• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ

June 7, 2017 by Gaju Gokarna Leave a Comment

ಹೊನ್ನಾವರ:
ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲಕೋಡ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಲೋಕದ ಸಮಸ್ತ ರಸಿಕರ ಮನ ಸೂರೆಗೊಳ್ಳುವ ಹಾಗೆ ತಮ್ಮ ಸುಮಧುರವಾದ ಮದ್ದಲೆ-ಚಂಡೆ ವಾದನದ ನಾದ ವೈಖರಿಯಿಂದ ಯಕ್ಷಗಾನ ಕಲಾಲೋಕದ ಅಸಂಖ್ಯ ಕಲಾವಿದರ, ಕಲಾಭಿಮಾನಿಗಳ ಮನಸೂರೆಗೊಂಡವರು ಮಂಜುನಾಥ ಬಂಡಾರಿಯವರು. ಯಕ್ಷರಂಗಕ್ಕೆ ಕರ್ಕಿಯ ಭಂಡಾರಿ ಮನೆತನದವರ ಕೊಡುಗೆ ಅತ್ಯಮೂಲ್ಯವಾಗಿದೆ ಹಲವಾರು ವರ್ಷಗಳ ಹಿಂದೆ ಕಾಣಿಸಿಕೊಂq ಭಂಡಾರಿಯವರ ತೀವ್ರ ಕೈ ನೋವಿನಿಂದಾಗಿ ಅವರ ಕುಟುಂಬಕ್ಕೆ ಆಧಾರವಾಗಿದ್ದ ಮದ್ದಲೆ ನುಡಿಸುವಿಕೆ, ವಿಗ್ರಹಗಳ ತಾಯಾರಿಕೆಯೂ ಅಸಾಧ್ಯವಾಗಿದೆ. ಹೀಗಾಗಿ ಅವರ ಕುಟುಂಬ ನಿರ್ವಹಣೆಗೆ ಬೇಕಾಗುವ ಸಂಪಾದನೆಯೂ ಶೂನ್ಯವಾಗಿದೆ. ಸುಮಾರು ಏಳು ವರ್ಷಗಳಿಂದ ದುಡಿಯುವ ಕೈಗಳನ್ನು ಉಳಿಸಿಕೊಳ್ಳುವುದಕ್ಕೆ ಲಕ್ಷಾಂತರ ರೂ. ಗಳನ್ನು ವ್ಯಯಿಸಿದರೂ ಫಲಕಾರಿಯಾಗಲಿಲ್ಲ. ಸುಮಾರು 35 ವರ್ಷಗಳಕಾಲ ಕಲಾಸೇವೆಯನ್ನೇ ಉಸಿರಾಗಿಸಿಕೊಂಡು ಕಲೆಯಿಂದಲೇ ಬದುಕು ಕಟ್ಟಿಕೊಂಡಿರುವ ಮಂಜುನಾಥ ಭಂಡಾರಿ ಅವರ ಬಿಕ್ಕಟ್ಟಿನ ಬದುಕಿಗೆ ಹೊಸ ಚೌಕಟ್ಟನ್ನು ನೀಡುವ ಸಲುವಾಗಿ ಎಲ್ಲರೂ ಒಂದಾಗಿ ಉದಾರ ಮನದಿಂದ ಹಮ್ಮಿಣಿ ಅರ್ಪಿಸಲಿದ್ದೇವೆ. ಕತ್ತಲೆ ತುಂಬಿದ ಅವರ ಬಾಳಿನಲ್ಲಿ ಭರವಸೆಯ ಹೊಸ ಬೆಳಕು ಹಚ್ಚಬೇಕಾಗಿದೆ ಎಂದರು.
ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ `ಮಂಜುನಾಥ ಭಂಡಾರಿ ಅವರದು ಕಲೆಯನ್ನು ಆಧರಿಸಿಕೊಂಡು ಜೀವನ ನಡೆಸುತ್ತಿರುವ ಕುಟುಂಬ. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎನ್ನುವಂತೆ ಕಳೆದ ಏಲು ವರ್ಷಗಳ ಹಿಂದೆ ಇವರ ಕೈ ಮಣಿಕಟ್ಟಿನ ನೋವು ಇವ ಬದುಕನ್ನು ಬರಡಾಗಿಸಿತು. ಈಗ ಇವರ ಕುಟುಂಬಕ್ಕೆ ಆಧಾರವಾಗಿದ್ದ ಮದ್ದಲೆಯ ನುಡಿಸುವಿಕೆ ಮತ್ತು ಮದ್ದದಲೆ ತಯಾರಿಕೆಯೂ ಇಲ್ಲ. ಭಂಡಾರಿಯವರ ಮದ್ದಲೆ ನುಡಿಸುವಿಕೆಯಿಂದ ಲಕ್ಷಾಂತರ ಯಕ್ಷಪ್ರೇಮಿಗಳ ಹೃದಯದ ಮಿಡಿತ ಹೆಚ್ಚಿಸಿರುವ ಭಂಡಾರಿಯವರ ಬದುಕು ಸಂಕಷ್ಟದಲ್ಲಿದೆ. ಇಳಿವಯಸ್ಸಿನ ತಂದೆಯ, ಪತ್ನಿಯ ಹಾಗೂ ಉಭಯ ಹೆಣ್ಣುಮಕ್ಕಳ ಭವಿಶ್ಯ ಇವರ ಹೆಗಲ ಮೇಲಿದೆ. ಹೀಗಾಗಿ ಅವರ ಜೀವನ ಒಂದಿಷ್ಟು ಸಂತಸಮಯವಾಗಿಸಲು ಜೂನ್ 11 ರಂದು ಖ್ಯಾತ ಕಲಾವಿದರಿಂದ `ಲವಕುಶ’ ಮತ್ತು `ಭದ್ರಸೇನ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಯಕ್ಷಗಾನ ಪ್ರದರ್ಶನದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರಿಯಾಗಬೇಕು. ಮಂಜುನಾಥ ಭಂಡಾರಿ ಅವರಿಗೆ ಧನಸಹಾಯ ಮಾಡಬಯಸುವ ಕಲಾಭಿಮಾನಿಗಳು ಅವರ `ಕೆಡಿಸಿಸಿ ಬ್ಯಾಂಕ್’ ಕರ್ಕಿ ಶಾಖೆಯ ಉಳಿತಾಯ ಖಾತೆ ಸಂಖ್ಯೆ 622014530596 ಇದಕ್ಕೆ ಸಂದಾಯ ಮಾಡಬಹುದು ಎಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಕಲಾವಿದ ಮಂಜುನಾಥ ಭಂಡಾರಿ, ಗಣೇಶ ಭಂಡಾರಿ ಇತರರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: 11, 4, 622014530596, honavar, ಅಭಿನಂದನಾ, ಕರ್ಕಿಯ, ಕಾರ್ಯಕ್ರಮ, ಖ್ಯಾತ, ಗಂಟೆಗೆ, ಜೂ., ಪಟ್ಟಣ, ಭಂಡಾರಿಯವರಿಗೆ, ಮಂಜುನಾಥ, ಮದ್ದಲೆಗಾರ, ಮೂಡಗಣಪತಿ, ಯಕ್ಷಗಾನ, ರಂದು, ವಿಗ್ರಹ, ಸಂಜೆ, ಸಭಾಭವ, ಸಮಾರಂಭ, ಹಾಗೂ, ಹೊನ್ನಾವರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar