ಹಳಿಯಾಳ: ತಾಲೂಕಿನ ಕೆಲವು ಬೆರಳೆಣಿಕೆಯಷ್ಟು ಗ್ರಾಮಗಳಲ್ಲಿ ಮಾರಣಾಂತಿಕ ಡೆಂಘ್ಯು ಜ್ವರ ಕಾಣಿಸಿಕೊಳ್ಳುತ್ತಿದ್ದು ಹಳಿಯಾಳ ತಾಲೂಕಾ ಆಸ್ಪತ್ರೆ ವೈದ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ಹಿರಿಯ ವೈಧ್ಯ ಡಾ|| ಬಿ.ವಿ.ಮುಡಬಾಗಿಲ್ ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಅವರು ತಾಲೂಕಿನ ನೀರಲಗಾ, ಯಡೋಗಾ, ಸಾಂಬ್ರಾಣಿ, ಕೇರವಾಡ, ಮದ್ನಳ್ಳಿ ಗ್ರಾಮಗಳಲ್ಲಿ ಡೆಂಘ್ಯು ಜ್ವರದ ಲಕ್ಷಣ … [Read more...] about ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿದೆ ಡೆಂಘ್ಯು ಮಹಾಮಾರಿ- ಮುನ್ನೆಚ್ಚರಿಕೆ ವಹಿಸುವಂತೆ ತಾಲೂಕಾ ವೈದ್ಯಾಧಿಕಾರಿಗಳಿಗೆ -ಹಿರಿಯ ವೈದ್ಯ ಡಾ.ಮುಡಬಾಗಿಲ್ ಸಲಹೆ
Trending
ಬಸ್ ನಿಲ್ದಾಣದ ಎದುರಿನ ಕಾಮಗಾರಿ ನಿಯಮಾನುಸಾರ ನಡೆದಿದೆ- ಮುಖ್ಯಾಧಿಕಾರಿ ಕೇಶವ ಚೌಗಲೇ
ಹಳಿಯಾಳ:- ಪಟ್ಟಣದ ಬಸ್ ನಿಲ್ದಾಣದ ಎದುರು ಪುರಸಭೆ ನಿರ್ಮಿಸುತ್ತಿರುವ 14 ಅಂಗಡಿಗಳ ನಿರ್ಮಾಣ ಕಾಮಗಾರಿ ನಿಯಮ ಬದ್ದವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಹೇಳಿದ್ದಾರೆ. ಪುರಸಭೆಯ ಈ ಕಾಮಗಾರಿ ವಿರೋಧಿಸಿ ಕೂಡಲೇ ಕಾಮಗಾರಿ ನಿಲ್ಲಿಸುವಂತೆ ವಿವಿಧ ಸಂಘಟನೆಯವರು, ಸಾರ್ವಜನಿಕರು ಸಲ್ಲಿಸಿದ ಮನವಿಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೇಗೆ ಉತ್ತರಿಸಿದ ಮುಖ್ಯಾಧಿಕಾರಿಯವರು ಕಳೆದ 4 ವರ್ಷಗಳ ಹಿಂದೆ ಬಸ್ ನಿಲ್ದಾಣ ಎದುರಿನ ರಸ್ತೆ ಅಗಲಿಕರಣಕ್ಕಾಗಿ ಹಳೆ ಬಸ್ … [Read more...] about ಬಸ್ ನಿಲ್ದಾಣದ ಎದುರಿನ ಕಾಮಗಾರಿ ನಿಯಮಾನುಸಾರ ನಡೆದಿದೆ- ಮುಖ್ಯಾಧಿಕಾರಿ ಕೇಶವ ಚೌಗಲೇ
ಬಸ್ ನಿಲ್ದಾಣದ ಎದುರಿಗೆ ಪುರಸಭೆಯಿಂದ ನಡೆದಿರುವ ಅವೈಜ್ಞಾನಿಕ ಕಾಮಗಾರಿ ಕೂಡಲೇ ನಿಲ್ಲಿಸುವಂತೆ ವಿವಿಧ ಸಂಘಟನೆಳಿಂದ ಆಗ್ರಹ
ಹಳಿಯಾಳ:- ಪಟ್ಟಣದ ಬಸ್ ನಿಲ್ದಾಣದ ಎದುರಿನ ಇಕ್ಕಟ್ಟಾದ ಚಿಕ್ಕ ಸ್ಥಳದಲ್ಲಿ ಗಟಾರವನ್ನು ಬಳಸಿ ನಿಯಮಾವಳಿಯನ್ನು ಗಾಳಿಗೆ ತೂರಿ ಪುರಸಭೆಯಿಂದ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿರುವ ಅಂಗಡಿ ಮಳಿಗೆ ಕಾಮಗಾರಿಯನ್ನು ತಕ್ಷಣ ಕೈಬಿಡಬೇಕೆಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನೀಕರು ಆಗ್ರಹಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಹಿರಿಯ ನಾಗರಿಕರ ವೇದಿಕೆ, ಆಟೋ ರೀಕ್ಷಾ ಸಂಘ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನೀಕರು ಇಲ್ಲಿಯ ಪುರಸಭೆಗೆ … [Read more...] about ಬಸ್ ನಿಲ್ದಾಣದ ಎದುರಿಗೆ ಪುರಸಭೆಯಿಂದ ನಡೆದಿರುವ ಅವೈಜ್ಞಾನಿಕ ಕಾಮಗಾರಿ ಕೂಡಲೇ ನಿಲ್ಲಿಸುವಂತೆ ವಿವಿಧ ಸಂಘಟನೆಳಿಂದ ಆಗ್ರಹ
ಮರಾಠಾ ಸಮುದಾಯದ ನಾಯಕ, ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ- ಮರಾಠಾ ಪರಿಷತ್ ಆಗ್ರಹ
ಹಳಿಯಾಳ: ಕಾಂಗ್ರೇಸ್ ಪಕ್ಷದ ಸರ್ಕಾರ ಸ್ಥಾಪನೆಯಾದಾಗ ಮರಾಠಾ ಸಮುದಾಯಕ್ಕೆ ಸಾಮಾಜೀಕ, ರಾಜಕೀಯ ಪ್ರಾತಿನಿಧ್ಯ ಈವರೆಗೆ ಸಿಕ್ಕಿಲ್ಲ ಕಾರಣ ಈಗಲಾದರೂ ಸಮ್ಮಿಶ್ರ ಸರ್ಕಾರದಲ್ಲಿ ಬಹುಸಂಖ್ಯಾತ ಮರಾಠಾ ಸಮುದಾಯದ ನಾಯಕ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ಆಗ್ರಹಿಸಿದೆ. ಈ ಕುರಿತು ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಪತ್ರ ರವಾನಿಸಿರುವ … [Read more...] about ಮರಾಠಾ ಸಮುದಾಯದ ನಾಯಕ, ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ- ಮರಾಠಾ ಪರಿಷತ್ ಆಗ್ರಹ
ಪರೇಶ ಮೇಸ್ತನ ಸಾವಿನ ಶೀಘ್ರ ತನಿಖೆಗೆ ಒತ್ತಾಯಿಸಿ ದಿ.10 ರಂದು ಕಾಂಗ್ರೆಸ್‍ನಿಂದ ಉಪವಾಸ ಸತ್ಯಾಗ್ರಹ
ಹೊನ್ನಾವರ : ಕೇಂದ್ರದ ಮೋದಿ ಸರಕಾರದ ಅಧೀನದಲ್ಲಿರುವ ಸಿ.ಬಿ.ಐ.ಗೆ ಪರೇಶ ಮೇಸ್ತನ ಸಾವಿನ ತನಿಖೆಯ ಜವಾಬ್ದಾರಿ ನೀಡಿದ್ದಲ್ಲಿ ಕೇವಲ 7 ದಿನಗಳಲ್ಲಿ ನ್ಯಾಯ ಕೊಡಿಸುವುದಾಗಿ ಮುಗ್ಧ ಜನರಿಗೆ ಪ್ರಚೋದನೆ ನೀಡಿದ್ದ ಬಿ.ಜೆ.ಪಿ. ಮುಖಂಡರುಗಳು 7ತಿಂಗಳಾದರೂ ತನಿಖೆಯ ಬಗ್ಗೆ ಸೊಲ್ಲೇತ್ತದಿರುವುದನ್ನು ಖಂಡಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಮೂರು ಹಂತದಲ್ಲಿ ಹೋರಾಟ ನಡೆಸಲಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ತಿಳಿಸಿದ್ದಾರೆ. ಅವರು … [Read more...] about ಪರೇಶ ಮೇಸ್ತನ ಸಾವಿನ ಶೀಘ್ರ ತನಿಖೆಗೆ ಒತ್ತಾಯಿಸಿ ದಿ.10 ರಂದು ಕಾಂಗ್ರೆಸ್‍ನಿಂದ ಉಪವಾಸ ಸತ್ಯಾಗ್ರಹ




