ಕಾರವಾರ: ಮಾನಸಿಕ ಆರೋಗ್ಯ ಕಾನೂನುಗಳ ಸಮರ್ಪಕ ಅನುಷ್ಠಾನ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ನ್ಯಾಯಿಕ ದಂಡಾಧಿಕಾರಿ ಶಿವಕುಮಾರ ಬಿ. ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಂiÀiವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್, ಬಾಪೂಜಿ ನರ್ಸಿಂಗ್ ವಿದ್ಯಾಲಯ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ವಿವಿಧ ಸ್ವಯಂಸೇವಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ … [Read more...] about ಮಾನಸಿಕ ಆರೋಗ್ಯ ಕಾನೂನುಗಳ ಸಮರ್ಪಕ ಅನುಷ್ಠಾನ ಅಗತ್ಯ ;ಶಿವಕುಮಾರ ಬಿ.
ಚಿಕಿತ್ಸೆ
ಶಸ್ತ್ರಚಿಕಿತ್ಸಾ ತಜ್ಞರನ್ನು ನೇಮಿಸುವಂತೆ ಪಟ್ಟಣದ ರಿಕ್ಷಾಚಾಲಕರ ಸಂಘ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ
ಹೊನ್ನಾವರ : ಸರಕಾರಿ ಆಸ್ಪತ್ರೆಗೆ ಶಸ್ತ್ರಚಿಕಿತ್ಸಾ ತಜ್ಞರನ್ನು ನೇಮಿಸುವಂತೆ ಪಟ್ಟಣದ ರಿಕ್ಷಾಚಾಲಕರ ಸಂಘ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹೊನ್ನಾವರ ತಾಲೂಕಾ ಆಸ್ಪತ್ರೆ ಉತ್ತಮ ವೈದ್ಯರ ತಂಡದೊಂದಿಗೆ ಸುಸಜ್ಜಿತ ಆಸ್ಪತ್ರೆಯಾಗಿದೆ. ಆದರೆ ಕೆಲವೊಂದು ಗಂಭೀರ ನ್ಯೂನ್ಯತೆಗಳು ಎದ್ದು ಕಾಣುತ್ತಿದೆ. ಈ ಬಗ್ಗೆ ಕಳೆದ 2-3 ವರ್ಷಗಳಿಂದ ಮನವಿ ನೀಡಿದರೂ ಯಾವುದೇ ಸ್ಪಂಧನೆ ದೊರೆತಿಲ್ಲ. ತಾಲೂಕಿನ ಜನಸಂಖ್ಯೆ ಹೆಚ್ಚಾದಂತೆ ರೋಗಿಗಳ ಸಂಖ್ಯೆಯು … [Read more...] about ಶಸ್ತ್ರಚಿಕಿತ್ಸಾ ತಜ್ಞರನ್ನು ನೇಮಿಸುವಂತೆ ಪಟ್ಟಣದ ರಿಕ್ಷಾಚಾಲಕರ ಸಂಘ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ
ಎಚ್1ಎನ್1 ಮಾರಕ ಕಾಯಿಲೆ
ಕಾರವಾರ:ಜಿಲ್ಲೆಯಲ್ಲಿ ಎಚ್1ಎನ್1 ಮಾರಕ ಕಾಯಿಲೆ ಜನರನ್ನು ಭಯಭೀತರನ್ನಾಗಿಸಿದೆ. ಸೂಕ್ತ ಚಿಕಿತ್ಸೆಯ ಅಲಭ್ಯತೆ, ರೋಗ ಪತ್ತೆಗೆ ಪರೀಕ್ಷಾ ಕೇಂದ್ರವಿಲ್ಲದೆ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೂರದ ರಾಜ್ಯಗಳಲ್ಲಿ ದುಡಿಯುವ ಅಥವಾ ಪ್ರವಾಸಕ್ಕೆಂದು ತೆರಳುವವರು ಜಿಲ್ಲೆಗೆ ಎಚ್1ಎನ್1 ಕಾಯಿಲೆಯನ್ನು ಹೊತ್ತು ತರುತ್ತಿದ್ದು 2017ರಲ್ಲಿ ಈವರೆಗೆ ಸುಮಾರು 22 ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ 6 ಜನ ರೋಗ ಬಾಧಿತರು ಮೃತಪಟ್ಟಿದ್ದು ಜನರನ್ನು … [Read more...] about ಎಚ್1ಎನ್1 ಮಾರಕ ಕಾಯಿಲೆ
ಎಚ್1ಎನ್1: ಮಹಿಳೆ ಸಾವು
ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಎಚ್1ಎನ್1 ರೋಗಕ್ಕೆ ಮಹಿಳೆಯೋರ್ವಳು ಬಲಿಯಾಗಿದ್ದು, ರೋಗ ಪತ್ತೆಯಾದ ಇಬ್ಬರು ಮಕ್ಕಳನ್ನು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಭಟ್ಕಳ ತಾಲೂಕಿನ ಕರಿಕಲ್ ಗ್ರಾಮದ ಮಹಿಳೆ ನಾಗರತ್ನ ಶನಿಯಾರ ಮೊಗೇರ (35) ಮೃತಪಟ್ಟವರು. 3 ದಿನಗಳ ಹಿಂದೆ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೂ ಹೊನ್ನಾವರ ತಾಲೂಕಿನ … [Read more...] about ಎಚ್1ಎನ್1: ಮಹಿಳೆ ಸಾವು
ಕಾರು ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸಾವು; ಇಬ್ಬರಿಗೆ ಗಾಯ
ಕಾರವಾರ:ಕಾರು ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸಾವನಪ್ಪಿದ ಘಟನೆ ಹರೂರು ಸಮೀಪದ ಕುಚೇಗಾರದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮಲ್ಲಾಪುರದಿಂದ ಯಲ್ಲಾಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಕಂದಕ್ಕೆ ಬಿದ್ದಿದ್ದು,ಯಲ್ಲಾಪುರದ ನಿವಾಸಿ, ಹಾಲಿ ಕೈಗಾ ಟೌನಶಿಪ್ನಲ್ಲಿ ವಾಸವಾಗಿದ್ದ ಅನಂತ ಭಟ್ಟ ಮೃತರು. ಅನಂತ ಭಟ್ಟರ ಮಕ್ಕಳಾದ ಸುಪ್ರೀತ ಭಟ್ಟ ಹಾಗೂ ಸುನೇತ್ರ ಭಟ್ಟ ಗಾಯಗೊಂಡವರು.ಅನಂತ ಭಟ್ಟ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆ … [Read more...] about ಕಾರು ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸಾವು; ಇಬ್ಬರಿಗೆ ಗಾಯ