ಕಾರವಾರ:
ಮೂರು ದಿನಗಳಿಂದು ಸುರಿಯುತ್ತಿರುವ ಮಳೆಯಿಂದಾಗಿ ನಗರ ಜಲಾವೃಥಗೊಂಡಿದೆ. ಇದರಿಂದ ಜನರು ಪರದಾಟ ನಡೆಸಬೇಕಾಗಿದೆ.
ಪದ್ಮನಾಭನಗರ, ಕೆಚ್ಬಿ ಕಾಲೋನಿ, ಹಬ್ಬುವಾಡ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಳೆ ನೀರು ಹರಿದು ಹೋಗದೆ ಮನೆಗಳ ಮುಂದೆ, ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು. ಇಲ್ಲಿನ ಕೆಲ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ಈ ನೀರು ನುಗ್ಗುವ ಆತಂಕ ಎದುರಾಗಿತ್ತು. ಜನರು ಕೂಡ ಓಡಾಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಪದ್ಮನಾಭನಗರದಲ್ಲಿ ನೀರು ತುಂಬಿರುವದರ ಬಗ್ಗೆ ಸಾರ್ವಜನಿಕರು ನಗರಸಭೆಗೆ ದೂರು ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳು ನೀರು ಹರಿದುಹೋಗಲು ವ್ಯವಸ್ಥೆ ಕಲ್ಪಿಸಿದ್ದರು. ಇದರಿಂದ ನೀರು ನಿಧಾನವಾಗಿ ಇಳಿದು ಈ ಭಾಗದ ಜನರಲ್ಲಿದ್ದ ಆತಂಕ ದೂರಾಗುವಂತಾಯಿತು. ಆದರೆ ಕೆಚ್ಬಿ ಕಾಲೋನಿ, ಹಬ್ಬುವಾಡ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸಂಜೆವರೆಗೂ ನೀರು ತುಂಬಿಕೊಂಡಿತ್ತು. ಅಲ್ಲದೆ ಈ ಭಾಗದ ಜನರು ಮಳೆಗಾಲದ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Leave a Comment