ಕಾರವಾರ: ಕರಾವಳಿ ಉತ್ಸವ 2017 ಅಂಗವಾಗಿ ಡಿಸೆಂಬರ 9 ರಂದು ಮಾಲಾದೇವಿ ಮೈದಾನದಲ್ಲಿ “ಶ್ವಾನ ಪ್ರದರ್ಶನ”ವನ್ನು ಹಮ್ಮಿಕೊಳ್ಳಲಾಗಿದೆ
ಅಂದು “ಶ್ವಾನ ಪ್ರದರ್ಶನ”ದ ಪ್ರಾಂಗಣದಲ್ಲಿ ನಿರ್ಮಿಸಲಾಗುವ ಸ್ಟಾಲ್ಗಳನ್ನು ಉಚಿತವಾಗಿ ನೀಡಲಾಗುವದು. ಶ್ವಾನಗಳ ಔಷಧಿ, ಆಹಾರ ಮತ್ತು ಸಕಲಕರಣೆಗಳ ಉತ್ಪಾದಕರು/ವಿತರಕರು ಹಾಗೂ ಶ್ವಾನ ತಳಿಗಳ ಅಭಿವೃಧ್ಧಿ ಕಾರ್ಯದಲ್ಲಿ ತೊಡಗಿಕೊಂಡವರು ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿ ಶ್ವಾನಗಳಿಗೆ ಉಪಯುಕ್ತವಾಗುವ ಔಷಧಿ, ಆಹಾರ, ಸಲಕರಣೆ ಮತ್ತು ವಿವಿಧ ಬಗೆಯ ಶ್ವಾನಗಳ ತಳಿಗಳು ಕುರಿತು ಹೆಚ್ಚಿನ ಪ್ರಚಾರ ಮಾಡಿ ಶ್ವಾನಗಳ ಮಾಲೀಕರಿಗೆ ಮಾಹಿತಿ ನೀಡುವುದರ ಮೂಲಕ “ಶ್ವಾನ ಪ್ರದರ್ಶನ”ವನ್ನು ಯಶಸ್ವಿಗೊಳಿಸಬೇಕೆಂದು ಕರಾವಳಿ ಉತ್ಸವ 17 ಶ್ವಾನ ಪ್ರದರ್ಶನ ಸಮಿತಿಯವರು ಕೋರಿದ್ದಾರೆ.
Leave a Comment