ಕಾರವಾರ:
ಮೇ 28 ರಂದು ಧಾರವಾಡದಲ್ಲಿ ರಾಜ್ಯ ಮಟ್ಟದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ ನೇಮಕಾತಿಗಾಗಿ ಬೃಹತ್ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡದ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ನಾಗರಾಜ ಎಚ್.ಎನ್ ಲಿಂಗಸೂಗೂರು ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಅರ್ಹತೆ ಇರುವ ಅಭ್ಯರ್ಥಿಗಳು ಸರಿಯಾಗಿ ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಸರಕಾರಿ ನೌಕರಿಯೇ ಸೂಕ್ತ ಎಂಬ ಮನೋಭಾವನೆಯಿಂದ ಬಹಳಷ್ಟು ಅಭ್ಯರ್ಥಿಗಳು ನೌಕರಿಗಾಗಿ ಕಾಯುತ್ತಿದ್ದಾರೆ. ಇಂತವರಿಗೆ ಪಯಾರ್ಯ ವ್ಯವಸ್ಥೆಯ ಬಗ್ಗೆ ತಿಳಿಸಲು ಈ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸರಕಾರದ ಅನುಮತಿ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸುವ ಪ್ರಯತ್ನ ಇದಾಗಿದ್ದು, ಪೂರ್ವ ಪ್ರಾಥಮಿಕ ಶಾಲೆಗಳು, ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು, ಕಲಾ ವಾಣಿಜ್ಯ ವಿಜ್ಞಾನ ವಿಭಾಗದ ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು, ಡಿಎಡ್, ಬಿಎಡ್ ಮಹಾ ವಿದ್ಯಾಲಯಗಳು, ಪ್ಯಾರಾ ಮೆಡಿಕಲ್, ನರ್ಸಿಂಗ್, ಐಟಿಐ, ಡಿಪೆÇ್ಲೀಮಾ ಕಾಲೇಜು ಇನ್ನಿತರ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದರು.
ಮೇಳವು ಧಾರವಾಡದ ಭಾರತ್ ಹೈಸ್ಕೂಲ್, ಶಿವಾಜಿ ಸರ್ಕಲ್, ಸಿಬಿಟಿ ಹತ್ತಿರ ನಡೆಯಲಿದೆ. ಮೇ 28 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜರುಗಲಿದೆ. ಆಸಕ್ತ ಅಭ್ಯರ್ಥಿಗಳು ಮೊಬೈಲ್ ನಂ.7878358565 ಗೆ ಮಿಸ್ಡ್ ಕಾಲ್ ನೀಡಿ ಹೆಸರು ನೊಂದಾಯಿಸಬಹುದು ಎಂದು ವಿವರಿಸಿದರು.
Leave a Comment