ಕಾರವಾರ:
ಜಿಮ್ಗೆ ತೆರೆಳಿದ ಯುವಕ ನಾಪತ್ತೆಯಾಗಿರುವ ಬಗ್ಗೆ ನಗರ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಡಿಬಾಗದ ನಿವಾಸಿ ಗುಲ್ಫಾಮ್ ಶೇಖ್ (19) ನಾಪತ್ತೆಯಾದ ಯುವಕ. ಈತ ಮಂಗಳವಾರ ನಗರದ ಪಿಕಳೆ ಆಸ್ಪತ್ರೆ ಸಮೀಪದ ಜಿಮ್ಗೆ ತೆರಳಿದ್ದನು. ಆತನನ್ನು ಸ್ವಂತ ಅವರ ತಂದೆ ತನ್ನ ಆಟೋದಲ್ಲಿ ಜಿಮ್ನ ಎದುರಿನ ರಸ್ತೆ ಬಳಿ ಬಿಟ್ಟು ಬಂದಿದ್ದರು. ಆದರೆ ಗುಲ್ಫಾನ್ ಜಿಮ್ಗೆ ತೆರಳದೇ ಮನೆಗೂ ಬಾರದೇ ಕಾಣಿಯಾಗಿದ್ದಾನೆ. ಕುಟುಂಬದವರು ಸ್ನೇಹಿತರ ಹಾಗೂ ಸಂಬಂಧಿ ಮನೆಯಲ್ಲಿ ಹುಡುಕಿದರೂ ಪತ್ತೆಯಾಗದ ಕಾರಣ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Leave a Comment