತೆಂಗಿನ ಕಾಯಿ ಹಾಗೂ ನೀರನ್ನು ಕಡಲಿಗೆ ಅರ್ಪಿಸಿದರು. ಶ್ರಾವಣ ಮಾಸದ ನಾಗ ಪಂಚಮಿಯಂದು ಸಮುದ್ರದ ಉಪ್ಪು ನೀರು ಹಾಗೂ ಬಾವಿಯ ಸಿಹಿ ನೀರನ್ನು ಕಳಸದಲ್ಲಿ ತುಂಬಿ ವೃತ ಮಾಡಲಾಗುತ್ತದೆ. ಹದಿನೈದು ದಿನದ … [Read more...] about ಮೀನುಗಾರ ಮಹಿಳೆಯರಿಂದ ಸಮುದ್ರ ಪೂಜೆ
ಸರ್ಕಾರಿ ಕಾಲೇಜಿನಲ್ಲಿ ನಡೆದ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ‍್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ
ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಹಾಗೂ ವಕೀಲರ ಸಂಘದ ವತಿಯಿಂದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ‍್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಟಿ ಗೋವಿಂದಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಯಾವದೇ ಆಸೆ ಆಮೀಷಗಳಿಗೆ ಬಲಿಯಾಗದೇ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ವಕೀಲರ … [Read more...] about ಸರ್ಕಾರಿ ಕಾಲೇಜಿನಲ್ಲಿ ನಡೆದ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ‍್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ