ಯಲ್ಲಾಪುರ: ಪಟ್ಟಣದ ಪ್ರತಿಷ್ಠಿತ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ೬೦ ವರ್ಷಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮಹಿಳಾ ಪ್ರಾಂಶುಪಾಲರಾಗಿ ವಾಣಿಶ್ರೀ ಈಶ್ವರ ಹೆಗಡೆ ಅವರು ಸೋಮವಾರ ಅಧಿಕಾರವಹಿಸಿಕೊಂಡರು

೨೦೧೩ರಲ್ಲಿ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಜೀವಶಾಸ್ತç ಉಪನ್ಯಾಸಕಿಯಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ ಅವರು ಇದೀಗ ಪ್ರಾಂಶುಪಾಲರಾಗಿದ್ದ ಜಯರಾಮ ಗುನಾಗಾ ನಿವೃತ್ತರಾದ ಹಿನ್ನಲೆಯಲ್ಲಿ ಪ್ರಾಚಾರ್ಯರ ಹುದ್ದೆಗೆ ಬಡ್ತಿ ಹೊಂದಿದ್ದಾರೆ.
ಮೂಲತಃ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ವರನಕೇರಿಯವರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಳ್ಳಂಕಿಯಲ್ಲಿಯೂ ಪ್ರೌಢಶಾಲಾ ಶಿಕ್ಷಣವನ್ನು ಹೊನ್ನಾವರದ ಪ್ರತಿಷ್ಠಿತ ನ್ಯೂ ಇಂಗ್ಲೀಷ್ ಹೈಸ್ಕೂಲ್ನಲ್ಲಿ ವ್ಯಾಸಂಗ ಮಾಡಿದ್ದಾರೆ.
ಪದವಿಪೂರ್ವ ಶಿಕ್ಷಣವನ್ನು ಮೂಲ್ಕಿಯ ವಿಜಯಾ ಕಾಲೇಜು, ಬಿಎಸ್ಸಿ ಪದವಿಯನ್ನು ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲೂ, ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಪ್ರೌಢಶಾಲಾ ದಿನಗಳಿಂದಲೂ ಆದರ್ಶ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿದವರಾಗಿದ್ದಾರೆ.
ಪ್ರೌಢಶಾಲೆ, ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿ ಹಲವಾರು ಜಿಲ್ಲಾ ಹಾಗೂ ವಿಶ್ವವಿದ್ಯಾನಿಲಯ ಮಟ್ಟದ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ರಾಜ್ಯಮಟ್ಟದ ನಾಟಕ ಅಕಾಡೆಮಿಯಿಂದ “ಅತ್ಯುತ್ತಮ ನಟಿ” ಪ್ರಶಸ್ತಿ ಪಡೆದಿದ್ದಾರೆ.
೨೦೦೬ರಲ್ಲಿ ಡಿಡಿ ಚಂದನದಲ್ಲಿ ಪ್ರಸಾರವಾದ ೨ ಟೆಲಿಫಿಲ್ಮ್ಗಳಲ್ಲೂ ನಟಿಸಿದ್ದಾರೆ. ೨೦೧೪ರಲ್ಲಿ ಧಾರವಾಡ ವಿಶ್ವವಿದ್ಯಾನಿಲಯದಿಂದ ಬಿ.ಇಡಿ ಪದವಿಯನ್ನು ಪಡೆದಿದ್ದು ಜು.೨೫ರಂದು ನಡೆದ ಕೆ-ಸೆಟ್ ಪರೀಕ್ಷೆಯನ್ನೂ ಬರೆದಿದ್ದು ಫಲಿತಾಂಶ ಬರಬೇಕಿದೆ. ಈಗಾಗಲೇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕಿಯಾಗಿದ್ದರು. ಅವರೇ ಪ್ರಾಂಶುಪಾಲರಾಗಿದ್ದು ವಿದ್ಯಾರ್ಥಿಗಳಲ್ಲಿ ಸಂತಸ ಹೆಚ್ಚಿದೆ.
Yellapura news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ
https://chat.whatsapp.com/D0Ry5Povwke1s77ibSLq4A
Leave a Comment