ಕಾರವಾರ:
ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಜೂನ್ 2ರಿಂದ 4ರವರೆಗೆ ದಾಂಡೇಲಿ ಕಾಳಿ ನದಿಯಲ್ಲಿ ಕಯಾಕ್ ಫೆಸ್ಟಿವಲ್ ಆಯೋಜಿಸಲಾಗಿದೆ.
ಫೆಸ್ಟಿವಲ್ ಅಂಗವಾಗಿ ವಿವಿಧ ವಿಭಾಗಗಳಲ್ಲಿ ಕಯಾಕಿಂಗ್ ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 15ಸಾವಿರ ಅಮೆರಿಕನ್ ಡಾಲರ್ ಬಹುಮಾನ ಮೊತ್ತವನ್ನು ನಿಗದಿಪಡಿಸಲಾಗಿದೆ. ಕಯಾಕಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರಿಗಾಗಿ ಆನ್ಲೈನ್ ನೋಂದಣಿ ಪ್ರಾರಂಭಿಸಲಾಗಿದ್ದು, https://www.kalikayakfestival.com/ ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸಬಹುದು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಹಾಗೂ ಗುಡ್ವೇವ್ ಎಡ್ವೆಂಚರ್ ಸಂಸ್ಥೆಯ ಸಹಯೋಗದಲ್ಲಿ ಕಯಾಕ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ.
ಸ್ಪರ್ಧೆಗಳು ಮೂರು ವಿಭಾಗದಲ್ಲಿ ನಡೆಯಲಿವೆ. ಪ್ರಾರಂಭಿಕ ಕಯಾಕಿಂಗ್ ಹಂತ, ಮಧ್ಯಮ ಕಯಾಕಿಂಗ್ ಹಂತ ಹಾಗೂ ವೃತ್ತಿಪರ ಕಯಾಕಿಂಗ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಕಾರ್ಯಕ್ರಮ ಸಂಘಟಕರು ಸ್ಪರ್ಧಾಗಳ ಕಯಾಕಿಂಗ್ ಕ್ಷಮತೆಯನ್ನು ಪರಿಶೀಲಿಸಿದ ಬಳಿಕ ಸ್ಪರ್ಧೆಯ ವಿಭಾಗವನ್ನು ನಿಗದಿಪಡಿಸುವರು. ಪ್ರಾರಂಭಿಕ ಹಂತದಲ್ಲಿ ಭಾಗವಹಿಸುವವರು ಪ್ರವೇಶ ಶುಲ್ಕ ರೂ. 500, ಮಧ್ಯಮ ಹಂತದವರಿಗೆ ರೂ.2500 ಹಾಗೂ ವೃತ್ತಿಪರ ಹಂತದಲ್ಲಿ ಭಾಗವಹಿಸಲು ಇಚ್ಚಿಸುವ ಸ್ಪರ್ಧಾಳುಗಳಿಗೆ ರೂ.3 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
Leave a Comment