ಹೊನ್ನಾವರ: ಹೊನ್ನಾವರ ವಕೀಲರ ಸಂಘದ ಸದಸ್ಯರು ವಕೀಲರ ದಿನಾಚರಣೆಯ ಪ್ರಯುಕ್ತ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶಿಸಿದರು. ವಕೀಲರ ದಿನಾಚರಣೆಯಂದೇ ಧರ್ಮ, ಕಾನೂನು, ಕಟ್ಟಲೆ ಆಚರಣೆಯ ಸುಧನ್ವನ ಜೀವನವನ್ನು ಬಿಂಬಿಸುವ ಯಕ್ಷ ಪ್ರದರ್ಶನ ಅರ್ಥಪೂರ್ಣವಾಗಿತ್ತು. ಸುಧನ್ವಾರ್ಜುನ ಪ್ರಸಂಗವು ಉಮೇಶ ಭಟ್ ಬಾಡ ಹಾಗೂ ಗೋಪಾಲಕೃಷ್ಣ ಮಂಜ ಭಾಗ್ವತ ಕಡತೋಕ ಇವರ ಭಾಗ್ವತಿಕೆಯಲ್ಲಿ ಗಜಾನನ ಹೆಗಡೆ ಮೂರುರು ಚಂಡೆ, ನರಸಿಂಹ ಹೆಗಡೆ ಮೂರುರು ಮೃದಂಗ ಹಿಮ್ಮೇಳದಲ್ಲಿ ಮೂಡಿ ಬಂತು. ಯಕ್ಷ … [Read more...] about ವಕೀಲರ ದಿನಾಚರಣೆಯ ಪ್ರಯುಕ್ತ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ
ಹಾಗೂ
ಕರಾವಳಿ ಉತ್ಸವದ ಪೋಸ್ಟರ್ ಬಿಡುಗಡೆ
ಕಾರವಾರ: ಡಿಸೆಂಬರ್ 8, 9, ಮತ್ತು 10 ರಂದು ನಡೆಯುವ ಕರಾವಳಿ ಉತ್ಸವದ ಪೋಸ್ಟರ್‍ನ್ನು ಶಾಸಕ ಸತೀಶ್ ಸೈಲ್ ಭಾನುವಾರ ಬಿಡುಗಡೆ ಮಾಡಿದರು. ಕರಾವಳಿ ಉತ್ಸವದ ಕಾರ್ಯಕ್ರಮಗಳ ವಿವರ ಇಂತಿದೆ.* ಡಿಸೆಂಬರ್ 8 ಮಧ್ಯಾಹ್ನ 2.30ಕ್ಕೆ ಜಿಲ್ಲಾ ರಂಗಮಂದಿರದಲ್ಲಿ ಗಂಗಾವತಿ ಪ್ರಾಣೇಶ್ ಹಾಗೂ ತಂಡದವರಿಂದ ನಗೆ ಹಬ್ಬ, 3ಕ್ಕೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬೀಚ್ ವಾಲಿಬಾಲ್, ಮಯೂರವರ್ಮ ವೇದಿಕೆಯಲ್ಲಿ ಸಂಜೆ ಶಾಲ್ಮಲಿ ಕೋಲ್ಗಡೆಯವರಿಂದ ಸಂಗೀತ ಸಂಜೆ.* ಡಿಸೆಂಬರ್ … [Read more...] about ಕರಾವಳಿ ಉತ್ಸವದ ಪೋಸ್ಟರ್ ಬಿಡುಗಡೆ
ವಿಜ್ರಂಭಣೆಯಿಂದ ನಡೆದ ‘ ದತ್ತ ಜಯಂತ್ಯುತ್ಸವ’ ಕಾರ್ಯಕ್ರಮ
ಹೊನ್ನಾವರ,ಪಟ್ಟಣ ದುರ್ಗಾಕೇರಿಯ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.) ಶ್ರೀ ಕ್ಷೇತ್ರ ಬಂಗಾರಮಕ್ಕಿ , ಇದರ ಆಡಳಿತಕ್ಕೊಳಪಟ್ಟಿರುವ ಉತ್ತರ ಕನ್ನಡದ ಹೊನ್ನಾವರದ ದುರ್ಗಾಕೇರಿಯ ದತ್ತಮಂದಿರದಲ್ಲಿ ‘ ದತ್ತ ಜಯಂತ್ಯುತ್ಸವ’ ಕಾರ್ಯಕ್ರಮವು ಬಹಳ ವಿಜ್ರಂಭಣೆಯಿಂದ ಜರುಗಿತು. ಮಾರ್ಗಶಿರ ಶುದ್ಧ ಹುಣ್ಣಿಮೆಯಂದು ಬಂಗಾರಮಕ್ಕಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ಭಜನೆಯೊಂದಿಗೆ … [Read more...] about ವಿಜ್ರಂಭಣೆಯಿಂದ ನಡೆದ ‘ ದತ್ತ ಜಯಂತ್ಯುತ್ಸವ’ ಕಾರ್ಯಕ್ರಮ
ಕರಾವಳಿ ಉತ್ಸವದ ಅಂಗವಾಗಿ ಸಾರ್ವಜನಿಕರಲ್ಲಿ ಏಡ್ಸ್ ಬಗ್ಗೆ ಜನ ಜಾಗೃತಿ ಹಾಗೂ ರಕ್ತದಾನದ ಅರಿವು ಮೂಡಿಸಲು ಪಟ್ಟಣದಲ್ಲಿ ನಡೆದ ಸೈಕಲ್ ಜಾಥಾ
ಹಳಿಯಾಳ: ಸಾರ್ವಜನಿಕರಲ್ಲಿ ಏಡ್ಸ್ ಬಗ್ಗೆ ಜನ ಜಾಗೃತಿ ಹಾಗೂ ರಕ್ತದಾನದ ಅರಿವು ಮೂಡಿಸಲು ತಾಲೂಕಾಡಳಿತ, ವಿವಿಧ ಇಲಾಖೆಗಳು, ಸಂಘ-ಸಂಸ್ಥೆ, ಶಾಲಾ ವಿದ್ಯಾರ್ಥಿಗಳಿಂದ ಪಟ್ಟಣದಲ್ಲಿ “ಸೈಕಲ್ ಜಾಥಾ ನಡೆಸಲಾಯಿತು ಜಾಥಾಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಚಾಲನೆ ನೀಡಿದರು. ಕರಾವಳಿ ಉತ್ಸವದ ಅಂಗವಾಗಿ ಈ ಕಾರ್ಯಕ್ರಮಗಳು ನಡೆಯುತ್ತಿದ್ದು ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಪ್ರಾರಂಭವಾದ ಸೈಕಲ್ ಜಾಥಾ ನಗರದ ಪೇಟೆ ಬೀದಿ ಮುಖಾಂತರ ತಿಲಕ ರಸ್ತೆ, ಸಂಗೋಳ್ಳಿ … [Read more...] about ಕರಾವಳಿ ಉತ್ಸವದ ಅಂಗವಾಗಿ ಸಾರ್ವಜನಿಕರಲ್ಲಿ ಏಡ್ಸ್ ಬಗ್ಗೆ ಜನ ಜಾಗೃತಿ ಹಾಗೂ ರಕ್ತದಾನದ ಅರಿವು ಮೂಡಿಸಲು ಪಟ್ಟಣದಲ್ಲಿ ನಡೆದ ಸೈಕಲ್ ಜಾಥಾ
ಡಿಸೆಂಬರ 9 ರಂದು ಮಾಲಾದೇವಿ ಮೈದಾನದಲ್ಲಿ ಶ್ವಾನ ಪ್ರದರ್ಶನ
ಕಾರವಾರ: ಕರಾವಳಿ ಉತ್ಸವ 2017 ಅಂಗವಾಗಿ ಡಿಸೆಂಬರ 9 ರಂದು ಮಾಲಾದೇವಿ ಮೈದಾನದಲ್ಲಿ "ಶ್ವಾನ ಪ್ರದರ್ಶನ"ವನ್ನು ಹಮ್ಮಿಕೊಳ್ಳಲಾಗಿದೆ ಅಂದು "ಶ್ವಾನ ಪ್ರದರ್ಶನ"ದ ಪ್ರಾಂಗಣದಲ್ಲಿ ನಿರ್ಮಿಸಲಾಗುವ ಸ್ಟಾಲ್‍ಗಳನ್ನು ಉಚಿತವಾಗಿ ನೀಡಲಾಗುವದು. ಶ್ವಾನಗಳ ಔಷಧಿ, ಆಹಾರ ಮತ್ತು ಸಕಲಕರಣೆಗಳ ಉತ್ಪಾದಕರು/ವಿತರಕರು ಹಾಗೂ ಶ್ವಾನ ತಳಿಗಳ ಅಭಿವೃಧ್ಧಿ ಕಾರ್ಯದಲ್ಲಿ ತೊಡಗಿಕೊಂಡವರು ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿ ಶ್ವಾನಗಳಿಗೆ ಉಪಯುಕ್ತವಾಗುವ ಔಷಧಿ, ಆಹಾರ, ಸಲಕರಣೆ ಮತ್ತು ವಿವಿಧ … [Read more...] about ಡಿಸೆಂಬರ 9 ರಂದು ಮಾಲಾದೇವಿ ಮೈದಾನದಲ್ಲಿ ಶ್ವಾನ ಪ್ರದರ್ಶನ