ಹೊನ್ನಾವರ:
ತಾಲೂಕಿನ ಕರ್ಕಿ ಗ್ರಾಮದ ಪಾವಿನಕುರ್ವಾ ಕಡಲತೀರದಲ್ಲಿ `ಪಾವಿನಕುರ್ವಾ ಕಡಲ ಉತ್ಸವ’ ಏಪ್ರಿಲ್ 14 ಮತ್ತು 15 ರಂದು ನಡೆಯಲಿದೆ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ ತುಕಾರಾಮ ನಾಯ್ಕ
ತಿಳಿಸಿದರು.
ನಂತರ ಸಮಿತಿಯಿಂದ ಉತ್ಸವದ ಲಾಂಚನ ಬಿಡುಗಡೆಗೊಳಿಸಲಾಯಿತು. ಸಮಿತಿಯ ಅಧ್ಯಕ್ಷ ಚಿದಂಬರ ನಾಯ್ಕ ಕಾರ್ಯಕ್ರಮದ ವಿವರ ನೀಡಿದರು. ಏ. 14 ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕಾ ಮಟ್ಟದ ಆವ್ಹಾನಿತ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಸಂಜೆ 6 ಗಂಟೆಗೆ ಸ್ಥಳಿಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಸ್ಥಳಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ, ಅಂತಾರಾಷ್ಟ್ರೀಯ ಮಟ್ಟದ ಕರಾಟೆಪಟು ಶ್ರೀಶಾ ಹರಿಕಾಂತಳಿಂದ ಕರಾಟೆ ಪ್ರದರ್ಶನ, ಉಡುಪಿಯ ಭಾರ್ಗವಿ ಕಲಾತಂಡದವರಿಂದ ಮನರಂಜನಾ ಕಾರ್ಯಕ್ರಮ, ಬೆಂಗಳೂರು ತಂಡದಿಂದ ಹಿಪ್ಹಾಪ್ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.
ಏ. 15 ರಂದು ಸಂಜೆ 4 ಗಂಟೆಗೆ ತಾಲೂಕು ಮಟ್ಟದ ಗಾಳಿಪಟ ಸ್ಪರ್ಧೆ, ಸಂಜೆ 6 ಗಂಟೆಗೆ ಸ್ಥಳಿಯ ಪ್ರತಿಭೆಗಳಿಂದ ಮನರಂಜನೆ ಕಾರ್ಯಕ್ರಮ, ಸುಚಿತ್ರಾ ಕೊಳಗದ್ದೆ ಇವಳಿಂದ ಯೋಗ ಪ್ರದರ್ಶನ, ಯೋಧರಿಗೊಂದು ನಮನ ಕಾರ್ಯಕ್ರಮ, ಭಟ್ಕಳದ ಝೇಂಕಾರ್ ಮೆಲೋಡೀಸ್ ತಂಡದವರಿಂದ ಮನರಂಜನಾ ಕಾರ್ಯಕ್ರಮ, ಸಿರ್ಸಿಯ ಸ್ಮಾರ್ಟ್ ಗ್ರೂಫ್ ನವರಿಂದ ನೃತ್ಯ ಪ್ರದರ್ಶನ, `ಬಿಗ್ಬಾಸ್’ ಖ್ಯಾತಿ ಸಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಎರಡು ದಿನ ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕರಾದ ಶಾರದಾ ಶೆಟ್ಟಿ, ಮಂಕಾಳ ವೈದ್ಯ, ಉದ್ಯಮಿ ಸುಬ್ರಾಯ ವಾಳ್ಕೆ, ಉದ್ಯಮಿ ರವಿಕುಮಾರ ಶೆಟ್ಟಿ, ಬಿಜೆಪಿ ಮುಖಂಡ ಸೂರಜ ನಾಯ್ಕ ಸೋನಿ, ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಉತ್ಸವ ಸಮಿತಿಯ ದೀಪಕ ನಾಯ್ಕ, ಚಂದ್ರು ಮೇಸ್ತ, ಸಂತೋಷ ನಾಯ್ಕ, ಜನಾರ್ಧನ ವಾಮನ ನಾಯ್ಕ, ದರ್ಶನ ನಾಯ್ಕ, ದಾಮೋದರ ಎಸ್. ನಾಯ್ಕ, ಹರೀಶ ಡಿ. ನಾಯ್ಕ, ರವೀಂದ್ರ ಮೇಸ್ತ ಇತರರು ಇದ್ದರು.
Leave a Comment